ಸರ್ಕಾರದ ಮತ್ತೊಂದು ಯೋಜನೆ, ಕೇವಲ 20 ರೂಗಳನ್ನು ಜಮಾ ಮಾಡಿ 2 ಲಕ್ಷ ಪಡೆಯುವ ಅದ್ಭುತ ಸ್ಕೀಮ್

ಇತ್ತೀಚೆಗೆ ನಮ್ಮ ದೇಶದಲ್ಲಿ ಇನ್ಶೂರೆನ್ಸ್ (insurance) ಗಳ ಮಹತ್ವ ಜನರಿಗೆ ತಿಳಿದು ಬಂದಿದೆ. ತಾವು ಕೂಡಿಸಿಟ್ಟ ಹಣ ತಮ್ಮ ಮರಣದ ನಂತರ ತಮ್ಮ ಪ್ರೀತಿ ಪಾತ್ರರ ನೆರವಿಗೆ ದೊರಕಲಿ ಎಂದು ಇದೀಗ ಪ್ರತಿಯೊಬ್ಬರೂ ಸಹ ಲೈಫ್ ಇನ್ಶೂರೆನ್ಸ್ (Life Insurance) ಮಾಡಿಸಲು ಮುಂದಾಗಿದ್ದಾರೆ.

ಇನ್ನು ಅನೇಕರು ಲೈಫ್ ಇನ್ಶೂರೆನ್ಸ್ (Life Insurance) ನ ವಾರ್ಷಿಕ ಪ್ರೀಮಿಯಂ (Premium) ಕಟ್ಟಲಾಗದೆ ಇನ್ನು ಸಹ ಇದರ ಲಾಭದಿಂದ ವಂಚಿತರಾಗಿದ್ದಾರೆ.

ಇನ್ನು ಇದೆ ಕಾರಣಕ್ಕೆ ಮೋದಿ ಸರ್ಕಾರವು ಅತ್ಯಂತ ಕಡಿಮೆ ವಾರ್ಷಿಕ ಪ್ರೀಮಿಯಂನೊಂದಿಗೆ (Premium) ಒಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯ ಅಡಿಯಲ್ಲಿ ನೀವು ಕೇವಲ 20 ರೂಗಳನ್ನು ವಾರ್ಷಿಕ ಪ್ರೀಮಿಯಂ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಬ್ಯಾಂಕ್ ಚೆಕ್ ಬುಕ್ ಇರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ರೂಲ್ಸ್

ಹೌದು, ಮೋದಿ ಸರ್ಕಾರವು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಅನೇಕ ನಿರ್ಗತಿಕರ ಬೆಂಬಲಕ್ಕೆ ನಿಂತಿದೆ. ಇನ್ನು ಈ ಯೋಜನೆಗಳ ಮೂಲಕ ಅನೇಕ ಜನರ ಆರ್ಥಿಕ ಪರಿಸ್ಥಿತಿ ಸ್ಥಿರಗೊಳಿಸುವ ಪ್ರಯತ್ನದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ ಎಂದರೆ ತಪ್ಪಾಗುವುದಿಲ್ಲ.

ಇದೀಗ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಮೂಲಕ ಇದೀಗ ಮೋದಿ ಸರ್ಕಾರ ಜನರ ಕಷ್ಟಗಳಿಗೆ ಪರಿಹಾರ ಒದಗಿಸಲು ಮುಂದಾಗಿದೆ. ಹೌದು, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ (Pradhan Mantri Suraksha Bheem Scheme) ಫಲಾನುಭವಿಗಳು ಕೇವಲ ವರ್ಷಕ್ಕೆ 20 ರೂಗಳನ್ನು ಪ್ರೀಮಿಯಂ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಹೌದು, ಕೇವಲ 20 ರೂಗಳ ಪ್ರೀಮಿಯಂ ಪಾವತಿಸಿ ನೀವು ಎರಡು ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ನೀವು ಈ ಯೋಜನೆಗೆ ನಿಮ್ಮ ಬ್ಯಾಂಕ್ ಖಾತೆಯನ್ನು (Bank Account) ಲಿಂಕ್ ಮಾಡಿಸಿದರೆ ಪ್ರತಿ ವರ್ಷ ಮೇ 31ನೇ ತಾರೀಖು ತನ್ನಂತಾಗಿಯೆ ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ.

ಕೇವಲ 436 ರೂ ಹೂಡಿಕೆ ಮಾಡಿ ಪಡೆಯಿರಿ 2 ಲಕ್ಷ ರೂಪಾಯಿ! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

ಇನ್ನು , ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ (Pradhan Mantri Suraksha Bheem Scheme) ಲಾಭ ಪಡೆಯಲು ನೀವು ಕೆಲವು ಅರ್ಹತೆಗಳನ್ನು ಪೂರೈಸಬೇಕು. ಹೌದು, ನೀವು ಈ ಯೋಜನೆಯ ಅಡಿಯಲ್ಲಿ ನೊಂದಾಯಿಸಿಕೊಳ್ಳಲು ನಿಮ್ಮ ವಯಸ್ಸು 18 ರಿಂದ 70 ವರ್ಷದೊಳಗಿರಬೇಕು.

Pradhan Mantri Suraksha Bheem Schemeಇನ್ನು ಈ ಪಾಲಿಸಿಯ ವಾರ್ಷಿಕ ಪ್ರೀಮಿಯಂ ಕೇವಲ 20 ರೂಗಳು ಮಾತ್ರವಾಗಿದೆ. ಇನ್ನು ವ್ಯಕ್ತಿಯ ಅಕಾಲಿಕ ಮರಣ ಅಥವಾ ಆಕ್ಸಿಡೆಂಟ್ ಅಥವಾ ಇನ್ನಿತರ ಕಾರಣಗಳಿಂದ ಅಂಗವಿಕಲನಾದರೆ ಪಾಲಿಸಿದಾರರ ಹಣ ಅವರ ಕುಟುಂಬಸ್ಥರಿಗೆ ಲಭಿಸುತ್ತದೆ.

ಕೇಂದ್ರ ಸರ್ಕಾರ 2015 ರಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ (Pradhan Mantri Suraksha Bheem Scheme) ಚಾಲನೆ ಮಾಡಿದ್ದು, ದೇಶದ ನಿರ್ಗತಿಕ ಜನರಿಗೆ ಕಷ್ಟದ ಸಮಯದಲ್ಲಿ ಈ ಯೋಜನೆಯ ಮೂಲಕ ಆರ್ಥಿಕವಾಗಿ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಿಕ್ಕಾಪಟ್ಟೆ ಕಡಿಮೆ ಬೆಲೆ, ಹೆಚ್ಚು ಮೈಲೇಜ್! ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ನೀವು ಸಹ ಈ ಯೋಜನೆಯ ಅಡಿಯಲ್ಲಿ ನೊಂದಾಯಿಸಿಕೊಳ್ಳಲು ಯೋಚಿಸುತ್ತಿದ್ದರೆ, ಇಂದೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ, ನಿಮ್ಮ  ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್‌ ಬುಕ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇನ್ನು ಇದೀಗ ಅನೇಕ ಇನ್ಶೂರೆನ್ಸ್ (insurance) ಕಂಪನಿಗಳು ಸಹ ತಮ್ಮ ಗ್ರಾಹಕರಿಗೆ ಈ ಯೋಜನೆಯನ್ನು ನೀಡುವ ಕಾರ್ಯ ನಿರ್ವಹಿಸುತ್ತಿದೆ.

Pradhan Mantri Suraksha Bheem Scheme Benefit Details

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories