Phonepe: ಫೋನ್‌ಪೇ ರೂ.1,661 ಕೋಟಿ ಹೂಡಿಕೆ
Phonepe: ಡಿಜಿಟಲ್ ಪಾವತಿಗಳ ದೈತ್ಯ ಫೋನ್ ಪೇ ಡೇಟಾ ಕೇಂದ್ರಗಳನ್ನು ನಿರ್ಮಿಸಲು 1,661 ಕೋಟಿ ರೂ ಹೂಡಿಕೆ ಮಾಡಲು ಮುಂದಾಗಿದೆ.
Phonepe: ಮುಂಬೈ: ಡಿಜಿಟಲ್ ಪಾವತಿಗಳ ದೈತ್ಯ ಫೋನ್ ಪೇ ಡೇಟಾ ಕೇಂದ್ರಗಳನ್ನು ನಿರ್ಮಿಸಲು 1,661 ಕೋಟಿ ರೂ ಹೂಡಿಕೆ ಮಾಡಲು ಮುಂದಾಗಿದೆ. ಇದರಲ್ಲಿ ಈಗಾಗಲೇ ರೂ.1,246 ಕೋಟಿ ವೆಚ್ಚ ಮಾಡಲಾಗಿದೆ. ಇತ್ತೀಚೆಗೆ ನವಿ ಮುಂಬೈನಲ್ಲಿ ಡೇಟಾ ಸೆಂಟರ್ ಅನ್ನು ತೆರೆಯಲಾಗಿದೆ.
ವಿದೇಶದ ಬದಲು ದೇಶಿಯವಾಗಿಯೇ ಮಾಹಿತಿ ಭದ್ರಪಡಿಸುವಂತೆ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಬೆಂಗಳೂರಿನಲ್ಲಿ ಈಗಾಗಲೇ 3 ಡೇಟಾ ಕೇಂದ್ರಗಳನ್ನು ಹೊಂದಿದೆ.
Also Read : Web Stories
ಪ್ರಸ್ತುತ ದಿನಕ್ಕೆ 12 ಕೋಟಿ ವಹಿವಾಟುಗಳು ನೋಂದಣಿಯಾಗುತ್ತಿವೆ ಎಂದು ಫೋನ್‌ಪೇ ಸಹ ಸಂಸ್ಥಾಪಕ ರಾಹುಲ್ ಚಾರಿ ಬಹಿರಂಗಪಡಿಸಿದ್ದಾರೆ. ಸೆಕೆಂಡಿಗೆ ಗರಿಷ್ಠ 7,000 ವಹಿವಾಟುಗಳು ನಡೆಯುತ್ತಿವೆ. ಡಿಸೆಂಬರ್ ವೇಳೆಗೆ ಪ್ರತಿದಿನ ವಹಿವಾಟಿನ ಸಂಖ್ಯೆ 20 ಕೋಟಿ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Phonepe investment for Building a Data Centers
Follow us On
Google News |
Advertisement