Ads By Google
Business News

ಕೋಳಿ ಸಾಕಾಣಿಕೆ ಉಚಿತ ತರಬೇತಿ! ಸರ್ಟಿಫಿಕೇಟ್ ಸೇರಿದಂತೆ ಊಟ ಮತ್ತು ವಸತಿಯೂ ಕೂಡ ಉಚಿತ

ಕೋಳಿ ಸಾಕಾಣಿಕೆ ಸರ್ಟಿಫಿಕೇಟ್ ಸಿಕ್ಕರೆ, ಬ್ಯಾಂಕ್ ಇಂದ ಸಾಲ (Bank Loan) ಪಡೆದು ಸ್ವಂತ ಬ್ಯುಸಿನೆಸ್ ಶುರು (Business Loan) ಮಾಡಬಹುದು.

Ads By Google

ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ನಿರುದ್ಯೋಗ. ಸರಿಯಾದ ಕೆಲಸ ಸಿಗದ ಕಾರಣ ಹಲವರು ಸ್ವಂತ ಉದ್ಯಮ (Own Business) ಶುರು ಮಾಡಬೇಕು ಎಂದು ಬಯಸುತ್ತಿದ್ದಾರೆ, ಅಂಥವರಿಗೆ ಕೋಳಿ ಸಾಕಾಣಿಕೆಯ (Poultry Farming) ಮೂಲಕ ಹೇಗೆ ಆದಾಯ ಪಡೆಯಬಹುದು, ಕೋಳಿ ಸಾಕಾಣಿಕೆ ಮಾಡುವುದು ಹೇಗೆ ಎಂದು ತರಬೇತಿ ಕೊಡಲಾಗುತ್ತದೆ.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ (Canara Bank) ಸಹಭಾಗಿತ್ವದಲ್ಲಿ ಈ ತರಬೇತಿ ಶುರುವಾಗಲಿದ್ದು, ಯುವಕ ಯುವತಿಯರಿಗೆ 10 ದಿನಗಳ ತರಬೇತಿ (Training) ನೀಡಲಾಗುತ್ತದೆ. ಆಸಕ್ತಿ ಇರುವವರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ತಮ್ಮ ಜಮೀನುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ರಾಜ್ಯದ ಎಲ್ಲಾ ಆಸ್ತಿಗಳಿಗೆ ಲಿಂಕ್ ಕಡ್ಡಾಯ!

ತರಬೇತಿ ನಡೆಯುವುದು ಎಲ್ಲಿ?

ಕೋಳಿ ಸಾಕಾಣಿಕೆ ಬಗ್ಗೆ ತರಬೇತಿ ಪಡೆದು, ಸ್ವಂತ ಉದ್ಯಮ ಶುರು (Start Own Business) ಮಾಡಲು ಆಸಕ್ತಿ ಇರುವವರು ಜುಲೈ 2ರ ಒಳಗೆ ಅರ್ಜಿ ಸಲ್ಲಿಸಬೇಕು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಈ ಪ್ರದೇಶಗಳಲ್ಲಿ ಇರುವ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು.

ತರಬೇತಿ ಎಲ್ಲಿ ನಡೆಯುತ್ತದೆ ಎಂದರೆ ನೆಲಮಂಗಲ ತಾಲ್ಲೂಕಿನ ಹರಿಷಿಣ ಕುಂಟೆ ಹತ್ತಿರ ಇರುವ ಜಾಗಗಳಲ್ಲಿ ಕೋಳಿ ಸಾಕಾಣಿಕೆ ತರಬೇತಿ ಕೊಡಲಾಗುತ್ತದೆ. ಈ ತರಬೇತಿ ಪಡೆದವರು ತಮ್ಮದೇ ಸ್ವಂತ ಉದ್ಯಮ ಶುರು ಮಾಡಬಹುದು.

