ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ-ತಾಯಿ ವಾಪಸ್ ಪಡೆಯಬಹುದಾ? ಇಲ್ಲಿದೆ ಶಾಕಿಂಗ್ ವಿಚಾರ - Property Rights
ಮಕ್ಕಳಿಂದ ಹಿಂಸೆ, ನಿರ್ಲಕ್ಷ್ಯ ಎದುರಿಸುತ್ತಿರುವ ತಂದೆ-ತಾಯಿ ತಾವು ಕೊಟ್ಟ ಆಸ್ತಿಯನ್ನು ಹಿಂಪಡೆಯಲು ಸಾಧ್ಯವೇ? ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಹಿರಿಯರ ಹಕ್ಕುಗಳಿಗೆ ಬಲ ನೀಡಿದೆ.

- ಆಸ್ತಿ ಹಿಂಪಡೆಯುವ ಹಕ್ಕು ಹಿರಿಯರಿಗೆ
- ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
- ಹಿರಿಯರ ಹಕ್ಕು ರಕ್ಷಣೆಗೆ ಕಾನೂನು ಬೆಂಬಲ
Property Rights : ಇಂದಿನ ದಿನಗಳಲ್ಲಿ ಅನೇಕ ಹಿರಿಯರು ತಮ್ಮ ಮಕ್ಕಳಿಂದಲೇ ಹಿಂಸೆ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, 35% ಪೋಷಕರು ತಮ್ಮ ಪುತ್ರರಿಂದ ಮತ್ತು 21% ಹಿರಿಯರು ತಮ್ಮ ಸೊಸೆಯರಿಂದ ಕಿರುಕುಳ ಅನುಭವಿಸುತ್ತಿದ್ದಾರೆ.
ಈ ದುರ್ಬಲ ಪರಿಸ್ಥಿತಿ ಹಿರಿಯರ ಶಾರೀರಿಕ, ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಹಿರಿಯರ ಹಕ್ಕುಗಳ ರಕ್ಷಣೆಗೆ 2007ರಲ್ಲಿ ಕೇಂದ್ರ ಸರ್ಕಾರ “ಹಿರಿಯರ ಸಂರಕ್ಷಣೆ ಮತ್ತು ಕಲ್ಯಾಣ ಕಾಯ್ದೆ” ಜಾರಿಗೆ ತಂದಿತು. ಈ ಕಾನೂನು ಪ್ರಕಾರ, ತಂದೆ–ತಾಯಿ ತಮ್ಮ ಮಕ್ಕಳಿಗೆ ಆಸ್ತಿ ಕೊಟ್ಟ ಬಳಿಕ, ತಮ್ಮನ್ನು ನಿರ್ಲಕ್ಷಿಸಿದರೆ ಅಥವಾ ಕಿರುಕುಳ ನೀಡಿದರೆ, ಆ ಆಸ್ತಿಯನ್ನು ಹಿಂತೆಗೆದುಕೊಳ್ಳಲು ಹಕ್ಕು ಹೊಂದಿದ್ದಾರೆ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ಯಾ? ಹಾಗಾದ್ರೆ ಈ ಕ್ರೆಡಿಟ್ ಕಾರ್ಡ್ ಆಫರ್ ಮಿಸ್ ಮಾಡ್ಬೇಡಿ
ಈ ಹಿನ್ನೆಲೆಯಲ್ಲಿ, 2025ರ ಮಾರ್ಚ್‌ನಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ಮಹತ್ವದ ತೀರ್ಪು ಗಮನ ಸೆಳೆದಿದೆ. ನಾಗಪಟ್ಟಣ ಜಿಲ್ಲೆಯ 87 ವರ್ಷದ ನಾಗಲಕ್ಷ್ಮಿ ಅವರು ತಮ್ಮ ಮಗ ಕೇಶವನ್‌ಗೆ ಯಾವುದೇ ಷರತ್ತು ಇಲ್ಲದೆ ಗಿಫ್ಟ್ ಡೀಡ್ ಮೂಲಕ ಆಸ್ತಿ ನೀಡಿದ್ದಾರೆ. ಆದರೆ ನಂತರ ಸೊಸೆ ಆಕೆಯ ಆರೈಕೆಯನ್ನು ಸರಿಯಾಗಿ ಮಾಡದಿದ್ದಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋದರು.
ವಿಚಾರಣೆಯಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದ್ದು:
ಗಿಫ್ಟ್ ಡೀಡ್‌ನಲ್ಲಿ ಷರತ್ತು ಇರದಿದ್ದರೂ, ತಾಯಿ–ತಂದೆಗಳನ್ನು ನೋಡಿಕೊಳ್ಳದ ಮಕ್ಕಳಿಗೆ ಕೊಟ್ಟ ಆಸ್ತಿ ಹಿಂತೆಗೆದುಕೊಳ್ಳಬಹುದು.
ಷರತ್ತುಗಳೊಂದಿಗೆ ಆಸ್ತಿ ನೀಡಿದಲ್ಲಿ, ಅವು ಉಲ್ಲಂಘನೆಯಾದರೆ “ರದ್ದು ಡೀಡ್” ಮೂಲಕ ಹಿಂತೆಗೆದುಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಆದಾಯ! ಮಹಿಳೆಯರಿಗೆ ಬಂಪರ್ ಯೋಜನೆಗಳು
ತಜ್ಞರ ಪ್ರಕಾರ, ಈ ತೀರ್ಪು ಹಿರಿಯರ ಹಕ್ಕುಗಳಿಗೆ ಹೊಸ ಭರವಸೆ ನೀಡಿದೆ. ಆಸ್ತಿ ಕೊಟ್ಟ ಬಳಿಕ ತಾಯಿ–ತಂದೆಗಳಿಗೆ ಗೌರವ ಹಾಗೂ ಆರೈಕೆ ದೊರೆಯದಿದ್ದರೆ, ಕಾನೂನು ಅವರ ಪರ ನಿಂತಿದೆ ಎಂಬ ವಿಶ್ವಾಸ ಮೂಡಿಸಿದೆ.
Parents Can Reclaim Property if Neglected




