ಈ ಬ್ಯಾಂಕಿನಲ್ಲಿ ಅಕೌಂಟ್ ಇದ್ದೋರಿಗೆ ಬಿಗ್ ಅಲರ್ಟ್! ಆಗಸ್ಟ್ 8 ರವರೆಗೆ ಗಡುವು - Bank Account
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಖಾತೆದಾರರು ತಮ್ಮ KYC ಮಾಹಿತಿ ನವೀಕರಿಸದೆ ಇದ್ದರೆ, ಆಗಸ್ಟ್ 8ರೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ.

- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಖಾತೆದಾರರು KYC ನವೀಕರಣ ಮಾಡಬೇಕು
- ಆಗಸ್ಟ್ 8, 2025 ಕೊನೆ ದಿನಾಂಕವಾಗಿ ಘೋಷಿಸಲಾಗಿದೆ
- ನವೀಕರಿಸಿದರೆ ಮಾತ್ರ ಖಾತೆ ಬಳಸಲು, ಹಣ ಪಡೆಯಲು ಸಾಧ್ಯ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ತಮ್ಮ ಖಾತೆಗಳ KYC (Know Your Customer) ಮಾಹಿತಿಯನ್ನು ಆಗಸ್ಟ್ 8, 2025 ರೊಳಗೆ ನವೀಕರಿಸಬೇಕು ಎಂದು ಸೂಚಿಸಿದೆ.
ಇಲ್ಲವಾದಲ್ಲಿ ಬ್ಯಾಂಕ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಇದರರ್ಥ, ಹಣ ಜಮೆ ಮಾಡೋದು, ತೆಗೆದುಕೊಳ್ಳೋದು ಅಥವಾ ಆನ್ಲೈನ್ ಮೂಲಕ ವ್ಯವಹಾರ ನಡೆಸೋದು ಕೂಡ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಮತ್ತೆ ಏರಿಕೆ ಮುನ್ನ ಖರೀದಿಸಿ, ಒಂದೇ ದಿನದಲ್ಲಿ ಚಿನ್ನದ ಬೆಲೆ ಭಾರೀ ಕುಸಿತ
ಈ ನಿರ್ಧಾರವು ಹಣ ಪಡೆಯಲು (money withdrawal), ಠೇವಣಿ (deposit), ಡಿಜಿಟಲ್ ವ್ಯವಹಾರ (online transaction) ಹಾಗೂ ಇತರ ಬ್ಯಾಂಕಿಂಗ್ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವು ಗ್ರಾಹಕರು ತಮ್ಮ KYC ಮಾಹಿತಿ ನವೀಕರಿಸಿಲ್ಲ. ಇದರಿಂದಾಗಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಟ್ಟುನಿಟ್ಟಾಗಿ ಈ ಕ್ರಮ ಕೈಗೊಂಡಿದೆ.
KYC ನವೀಕರಣ ಮಾಡಲು ಅಗತ್ಯವಿರುವ ಕೆಲವು ದಾಖಲೆಗಳು:
- ಗುರುತಿನ ಪುರಾವೆ: ಆಧಾರ್ ಕಾರ್ಡ್, ಮತದಾರ ಗುರುತು, ಪಾಸ್ಪೋರ್ಟ್
- ವಿಳಾಸದ ಪುರಾವೆ: ವಿದ್ಯುತ್ ಬಿಲ್, ರೇಷನ್ ಕಾರ್ಡ್
- ಪಾನ್ ಕಾರ್ಡ್ ಅಥವಾ ಫಾರ್ಮ್ 60
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ನಂಬರ್ (ನೋಂದಾಯಿಸದಿದ್ದರೆ)
ಇದನ್ನೂ ಓದಿ: ರೈತರಿಗೆ ಬಿಗ್ ಅಲರ್ಟ್, ಬೆಳೆ ಸಾಲ ಮನ್ನಾ! ಸರ್ಕಾರದಿಂದ ಪ್ರಮುಖ ಘೋಷಣೆ
ಖಾತೆದಾರರು ಈ ದಾಖಲೆಗಳನ್ನು ಬಳಸಿ KYC ನವೀಕರಿಸಲು ನಾಲ್ಕು ರೀತಿಯ ಮಾರ್ಗಗಳನ್ನು ಆಯ್ಕೆ ಮಾಡಬಹುದು. ನೇರವಾಗಿ ಬ್ಯಾಂಕ್ ಶಾಖೆಗೆ ಹೋಗುವುದು, ಮೊಬೈಲ್ ಆಪ್ (PNB ONE app) ಮೂಲಕ, ಅಧಿಕೃತ ವೆಬ್ಸೈಟ್ (website) ಮೂಲಕ ಅಥವಾ ಇಮೇಲ್/ಪೋಸ್ಟ್ ಮೂಲಕ ಮಾಹಿತಿ ಕಳುಹಿಸುವುದು.
ಇದನ್ನೂ ಓದಿ: ರೈತರೇ, ನಿಮಗೂ ಸಿಗುತ್ತೆ ₹2,000 ರೂಪಾಯಿ! ಈ ಯೋಜನೆಗೆ ನೀವಿನ್ನೂ ಸೇರಿಲ್ವಾ
ಅಂದಹಾಗೆ, ನೀವು ಈಗಾಗಲೇ KYC ನವೀಕರಿಸಿದ್ದೀರಾ ಎಂಬುದನ್ನು ತಿಳಿಯಲು PNB ONE ಆಪ್ ಅಥವಾ PNB internet banking login ಮಾಡಿ, ನಿಮ್ಮ ಸೆಟ್ಟಿಂಗ್ಗಳಲ್ಲಿ “KYC Status” ಪರಿಶೀಲಿಸಬಹುದು. ಅಲ್ಲಿ “KYC Required” ಎಂಬ ಸಂದೇಶವಿದ್ದರೆ, ತಕ್ಷಣ ಕ್ರಮಕೈಗೊಳ್ಳಿ.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
PNB Customers Alerted, Update KYC Before August 8 or Face Account Freeze




