ಉಚಿತ ಮನೆ ಪಡೆಯೋದು ಹೇಗೆ? ಇಲ್ಲಿದೆ ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಮಾಹಿತಿ

ನಗರ ಮತ್ತು ಗ್ರಾಮೀಣ ಬಡವರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ PMAY ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಪ್ರಕ್ರಿಯೆಯ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

  • PMAY ಯೋಜನೆಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಅರ್ಜಿ ವಿಧಾನ
  • ಉಚಿತ ಮನೆಗೆ ಅರ್ಜಿ ಹಾಕಲು ಬೇಕಾಗುವ ಪ್ರಮುಖ ದಾಖಲೆಗಳು
  • ಅರ್ಹತಾ ಮಾನದಂಡ, ಹೊಸ ಡೆಡ್‌ಲೈನ್ ಡಿಸೆಂಬರ್ 2025

Housing Scheme: ಪ್ರತಿಯೊಬ್ಬರೂ ಹೋಮ್ ಲೋನ್ (Home Loan) ಪಡೆದು ಮನೆಕಟ್ಟುವುದು ಅಸಾಧ್ಯ. ಈ ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ದೇಶದ ಬಡ ಕುಟುಂಬಗಳಿಗೆ ತಮ್ಮದೇ ಆದ ಮನೆ ಕಟ್ಟುವ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆ. ಈ ಯೋಜನೆಯು ಗ್ರಾಮೀಣ (Grameen) ಮತ್ತು ನಗರ (Urban) ಭಾಗದ ಅರ್ಹ ಫಲಾನುಭವಿಗಳಿಗೆ ಮಾಸಿಕ ಆದಾಯದ ಆಧಾರದ ಮೇಲೆ ಸಹಾಯಧನ (subsidy) ನೀಡುತ್ತದೆ.

ಈ ಯೋಜನೆಯಿಂದ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ (Bank Account) ಅಥವಾ ಅಂಚೆ ಕಚೇರಿ ಖಾತೆಗೆ ವರ್ಗಾಯಿಸಲಾಗುತ್ತದೆ. ಅಂದರೆ ಆಧಾರ್‌ (Aadhar) ಲಿಂಕ್ ಮಾಡಿದ ಬ್ಯಾಂಕ್ ಗೆ ಹಣ ಬರುತ್ತದೆ. ಈ ಮೂಲಕ ಮಧ್ಯವರ್ತಿತ್ವ ಕಡಿಮೆಯಾಗುತ್ತದೆ ಮತ್ತು ವಂಚನೆಗೆ ಅವಕಾಶವಿಲ್ಲ.

ಇದನ್ನೂ ಓದಿ: ಮೃತಪಟ್ಟವರ ಆಧಾರ್ ಆಕ್ಟಿವ್ ಆಗಿದ್ರೆ ಭಾರೀ ನಷ್ಟ! ಈ ರೀತಿ ಡಿಆಕ್ಟಿವ್ ಮಾಡಿ

PMAY ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ (Aadhar Card), ಬ್ಯಾಂಕ್ ಪಾಸ್‌ಬುಕ್ (Bank Passbook), ಜಾಬ್ ಕಾರ್ಡ್ (Job Card), SBM ನೋಂದಣಿ ಸಂಖ್ಯೆ, ಪಡಿತರ ಚೀಟಿ, ಮೊಬೈಲ್ ನಂಬರ್ ನಂತಹ ದಾಖಲಾತಿಗಳು ಅಗತ್ಯವಿರುತ್ತವೆ. ಜೊತೆಗೆ ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.

ಈ ಯೋಜನೆಗೆ ಅರ್ಜಿ ಹಾಕುವುದು ಎರಡು ವಿಧಾನಗಳಲ್ಲಿ ಸಾಧ್ಯ – ಆನ್‌ಲೈನ್ (online) ಮತ್ತು ಆಫ್‌ಲೈನ್ (offline). ನಗರ ಪ್ರದೇಶದವರು www.pmay.gov.in ನಲ್ಲಿ ಅರ್ಜಿ ಸಲ್ಲಿಸಬಹುದಾದರೆ, ಗ್ರಾಮೀಣ ಪ್ರದೇಶದವರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ನಿಮ್ಮ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ನೀಡುವ ಪೋಸ್ಟ್ ಆಫೀಸ್ ಯೋಜನೆ

Free housing Scheme

ಈ ಯೋಜನೆಯ ಇತಿಹಾಸ ನೋಡಿದರೆ, ಇಂದಿರಾ ಗಾಂಧಿಯವರ ಕಾಲದಲ್ಲಿ ಆರಂಭವಾದ ಇಂದಿರಾ ಆವಾಸ್ ಯೋಜನೆ ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬ ಹೆಸರಿನಲ್ಲಿ ದೇಶದ ಬಡವರ ಮನೆ ಕನಸು ನನಸಾಗಿಸುತ್ತಿದೆ. ಇಂದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳು ಈ ಯೋಜನೆಯಡಿ ಮನೆ ಹೊಂದಿದ್ದಾರೆ.

ಅಂತಿಮ ದಿನಾಂಕವನ್ನು ಡಿಸೆಂಬರ್ 2025ರ ವರೆಗೆ ವಿಸ್ತರಿಸಲಾಗಿದೆ. ಬಡ ಕುಟುಂಬಗಳಿಗೆ ಇದು ಬಂಗಾರದ ಅವಕಾಶ. ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಮನೆ ಕನಸು ನನಸು ಮಾಡಿ.