ಉಚಿತ ಮನೆ ಯೋಜನೆ! ಬಿಪಿಎಲ್ ಕಾರ್ಡ್ ಇರೋರು ಅರ್ಜಿ ಸಲ್ಲಿಸಿ; ಸರ್ಕಾರದಿಂದ ಬಂಪರ್ ಸ್ಕೀಮ್

ಇದರಿಂದ ಸಿಗುವ ಲಾಭವೇನು?

*ಈ ಯೋಜನೆಗೆ ಅರ್ಜಿ ಸಲ್ಲಿಸಿ, ತರಬೇತಿ ಪಡೆದರೆ ಕೋಳಿ ಸಾಕಾಣಿಕೆ ಮಾಡುವುದು ಹೇಗೆ ಎಂದು ಪೂರ್ತಿಯಾಗಿ ತಿಳಿದುಕೊಳ್ಳುತ್ತೀರಿ, ನೀವು ಸ್ವಂತ ಉದ್ಯಮ ಶುರು ಮಾಡಿ, ಇನ್ನಷ್ಟು ಜನರಿಗೆ ಕೆಲಸ ಕೊಡುತ್ತೀರಿ.

*10 ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಪಾಲ್ಗೊಳ್ಳುವ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಉಚಿತವಾಗಿ ಸಿಗುತ್ತದೆ.

*ತರಬೇತಿ ಪಡೆದ ವ್ಯಕ್ತಿಗಳಿಗೆ ಕೋಳಿ ಸಾಕಾಣಿಕೆ ಕಲಿತಿದ್ದಾರೆ ಎನ್ನುವುದಕ್ಕೆ ಸರ್ಟಿಫಿಕೇಟ್ ಅನ್ನು ಸಹ ಕೊಡಲಾಗುತ್ತದೆ.

*ಈ ಸರ್ಟಿಫಿಕೇಟ್ ಸಿಕ್ಕರೆ, ಬ್ಯಾಂಕ್ ಇಂದ ಸಾಲ (Bank Loan) ಪಡೆದು ಸ್ವಂತ ಬ್ಯುಸಿನೆಸ್ ಶುರು (Business Loan) ಮಾಡಬಹುದು.

ಜುಲೈ 1ರಿಂದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಜಾರಿಗೆ ಬರಲಿದೆ ಹೊಸ ನಿಯಮಗಳು!

ತರಬೇತಿ ಪಡೆಯಲು ಬೇಕಿರುವ ಅರ್ಹತೆಗಳು:

*18 ರಿಂದ 45 ವರ್ಷಗಳ ಒಳಗಿರುವ ಯಾರೇ ಆದರೂ ಅರ್ಜಿ ಸಲ್ಲಿಸಬಹುದು.

*ಕನ್ನಡ ಓದುವುದಕ್ಕೆ, ಬರೆಯುವುದಕ್ಕೆ ಮತ್ತು ಮಾತನಾಡುವುದಕ್ಕೆ ಬರುವವರು ಮಾತ್ರ ಅರ್ಜಿ ಸಲ್ಲಿಸಬಹುದು.

*ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಮತ್ತು ಹಳ್ಳಿಯಲ್ಲಿರುವವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಬಾಡಿಗೆ ಕಟ್ಟುವವರಿಗೆ ಸಿಹಿ ಸುದ್ದಿ, ಬೆಂಗಳೂರಿನ ಈ ಏರಿಯಾಗಳಲ್ಲಿ ಕಡಿಮೆಯಾಗಿದೆ ಬಾಡಿಗೆ ದರ!

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಕೋಳಿ ಸಾಕಣಿಕೆ ಬಗ್ಗೆ ಅರ್ಜಿ ಸಲ್ಲಿಸಲು ಸಾಧ್ಯ ಆಗುವುದು ಆಫ್ಲೈನ್ ಮೂಲಕ ಮಾತ್ರ. ರೂಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೋಗಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು. ಕೋಳಿ ಸಾಕಾಣಿಕೆ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು 9380162042, 9740982585 ಈ ನಂಬರ್ ಗೆ ಕರೆಮಾಡಿ ತರಬೇತಿ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು.

Poultry Farming Free Training, Food and accommodation including certificate are also free

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere