ತಿಂಗಳಿಗೆ 5,500 ಆದಾಯ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು
Post Office Scheme: ಸರ್ಕಾರದ ಬೆಂಬಲದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಮೂಲಕ ಒಮ್ಮೆ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಖಚಿತ ಬಡ್ಡಿ ಲಭಿಸುತ್ತದೆ.

Post Office Scheme: ಇಂದಿನ ದಿನಗಳಲ್ಲಿ ಬ್ಯಾಂಕ್ ಬಡ್ಡಿದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸ್ಥಿರ ಆದಾಯ ನೀಡುವ ಯೋಜನೆಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ನಿವೃತ್ತರು, ಗೃಹಿಣಿಯರು ಮತ್ತು ಸಂಬಳದ ನೌಕರರು ಮಾಸಿಕ ಆದಾಯಕ್ಕಾಗಿ ವಿಶ್ವಾಸಾರ್ಹ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಮತ್ತೆ ಚರ್ಚೆಗೆ ಬಂದಿದೆ.
ಸರ್ಕಾರದ ನೇರ ಭರವಸೆಯೊಂದಿಗೆ ನಡೆಯುವ ಈ ಯೋಜನೆಗೆ ಯಾವುದೇ ಮಾರುಕಟ್ಟೆ ರಿಸ್ಕ್ ಇಲ್ಲ. ಒಮ್ಮೆ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ನಿಗದಿತ ಬಡ್ಡಿ ಖಾತೆಗೆ ಜಮಾ ಆಗುತ್ತದೆ. ಆದ್ದರಿಂದ ಇದನ್ನು ‘ಟೆನ್ಷನ್ ಫ್ರೀ ಇನ್ಕಮ್’ ಯೋಜನೆ ಎಂದು ಹಲವರು ಕರೆಯುತ್ತಾರೆ.
ನಿವೃತ್ತರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಯೋಜನೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. “ಪ್ರತಿ ತಿಂಗಳು ಖಚಿತ ಹಣ ಬಂದರೆ ಮನೆಯ ಖರ್ಚು ಸುಲಭ” ಎಂಬ ಕಾರಣಕ್ಕೆ ಹಲವರು ಪೋಸ್ಟ್ ಆಫೀಸ್ ಶಾಖೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬ್ಯಾಂಕ್ Fixed Deposit ಗಿಂತ ಉತ್ತಮ ಮತ್ತು ಸುರಕ್ಷಿತ ಎನ್ನುವ ಅಭಿಪ್ರಾಯವೂ ಇದೆ.
ಇದನ್ನೂ ಓದಿ: ಚಿನ್ನದ ಬೆಲೆ ಮತ್ತೆ ದುಬಾರಿ! ಚಿನ್ನ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರು ಕಂಗಾಲು
ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಆದಾಯ?
ಪ್ರಸ್ತುತ ಈ ಯೋಜನೆಗೆ 7.40% ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ.
- ₹9 ಲಕ್ಷ ಹೂಡಿಕೆ ಮಾಡಿದರೆ → ತಿಂಗಳಿಗೆ ಸುಮಾರು ₹5,500 ಬಡ್ಡಿ
- ಜಂಟಿ ಖಾತೆಯಲ್ಲಿ ₹15 ಲಕ್ಷ ಹೂಡಿಕೆ ಮಾಡಿದರೆ → ತಿಂಗಳಿಗೆ ₹9,250 ವರೆಗೆ ಆದಾಯ
- ಈ ಮೊತ್ತ ನೇರವಾಗಿ ಮಾಸಿಕವಾಗಿ ಸಿಗುವುದರಿಂದ ನಿವೃತ್ತ ಜೀವನಕ್ಕೆ ತುಂಬಾ ಸಹಾಯಕ.
ಯಾರು ಖಾತೆ ತೆರೆಯಬಹುದು?
18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಖಾತೆ ತೆರೆಯಬಹುದು. ಸಿಂಗಲ್ ಅಥವಾ ಜಾಯಿಂಟ್ ಖಾತೆ ಆಯ್ಕೆ ಇದೆ. ಕೇವಲ ₹1,000 ರಿಂದಲೇ ಆರಂಭಿಸಬಹುದು. ಗರಿಷ್ಠ ಮಿತಿ ಸಿಂಗಲ್ ಖಾತೆಗೆ ₹9 ಲಕ್ಷ, ಜಂಟಿ ಖಾತೆಗೆ ₹15 ಲಕ್ಷ.
ಮೆಚ್ಯುರಿಟಿ ಮತ್ತು ನಿಯಮಗಳು
ಯೋಜನೆಯ ಅವಧಿ 5 ವರ್ಷಗಳು. ಮಧ್ಯದಲ್ಲಿ ಖಾತೆ ಮುಚ್ಚಿದರೆ ಕಡಿತ ಶುಲ್ಕ ಇರುತ್ತದೆ. 1 ರಿಂದ 3 ವರ್ಷಗಳಲ್ಲಿ ಮುಚ್ಚಿದರೆ 2% ಕಡಿತ, 3 ರಿಂದ 5 ವರ್ಷಗಳಲ್ಲಿ 1% ಕಡಿತ ಮಾಡಲಾಗುತ್ತದೆ. ಆದ್ದರಿಂದ ಪೂರ್ಣ ಅವಧಿ ಮುಗಿಯುವವರೆಗೆ ಕಾಯುವುದು ಲಾಭದಾಯಕ.
ಖಾತೆ ತೆರೆಯುವುದು ಹೇಗೆ?
ಸಮೀಪದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ, KYC ದಾಖಲೆಗಳು, ಪಾನ್ ಕಾರ್ಡ್ ಪ್ರತಿಯನ್ನು ಸಲ್ಲಿಸಿದರೆ ಸಾಕು. ಪ್ರಕ್ರಿಯೆ ಸರಳ ಮತ್ತು ವೇಗವಾಗಿ ನಡೆಯುತ್ತದೆ.
ಕಡಿಮೆ ರಿಸ್ಕ್, ಖಚಿತ ಆದಾಯ, ಸರ್ಕಾರದ ಭರವಸೆ ಸೇರಿ ಈ ಮೂರು ಕಾರಣಗಳಿಂದ ಪೋಸ್ಟ್ ಆಫೀಸ್ MIS ಯೋಜನೆ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.