ಇದನ್ನೂ ಓದಿ: ಕಾರು, ಲೈಫ್, ಹೆಲ್ತ್ ಇನ್ಸೂರೆನ್ಸ್ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ನಷ್ಟ ಖಚಿತ

ಆನ್‌ಲೈನ್ ಮೂಲಕ ಹಂತ ಹಂತವಾಗಿ ಅರ್ಜಿ ಹಾಕುವ ವಿಧಾನ (PMAY Online Application Step-by-Step)

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕುವುದು ಸುಲಭವಾದ ಪ್ರಕ್ರಿಯೆ. ಇದರೊಂದಿಗೆ ಯಾವುದೇ ಮಧ್ಯವರ್ತಿ ಅಗತ್ಯವಿಲ್ಲ. ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ:

PM Aawas Yojana

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ನಿಮ್ಮ ಬ್ರೌಸರ್‌ನಲ್ಲಿ https://pmay.gov.in ವೆಬ್‌ಸೈಟ್ ತೆರೆಯಿರಿ.

ಹಂತ 2: “Citizen Assessment” ಆಯ್ಕೆ ಮಾಡಿ
ಮೆನು ಬಾರ್‌ನಲ್ಲಿ ಇರುವ “Citizen Assessment” ಮೇಲೆ ಕ್ಲಿಕ್ ಮಾಡಿ.
ಇಲ್ಲಿ ವಿವಿಧ ವಿಭಾಗಗಳಾದ “For Slum Dwellers” ಅಥವಾ “Benefit under 3 components” ಆಯ್ಕೆ ಮಾಡಬಹುದು.

ಹಂತ 3: ಆಧಾರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ಆಧಾರ್ ಸಂಖ್ಯೆ (Aadhar number) ನಮೂದಿಸಿ.
ನಂತರ “Check” ಬಟನ್ ಕ್ಲಿಕ್ ಮಾಡಿ.

ಹಂತ 4: ಅರ್ಜಿ ಫಾರ್ಮ್ ಭರ್ತಿ ಮಾಡಿ
ನಿಮ್ಮ ವೈಯಕ್ತಿಕ ವಿವರಗಳು: ಹೆಸರು, ತಂದೆ/ಪತಿ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಧರ್ಮ, ಜಾತಿ, ವಯಸ್ಸು, ವಾರ್ಷಿಕ ಆದಾಯ, ವೃತ್ತಿ ಇತ್ಯಾದಿ ನಮೂದಿಸಿ. ನಿಮ್ಮ ವಿಳಾಸ, ನಗರ, ರಾಜ್ಯ, ಪಿನ್ ಕೋಡ್ ಸೇರಿಸಿ.

ಹಂತ 5: ಬ್ಯಾಂಕ್ ಖಾತೆ ಮತ್ತು ಇತರ ಮಾಹಿತಿ ನೀಡುವುದು
ಬ್ಯಾಂಕ್ ಹೆಸರು, ಶಾಖೆ ಹೆಸರು, ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ನಮೂದಿಸಿ.
ಇತರ ಅಗತ್ಯ ದಾಖಲೆಗಳನ್ನು (ಆಧಾರ್ ಕಾರ್ಡ್, ಪಾಸ್‌ಬುಕ್, ಜಾಬ್ ಕಾರ್ಡ್ ಇತ್ಯಾದಿ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ಹಂತ 6: ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ
ಎಲ್ಲ ವಿವರಗಳನ್ನು ಚೆಕ್ ಮಾಡಿ.
“Submit” ಬಟನ್ ಕ್ಲಿಕ್ ಮಾಡಿ.

ಸಬ್ಮಿಟ್ ಮಾಡಿದ ನಂತರ ಅರ್ಜಿ ಸಂಖ್ಯೆ (Application Number) ಸಿಗುತ್ತದೆ. ಇದನ್ನು ಭವಿಷ್ಯದಲ್ಲಿ ಟ್ರಾಕ್ ಮಾಡಲು ಬಳಸಬಹುದು.

ಇದನ್ನೂ ಓದಿ: ಅಳಿಯನಿಗೆ ಅತ್ತೆ-ಮಾವನ ಆಸ್ತಿಯಲ್ಲಿ ಹಕ್ಕು ಇರುತ್ತಾ? ಹೌದು, ಅನ್ನೋ ವಿಚಾರ ಗೊತ್ತಾ

ಪ್ರಮುಖ ಮಾಹಿತಿ

  • ಯಾವುದೇ ತಪ್ಪು ಮಾಹಿತಿ ನೀಡಿದರೆ ಅರ್ಜಿ ನಿರಾಕರಣೆಯಾಗುವ ಸಾಧ್ಯತೆ ಇದೆ.
  • ಅರ್ಜಿ ಸಲ್ಲಿಸುವಾಗ ನಿಮ್ಮ ಫೋನ್‌ ನಂಬರ್ ಹಾಗೂ ಇಮೇಲ್ ಐಡಿಯನ್ನು ಸರಿಯಾಗಿ ನಮೂದಿಸಿ, ಇವುಗಳ ಮೂಲಕ OTP ಹಾಗೂ ದೃಢೀಕರಣ ಬರಲಿದೆ.
  • ಅರ್ಜಿ ಸಲ್ಲಿಸಿದ ನಂತರ ಅದನ್ನು ಟ್ರ್ಯಾಕ್ ಮಾಡಲು Track Your Assessment ಆಯ್ಕೆಯನ್ನು ಬಳಸಿ.

PMAY, How to Apply for Free House

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories