ಬಂಪರ್ ಸುದ್ದಿ, ₹5,000 ಸಿಗುವ ಸರ್ಕಾರದ ಇನ್ನೊಂದು ಗ್ಯಾರಂಟಿ ಯೋಜನೆ - Pension Scheme
ದಿನಕ್ಕೆ ಕೇವಲ ₹7 ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ತಿಂಗಳಿಗೆ ₹5,000 ಗ್ಯಾರಂಟಿ ಪೆನ್ಷನ್ ಸಿಗುವ ಅಟಲ್ ಪೆನ್ಷನ್ ಯೋಜನೆಗೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ.

- ಅಟಲ್ ಪೆನ್ಷನ್ ಯೋಜನೆಯ ಮೂಲಕ ₹5,000 ತಿಂಗಳ ಪಿಂಚಣಿ
- ಕೇವಲ ₹210 ನಿಂದ ಪ್ರಾರಂಭವಾಗುವ ಹೂಡಿಕೆ
- 18 ರಿಂದ 40 ವರ್ಷ ವಯಸ್ಸಿನವರಿಗೆ ಅವಕಾಶ
Pension Scheme: ವಯಸ್ಸಾದ ಮೇಲೆ ಸ್ಥಿರ ಆದಾಯ ಇರೋದು ಎಲ್ಲರಿಗೂ ಬೇಕಾದದು. ನೌಕರಿ ಇಲ್ಲದ ವೃದ್ಧಾಪ್ಯದಲ್ಲಿ ಹಣದ ತೊಂದರೆಗಳಿಂದ ದೂರವಿರಲು ಕೇಂದ್ರ ಸರ್ಕಾರವು ಅಟಲ್ ಪೆನ್ಷನ್ ಯೋಜನೆ (Atal Pension Yojana) ಆರಂಭಿಸಿದೆ. ಇದು ಮುಖ್ಯವಾಗಿ ಕಡಿಮೆ ಆದಾಯವಿರುವವರಿಗಾಗಿ ರೂಪುಗೊಂಡ ಯೋಜನೆ.
ಈ ಯೋಜನೆಯಲ್ಲಿ ನೀವು ತಿಂಗಳಿಗೆ ₹210 (ಅಂದರೆ ದಿನಕ್ಕೆ ₹7 ರೂಪಾಯಿ) ಜಮೆ ಮಾಡಿದರೆ ಸಾಕು, ನಿವೃತ್ತಿಯಾದ ನಂತರ ನಿಮಗೆ ತಿಂಗಳಿಗೆ ₹5,000 ಪೆನ್ಷನ್ ರೂಪದಲ್ಲಿ ಗ್ಯಾರಂಟಿ ಆದಾಯ ಸಿಗುತ್ತದೆ. ಇದೊಂದು ದೀರ್ಘಕಾಲಿಕ ಹೂಡಿಕೆಯಾದರೂ, ಭವಿಷ್ಯ ಭದ್ರವಾಗಿಸಲು ಇದು ಅತೀ ಸುಲಭ ಮಾರ್ಗ.
ಇದನ್ನೂ ಓದಿ: ಹೊಸ ಎಲ್ಐಸಿ ಯೋಜನೆ, ಪ್ರತಿ ತಿಂಗಳಿಗೆ ₹12,000 ಗ್ಯಾರಂಟಿ ಪಿಂಚಣಿ ಸ್ಕೀಮ್!
ಅಟಲ್ ಪೆನ್ಷನ್ ಯೋಜನೆಗೆ ಸೇರಲು 18 ರಿಂದ 40 ವರ್ಷದೊಳಗಿನವರು ಅರ್ಹರು. ಅದೇ ರೀತಿ ಆಧಾರ್ ಕಾರ್ಡ್ (Aadhaar), ಬ್ಯಾಂಕ್ ಖಾತೆ (bank account) ಇರುವುದೂ ಕಡ್ಡಾಯ. ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಅವಲಂಬಿಸಿರುತ್ತೆ ನಿಮ್ಮ ಪೆನ್ಷನ್ ಮೊತ್ತ. ₹210 ಜಮೆ ಮಾಡಿದರೆ ₹5,000 ಪೆನ್ಷನ್ ಗ್ಯಾರಂಟಿ.
