ರೈತರೇ, ನಿಮಗೂ ಸಿಗುತ್ತೆ ₹2,000 ರೂಪಾಯಿ! ಈ ಯೋಜನೆಗೆ ನೀವಿನ್ನೂ ಸೇರಿಲ್ವಾ - PM Kisan Scheme
ಜುಲೈನಲ್ಲಿ ರಿಲೀಸ್ ಆಗಬೇಕಾಗಿದ್ದ 20ನೇ ಹಂತದ ಪಾವತಿ ವಿಳಂಬವಾಗಿದೆ. ರೈತರು ಎದುರು ನೋಡುತ್ತಿರುವ ಈ ಹಂತದ ಬಗ್ಗೆ ಕೇಂದ್ರ ಸಚಿವಾಲಯದ ಸ್ಪಷ್ಟತೆ ಇನ್ನೂ ಬಂದಿಲ್ಲ.

- PM ಕಿಸಾನ್ 20ನೇ ಹಂತದ ಹಣದ ಬಿಡುಗಡೆ ವಿಳಂಬ
- ಫಲಾನುಭವಿಗಳ ಲಿಸ್ಟ್ ಹಾಗೂ ಸ್ಟೇಟಸ್ ಚೆಕ್ ಅಗತ್ಯ
- ಫೇಕ್ ನ್ಯೂಸ್ಗೆ ಬಲಿ ಆಗದಂತೆ ರೈತರಿಗೆ ಎಚ್ಚರಿಕೆ
PM Kisan Scheme Update: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (PM-KISAN) 20ನೇ ಹಂತದ ಹಣವನ್ನು 2025ರ ಜುಲೈನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದರೂ, ಈವರೆಗೆ ಅಧಿಕೃತ ಘೋಷಣೆಯಾಗಿಲ್ಲ. ಇದರಿಂದಾಗಿ ರೈತರು ನಿರೀಕ್ಷೆಯಲ್ಲಿದ್ದಾರೆ.
ಇನ್ನು ಈಗಲೂ ಸಹ ರೈತರು ಯೋಜನೆಗೆ ಸೇರಲು ಅವಕಾಶವಿದ್ದು, ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ, ವಾರ್ಷಿಕ 6 ಸಾವಿರ ನೀವೂ ಪಡೆಯಬಹುದಾಗಿದೆ.
ಇತ್ತೀಚೆಗೆ ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ, ಜುಲೈ 18 ರಂದು ಬಿಹಾರ್ (Bihar) ರಾಜ್ಯದ ಸಿವಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬಂತೆ ಸುದ್ದಿಗಳು ಹರಡಿದರೂ, ಕೇಂದ್ರ ಕೃಷಿ ಇಲಾಖೆ ಯಾವುದೇ ದೃಢಪಡಿಸಿರುವ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಆಗಸ್ಟ್ 1ರಿಂದ ಫೋನ್ ಪೇ, ಗೂಗಲ್ ಪೇ ಹೊಸ ರೂಲ್ಸ್! ಟ್ರಾನ್ಸಾಕ್ಷನ್ ಲಿಮಿಟ್
ಈ ಹಿಂದೆ 2025 ಫೆಬ್ರವರಿಯಲ್ಲಿ 19ನೇ ಹಂತದ ಪಾವತಿ ರೈತರಿಗೆ ನೀಡಲಾಗಿತ್ತು. ಈವರೆಗೆ 10 ಕೋಟಿ ಮಂದಿ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಸುಮಾರು ₹23,500 ಕೋಟಿ ಹಣವನ್ನು ಸರ್ಕಾರ ಬಿಡುಗಡೆಯಾಗಿದೆ.
ರೈತರಿಗೆ ನೇರವಾಗಿ ಹಣ (direct benefit) ಪಾವತಿಯಾಗಲು e-KYC ಪೂರೈಸುವುದು ಮುಖ್ಯ. ರೈತರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಮತ್ತು ಫಲಾನುಭವಿ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಮಾಹಿತಿ PM-KISAN ಅಧಿಕೃತ ವೆಬ್ಸೈಟ್ pmkisan.gov.inನಲ್ಲಿ ಲಭ್ಯವಿದೆ.
ಇದನ್ನೂ ಓದಿ: ರಿಟೈರ್ಮೆಂಟ್ ಆದವರಿಗೂ ಬ್ಯಾಂಕ್ ಲೋನ್! ಇಲ್ಲಿದೆ ನಿವೃತ್ತರಿಗೆ ಬಿಗ್ ಅಪ್ಡೇಟ್
ವೈಯಕ್ತಿಕ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಲು “Beneficiary Status” ವಿಭಾಗ ಬಳಸಿ, ನಿಮ್ಮ ಆಧಾರ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ನಂಬರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ‘Get Data’ ಕ್ಲಿಕ್ ಮಾಡಿದರೆ (payment status) ಮಾಹಿತಿ ಲಭ್ಯವಾಗುತ್ತದೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಸುದ್ದಿಗಳ ಬಗ್ಗೆ ಕೇಂದ್ರ ಕೃಷಿ ಇಲಾಖೆ ಎಚ್ಚರಿಕೆ ನೀಡಿದ್ದು, ರೈತರು ತಪ್ಪು ಮಾಹಿತಿ ನಂಬಬಾರದು, ಅಧಿಕೃತ ಮೂಲಗಳನ್ನು ಮಾತ್ರ ಪರಿಗಣಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಬಂಪರ್ ಸುದ್ದಿ, ₹5,000 ಸಿಗುವ ಸರ್ಕಾರದ ಇನ್ನೊಂದು ಗ್ಯಾರಂಟಿ ಯೋಜನೆ
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಈ ಯೋಜನೆ ರೈತರಿಗೆ ನಿಜವಾದ ಆರ್ಥಿಕ ಬೆಂಬಲವನ್ನು ನೀಡುತ್ತಿದ್ದು, ಯೋಜನೆಯು ಪರದರ್ಶಕವಾಗಿ (transparent) ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ನೇರ ಲಾಭ ಒದಗಿಸುತ್ತದೆ ಎಂದು ತಿಳಿಸಿದರು. ಇನ್ನು ಬಲ್ಲ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಂತೆ ಈ ತಿಂಗಳ ಅಂತ್ಯದಲ್ಲಿ ದೇಶದ ಲಕ್ಷಾಂತರ ರೈತರ ಖಾತೆಗೆ ಯೋಜನೆ ಹಣ ಬಿಡುಗಡೆ ಆಗಲಿದೆ.
ಸೂಚನೆ: ಈ ಯೋಜನೆಯು ದೇಶದ ಕೋಟಿಗಟ್ಟಲೆ ರೈತರಿಗೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದು, ಅಂತಿಮ ಹಣವನ್ನು ಪಡೆಯಲು ಸರಿಯಾದ ದಾಖಲೆಗಳು ಮತ್ತು ಮಾಹಿತಿ ಪ್ರಕ್ರಿಯೆಗಳು ಅವಶ್ಯಕ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
PM-KISAN 20th Installment Delayed, No Official Date Yet




