ಭರ್ಜರಿ ಪೋಸ್ಟ್ ಆಫೀಸ್ ಯೋಜನೆ, 5 ಲಕ್ಷ ಹೂಡಿಕೆ ಮಾಡಿದ್ರೆ 15 ಲಕ್ಷ ಲಾಭ! ಬಂಪರ್ ಸ್ಕೀಮ್
ಪೋಸ್ಟ್ ಆಫೀಸ್ FD (ಟರ್ಮ್ ಡಿಪಾಜಿಟ್) ಪ್ಲ್ಯಾನ್‌ನಲ್ಲಿ ಕೇವಲ ಒಮ್ಮೆ ಹೂಡಿಕೆ ಮಾಡಿದ್ರೆ, 15 ವರ್ಷಗಳ ನಂತರ ಮೂರು ಪಟ್ಟು ಮೊತ್ತ ಲಭ್ಯ. ಸುರಕ್ಷಿತ ಹೂಡಿಕೆ ಜೊತೆಗೆ ಖಚಿತ ಲಾಭ.

ಪ್ರತಿಯೊಬ್ಬರೂ ತಮ್ಮ ದುಡ್ಡು ಸುರಕ್ಷಿತವಾಗಿರಬೇಕು, ಜೊತೆಗೆ ಭವಿಷ್ಯದಲ್ಲಿ ಉತ್ತಮ ಲಾಭವೂ ಸಿಗಬೇಕು ಎಂದು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೋಸ್ಟ್ ಆಫೀಸ್‌ನ ವಿವಿಧ ಹೂಡಿಕೆ ಯೋಜನೆಗಳು ಅತ್ಯುತ್ತಮ ಆಯ್ಕೆ ಆಗುತ್ತವೆ.
ಪೋಸ್ಟ್ ಆಫೀಸ್ ಟರ್ಮ್ ಡಿಪಾಜಿಟ್, ಅಂದರೆ FD (Fixed Deposit), ಸರ್ಕಾರಿ ಯೋಜನೆ ಆಗಿರುವುದರಿಂದ ಯಾವುದೇ ರಿಸ್ಕ್ ಇಲ್ಲ. ಒಂದು ಬಾರಿ ಮೊತ್ತ ಹೂಡಿಕೆ ಮಾಡಿದ್ರೆ, ದೀರ್ಘಾವಧಿಯಲ್ಲಿ ಉತ್ತಮ ಬಡ್ಡಿ ಸಿಗುತ್ತದೆ. ಪ್ರಸ್ತುತ, 5 ವರ್ಷಗಳ FD ಮೇಲೆ 7.5% ವಾರ್ಷಿಕ ಬಡ್ಡಿ ದೊರೆಯುತ್ತಿದೆ, ಇದು ಹಲವು ಬ್ಯಾಂಕ್‌ಗಳಿಗಿಂತ ಹೆಚ್ಚು.
ಈ ಯೋಜನೆಯ ವಿಶೇಷತೆ ಎಂದರೆ, ಕೇವಲ ₹5 ಲಕ್ಷ ಹೂಡಿಕೆ ಮಾಡಿದ್ರೆ, ಅದನ್ನು 15 ವರ್ಷಗಳವರೆಗೆ ಮುಂದುವರಿಸಿದರೆ ಮೊತ್ತವು ಸುಮಾರು ₹15.24 ಲಕ್ಷಕ್ಕೆ ತಲುಪುತ್ತದೆ. ಅಂದರೆ ₹10 ಲಕ್ಷಕ್ಕೂ ಹೆಚ್ಚು ನೇರ ಲಾಭ ಸಿಗುತ್ತದೆ.
ಮೊದಲ 5 ವರ್ಷಗಳ ನಂತರ ₹5 ಲಕ್ಷ ಸುಮಾರು ₹7.24 ಲಕ್ಷ ಆಗುತ್ತದೆ. ಮತ್ತೊಮ್ಮೆ ಅದೇ ಮೊತ್ತವನ್ನು 5 ವರ್ಷಗಳ ಕಾಲ ಪುನಃ ಹೂಡಿಕೆ ಮಾಡಿದರೆ ಅದು ₹10.51 ಲಕ್ಷಕ್ಕೆ ಏರುತ್ತದೆ. ಮೂರನೇ ಅವಧಿಯ ನಂತರ ಅದು ₹15 ಲಕ್ಷ ದಾಟುತ್ತದೆ.
ಈ ಯೋಜನೆಯಲ್ಲಿ ತಿಂಗಳಿಗೆ ಕಂತು ಪಾವತಿಸುವ ತೊಂದರೆ ಇಲ್ಲ. ಒಮ್ಮೆ ಹಣ ಹಾಕಿದರೆ ಸಾಕು, ಮಾರುಕಟ್ಟೆ ಅಸ್ಥಿರತೆಯ ಭಯವೂ ಇಲ್ಲ. 15 ವರ್ಷಗಳ ನಂತರ ಬೃಹತ್ ಲಾಭ ನಿಮ್ಮ ಕೈ ಸೇರಲಿದೆ. ಆದ್ದರಿಂದ ಮಕ್ಕಳ ಭವಿಷ್ಯ ಅಥವಾ ದೀರ್ಘಾವಧಿ ಗುರಿಗಾಗಿ ಇದು ಭರವಸೆಯ ಹೂಡಿಕೆ.