ಇದರಲ್ಲಿ ಸರ್ಕಾರವೂ ಒಂದು ಭಾಗಿಯಾಗಿ ಕೆಲಸ ಮಾಡುತ್ತೆ. ನೀವು ಜಮೆ ಮಾಡುತ್ತಿರುವ ಮೊತ್ತಕ್ಕೆ ಸರ್ಕಾರವೂ ಕೊಂಚ ಹಣ ನೀಡುವುದರ ಮೂಲಕ ನೆರವಾಗುತ್ತದೆ. ಇದು ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ನಿಜವಾದ ಬಲವರ್ಧಕ. ಇದು ಬಹುಪಾಲು ಗ್ರಾಮೀಣ, ಹಾಗೂ ಅಸಂಘಟಿತ ಉದ್ಯೋಗಗಳಲ್ಲಿ ನಿರತ ಜನರಿಗೆ ತುಂಬಾ ಉಪಯುಕ್ತ.
ಇದನ್ನೂ ಓದಿ: ಪ್ರತಿ ತಿಂಗಳು ₹20,000 ಸಿಗುವ ಪೋಸ್ಟ್ ಆಫೀಸ್‌ನ ಬಂಪರ್ ಯೋಜನೆ ಇದು
ಈ ಯೋಜನೆಯ ಮತ್ತೊಂದು ವಿಶೇಷತೆ ಅಂದರೆ, ಚಂದಾದಾರರ (subscriber) ನಿಧನವಾದ ನಂತರ ಅವರ ಜೀವಿತ ಸಂಗಾತಿಗೆ ಪೆನ್ಷನ್ ಸಿಗುತ್ತದೆ. ಇಬ್ಬರೂ ಇಲ್ಲದಿದ್ದರೆ, ಅವರ ನಾಮಿನಿಗೆ (nominee) ಸಂಪೂರ್ಣ ಹಣ ವಾಪಸ್ ಸಿಗುತ್ತದೆ. ಕುಟುಂಬಕ್ಕೆ ಯಾವತ್ತೂ ನಷ್ಟ ಆಗದ ರೀತಿಯಲ್ಲಿ ಯೋಜನೆಯು ರೂಪುಗೊಂಡಿದೆ.
ಈ ಯೋಜನೆಗೆ ಸೇರುವ ಪ್ರಕ್ರಿಯೆ ತುಂಬಾ ಸರಳ. ನೀವು ನಿಮ್ಮ ಬಳಿ ಇರುವ ಬ್ಯಾಂಕ್‌ಗೆ ಹೋಗಿ ‘ಅಟಲ್ ಪೆನ್ಷನ್ ಯೋಜನೆ’ ಫಾರ್ಮ್ ಭರ್ತಿ ಮಾಡಿ. ಅದರಲ್ಲಿ ಹೆಸರು, ವಯಸ್ಸು, ಆಧಾರ್ ವಿವರ, ಬ್ಯಾಂಕ್ ಖಾತೆ ಮತ್ತು ನಿಮಗೆ ಬೇಕಾದ ಪೆನ್ಷನ್ ಮೊತ್ತವನ್ನು ಉಲ್ಲೇಖಿಸಿ, ದಾಖಲೆಗಳೊಂದಿಗೆ ಸಲ್ಲಿಸಿ.
ಇದನ್ನೂ ಓದಿ: ಬರಿ ₹4,800 EMI, ಜೀರೋ ಡೌನ್‌ಪೇಮೆಂಟ್! ಬಜಾಜ್ ಪಲ್ಸರ್ ಬೈಕ್ ಆಫರ್
ಬ್ಯಾಂಕ್ ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಯೋಜನೆ ಜಾರಿಯಾಗುತ್ತದೆ. ನಂತರ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ನಿಗದಿತ ಮೊತ್ತ ಕಡಿತವಾಗುತ್ತೆ. ಇದು ನಿಮ್ಮ future securityಗೆ ಭದ್ರ ಪಾಯಿಂಟ್ ಆಗಿ ನಿಲ್ಲುತ್ತೆ.
ಅಟಲ್ ಪೆನ್ಷನ್ ಯೋಜನೆ (Atal Pension Yojana) ಬಡ ಕುಟುಂಬಗಳಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡುವ ದೊಡ್ಡ ಸಾಧನೆಯೆಂದೇ ಪರಿಗಣಿಸಲಾಗಿದೆ. ದಿನಕ್ಕೆ ಕಾಫಿ ಬೆಲೆಗೂ ಕಡಿಮೆ ಹಣವನ್ನು ಉಳಿಸಿ, ಬದುಕಿಗೆ ಪೆನ್ಷನ್ ಗಳಿಸುವ ಯೋಜನೆ ಇದು.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
Save 7 Daily, Get 5,000 Monthly Pension by Atal Pension Yojana




