ಏಪ್ರಿಲ್ 16 ಕೊನೆ ಗಡುವು! ಇಂತಹ ಬ್ಯಾಂಕ್ ಖಾತೆಗಳು ಕ್ಲೋಸ್ ಆಗುವ ಸಾಧ್ಯತೆ
ಮೂರು ವರ್ಷಗಳಿಂದ ಯಾವುದೇ ವಹಿವಾಟು ಮಾಡದ ಹಾಗೂ ಶೂನ್ಯ ಬ್ಯಾಲೆನ್ಸ್ ಇರುವ ಬ್ಯಾಂಕ್ ಖಾತೆಗಳನ್ನು ಮುಚ್ಚುವ ಬಗ್ಗೆ ಪಿಎನ್‌ಬಿ ಎಚ್ಚರಿಕೆ ನೀಡಿದೆ. ಏಪ್ರಿಲ್ 15 ಒಳಗೆ KYC ಅಪ್ಡೇಟ್ ಮಾಡದಿದ್ದರೆ ಖಾತೆ ಕ್ಲೋಸ್ ಆಗಬಹುದು.

ಪಿಎನ್‌ಬಿ ಗ್ರಾಹಕರಿಗೆ ಮಹತ್ವದ ಸೂಚನೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಮೂರು ವರ್ಷಗಳಿಂದ ಯಾವುದೇ ಯಾವುದೇ ವಹಿವಾಟು ಮಾಡದ ಮತ್ತು ಶೂನ್ಯ ಬ್ಯಾಲೆನ್ಸ್ ಇರುವ ಬ್ಯಾಂಕ್ ಖಾತೆಗಳನ್ನು ಬ್ಯಾಂಕ್ ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಕ್ರಮವನ್ನು ವಂಚನೆಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಕೈಗೊಳ್ಳಲಾಗಿದೆ.
ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ನಿರಂತರವಾಗಿ ನಿರ್ಗತಿಕವಾಗಿರುವ ಖಾತೆಗಳು ಸೈಬರ್ ಮೋಸಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಖಾತೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಬ್ಯಾಂಕ್ ನಿರ್ಧರಿಸಿದೆ.
ಏಪ್ರಿಲ್ 15 ಅಂತಿಮ ಗಡುವು
ಪಿಎನ್‌ಬಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಿಂದ ಯಾವುದೇ ವಹಿವಾಟು ಇಲ್ಲದ ಖಾತೆಗಳಿಗೆ ಏಪ್ರಿಲ್ 15 ಅನ್ನು ಅಂತಿಮ ಗಡುವಾಗಿ ನಿಗದಿಪಡಿಸಲಾಗಿದೆ. ಈ ಗಡುವಿನೊಳಗೆ ಖಾತೆಯನ್ನು ಪುನಃ ಸಕ್ರಿಯಗೊಳಿಸದಿದ್ದರೆ ಏಪ್ರಿಲ್ 16ರಿಂದ ಖಾತೆ ಡೀಯಾಕ್ಟಿವೇಟ್ ಅಥವಾ ಕ್ಲೋಸ್ ಆಗುವ ಸಾಧ್ಯತೆ ಇದೆ.
ಈ ಕುರಿತು ಬ್ಯಾಂಕ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಣೆ ನೀಡಿದ್ದು, ಗ್ರಾಹಕರು ತಕ್ಷಣ ತಮ್ಮ ಖಾತೆ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದೆ.
ಬ್ಯಾಂಕ್ ಖಾತೆ ಮತ್ತೆ ಸಕ್ರಿಯಗೊಳಿಸುವುದು ಹೇಗೆ?
ಪಿಎನ್‌ಬಿ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಹೆಚ್ಚು ಕಷ್ಟಕರವಲ್ಲ. ಗ್ರಾಹಕರು ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ KYC (Know Your Customer) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಅದರ ಜೊತೆಗೆ, ಸಣ್ಣ ವಹಿವಾಟು ನಡೆಸುವುದರಿಂದಲೂ ಖಾತೆಯನ್ನು ಸಕ್ರಿಯಗೊಳಿಸಬಹುದು. KYC ವಿವರಗಳನ್ನು ಅಪ್ಡೇಟ್ ಮಾಡುವುದು ಅಥವಾ ಖಾತೆಯಲ್ಲಿ ಹಣ ಜಮಾ ಅಥವಾ ಹಣ ತೆಗೆದುಕೊಳ್ಳುವ ಲಾವಾದೇವಿ ಮಾಡಿದರೆ ಖಾತೆ ಕ್ಲೋಸ್ ಆಗುವುದನ್ನು ತಪ್ಪಿಸಬಹುದು.
ಬ್ಯಾಂಕ್ ಈ ಕ್ರಮ ಏಕೆ ತೆಗೆದುಕೊಂಡಿದೆ?
ಪಿಎನ್‌ಬಿ ಹೇಳುವ ಪ್ರಕಾರ, ಹಲವು ವರ್ಷಗಳಿಂದ ಬಳಕೆ ಆಗದ ಖಾತೆಗಳು ವಂಚನೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಇಂತಹ ಡಾರ್ಮೆಂಟ್ (Dormant) ಅಥವಾ ಜೀರೋ ಬ್ಯಾಲೆನ್ಸ್ ಖಾತೆಗಳು ಬ್ಯಾಂಕಿಂಗ್ ಭದ್ರತೆಗೆ ಅಪಾಯ ಉಂಟುಮಾಡಬಹುದು.
ಆದ್ದರಿಂದ ಬ್ಯಾಂಕ್ ಅವುಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಮುಚ್ಚುವ ಕ್ರಮ ಕೈಗೊಳ್ಳುತ್ತಿದೆ. ಗ್ರಾಹಕರು ತಮ್ಮ ಖಾತೆ ಬಗ್ಗೆ ಯಾವುದೇ ಅನುಮಾನ ಇದ್ದರೆ ತಕ್ಷಣ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಬ್ಯಾಂಕ್ ಸಲಹೆ ನೀಡಿದೆ.



