ಫೋನ್ಪೇ ಬಳಸಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ! ಬಂಪರ್ ಕೊಡುಗೆ
PhonePe LPG Cylinder Offer: ಫೋನ್ಪೇ ಬಳಸಿ ಉಚಿತ ಗ್ಯಾಸ್ ಸಿಲಿಂಡರ್ ಗೆದ್ದುಕೊಳ್ಳಿ! ಫೋನ್ಪೇ ಮೂಲಕ ಗ್ಯಾಸ್ ಬುಕ್ ಮಾಡಿದ್ರೆ ಉಚಿತ ಸಿಲಿಂಡರ್ ಗೆಲ್ಲುವ ಅವಕಾಶ

- ಫೋನ್ಪೇ ಮೂಲಕ ಗ್ಯಾಸ್ ಬುಕ್ ಮಾಡಿದ್ರೆ ಉಚಿತ ಸಿಲಿಂಡರ್ ಗೆಲ್ಲುವ ಅವಕಾಶ!
- ಪ್ರತಿ ಗಂಟೆಗೆ ಒಬ್ಬ ಅದೃಷ್ಟಶಾಲಿಗೆ ಉಚಿತ ಗ್ಯಾಸ್ ಸಿಲಿಂಡರ್!
- 100% ಕ್ಯಾಶ್ಬ್ಯಾಕ್ ಅವಕಾಶ – ಡಿಸೆಂಬರ್ 31, 2025ರವರೆಗೆ ಮಾತ್ರ!
ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಿಗ್ ಆಫರ್!
PhonePe LPG Cylinder Offer : ನೀವು ಫೋನ್ಪೇ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡ್ತೀರಾ? ಹಾಗಾದರೆ, ನಿಮ್ಮ ಅದೃಷ್ಟ ಪರೀಕ್ಷಿಸೋ ಸಮಯ ಬಂದಿದೆ! ಫೋನ್ಪೇ ಒಂದು ವಿಶೇಷ ಆಫರ್ (Offer) ನೀಡಿದ್ದು, ಪ್ರತಿ ಗಂಟೆಗೂ ಒಬ್ಬ ಬಳಕೆದಾರ ಉಚಿತವಾಗಿ ಗ್ಯಾಸ್ ಸಿಲಿಂಡರ್ ಗೆಲ್ಲುವ ಅವಕಾಶ ಪಡೆದುಕೊಳ್ಳಬಹುದು. ಅದೃಷ್ಟ ಯಾವಾಗ ಬರುತ್ತೋ ಗೊತ್ತಿಲ್ಲ! ಆದರೆ ಪ್ರಯತ್ನಿಸಿ
ಇದನ್ನೂ ಓದಿ: ಇನ್ಮುಂದೆ ಚಿನ್ನ ಅಡವಿಟ್ಟು ಸಾಲ ಪಡೆಯೋಕು ಮುನ್ನ ಈ ವಿಚಾರಗಳು ಗೊತ್ತಿರಲಿ
ಏನಿದು ಆಫರ್?
ನಿಮ್ಮ ಮನೆಯಲ್ಲಿ ಗ್ಯಾಸ್ ಖಾಲಿಯಾದರೆ, ಹೊಸದನ್ನು ಬುಕ್ ಮಾಡೋದಕ್ಕೆ ಫೋನ್ಪೇ ಬಳಸಿ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೆ ಒಬ್ಬ ಅದೃಷ್ಟಶಾಲಿಗೆ ಉಚಿತ ಸಿಲಿಂಡರ್ ಸಿಗುತ್ತದೆ. ಜೊತೆಗೆ, ಬುಕಿಂಗ್ ಮಾಡಿದ ಪ್ರತಿಯೊಬ್ಬರೂ 100% ಕ್ಯಾಶ್ಬ್ಯಾಕ್ ಗೆಲ್ಲುವ ಅವಕಾಶವನ್ನು ಸಹ ಪಡೆಯಬಹುದು.
ಆಫರ್ ಕಾಲಾವಧಿ
ಈ ಕೊಡುಗೆ ಡಿಸೆಂಬರ್ 31, 2025ರವರೆಗೆ ಮಾತ್ರ ಲಭ್ಯವಿದೆ. ಬೆಳಿಗ್ಗೆ 10ರಿಂದ ಸಂಜೆ 5ರೊಳಗೆ ಫೋನ್ಪೇ ಮೂಲಕ ಗ್ಯಾಸ್ ಬುಕ್ ಮಾಡಿದವರಿಗೆ ಮಾತ್ರ ಈ ಅವಕಾಶ.
ಪಾವತಿ ಆಯ್ಕೆಗಳು
UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಫೋನ್ಪೇ ವ್ಯಾಲೆಟ್ ಮೂಲಕ ಪಾವತಿ ಮಾಡಬಹುದು.
ಒಂದು ಖಾತೆಯಿಂದ ಎಷ್ಟು ಬಾರಿ ಬೇಕಾದರೂ ಬುಕ್ ಮಾಡಬಹುದು, ಆದರೆ 100% ಕ್ಯಾಶ್ಬ್ಯಾಕ್ ಮಾತ್ರ ಒಮ್ಮೆ ಸಿಗುತ್ತದೆ.
ಇದನ್ನೂ ಓದಿ: ಎಸ್ಬಿಐ ಗ್ರಾಹಕರಿಗೆ ಹೊಸ ಸ್ಕೀಮ್! ಸಿಗುತ್ತೆ ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ
ಕ್ಯಾಶ್ಬ್ಯಾಕ್ ಹೇಗೆ ಸಿಗುತ್ತದೆ?
ನಿಮ್ಮ ಕ್ಯಾಶ್ಬ್ಯಾಕ್ ಮೊತ್ತ ಫೋನ್ಪೇ ವ್ಯಾಲೆಟ್ ಗೆ ಗಿಫ್ಟ್ ಕಾರ್ಡ್ (Gift Card) ರೂಪದಲ್ಲಿ ಬರಲಿದೆ.
ಈ ಹಣವನ್ನು ಮೊಬೈಲ್ ರೀಚಾರ್ಜ್, ಬಿಲ್ ಪಾವತಿ, ಶಾಪಿಂಗ್ ಮುಂತಾದ ಕಾರ್ಯಗಳಿಗೆ ಬಳಸಬಹುದು.
LPG ಬೆಲೆ ಏರಿಕೆ, ಹೊಸ ದರ!
ಸರ್ಕಾರಿ ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ ದರವನ್ನು ಇತ್ತೀಚಿಗೆ 6 ರೂ. ಹೆಚ್ಚಿಸಿವೆ. ಇದರಿಂದ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ₹1803 ಆಗಿದೆ (ಹಿಂದೆ ₹1797 ಇತ್ತು). ಈ ದರ ಮಾರ್ಚ್ 1, 2025ರಿಂದ ಜಾರಿಯಾಗಿದೆ.
ಹಾಗೆ, ನೀವು ಕೂಡ ಈ ಆಫರ್ ಪ್ರಯೋಜನ ಪಡೆಯಲು ಮರೆಯಬೇಡಿ! ಇಂದೇ ಫೋನ್ಪೇ ಬಳಸಿಕೊಂಡು ಗ್ಯಾಸ್ ಬುಕ್ ಮಾಡಿ, ಉಚಿತ ಸಿಲಿಂಡರ್ ಗೆಲ್ಲುವ ಅವಕಾಶವನ್ನು ಪಡೆದುಕೊಳ್ಳಿ!
PhonePe LPG Offer, Win Free Gas Cylinder





