ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎಟಿಎಂ ಬಳಸುವವರಿಗೆ ಮಹತ್ವದ ಸೂಚನೆ ನೀಡಿದ ಆರ್‌ಬಿಐ

ನೀವು ಕ್ರೆಡಿಟ್ ಕಾರ್ಡ್ (Credit card) ಅಥವಾ ಡೆಬಿಟ್ ಕಾರ್ಡ್ (Debit card) ಅನ್ನು ನಿರಂತರವಾಗಿ ಬಳಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ನಿಮಗಾಗಿ. ಇತ್ತೀಚಿಗೆ ನಗದು ವ್ಯವಹಾರಕ್ಕಿಂತ ಹೆಚ್ಚಾಗಿ ಆನ್ಲೈನ್ (online) ಮೂಲಕವೇ ಎಲ್ಲಾ ಪೇಮೆಂಟ್ (payment) ಗಳು ನಡೆದು ಬಿಡುತ್ತವೆ

ಜೊತೆಗೆ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಕೈಯಲ್ಲಿ ಇದ್ರೆ ಎಲ್ಲಿ ಬೇಕಾದರೂ ಶಾಪಿಂಗ್ ಮಾಡಬಹುದು. ಆದರೆ ಈ ಸೌಲಭ್ಯವೇ ಈಗ ಜನರಿಗೆ ತೊಂದರೆ ಉಂಟು ಮಾಡುತ್ತಿದೆ.

35 ಲೀಟರ್ ಗಟ್ಟಿ ಹಾಲು ಕೊಡುವ ಈ ಹೆಮ್ಮೆ ತಳಿ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ

ಹೆಚ್ಚಾಗುತ್ತಿದೆ ವಂಚನೆಯ ಪ್ರಕರಣ:

ನಾವು ನಮ್ಮ ಕೈಯಲ್ಲಿ ಡೆಬಿಟ್ ಕಾರ್ಡ್ ಇದ್ರೆ ಹಾಗೂ credit card ಇದ್ರೆ ಎಲ್ಲಿ ಬೇಕೆಂದರಲ್ಲಿ ಸುಲಭವಾಗಿ ಸ್ವೈಪ್ (swipe) ಮಾಡಿ ಬಿಡುತ್ತೇವೆ, ಇದರಿಂದಲೇ ಸಾಕಷ್ಟು ವಂಚನೆಗಳು ನಡೆಯುತ್ತಿವೆ.

ನಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಒಮ್ಮೆ ಒಂದು ಸ್ಥಳದಲ್ಲಿ ಬಳಸಿದರೆ ಅದರ ಮಾಹಿತಿಯನ್ನು ಪಡೆದುಕೊಳ್ಳುವುದು ವಂಚಕರಿಗೆ ಸುಲಭವಾಗಿದೆ. ಇದನ್ನ ಗಮನಿಸಿದ ಆರ್‌ಬಿಐ ಈ ವಂಚನೆಯನ್ನ ತಡೆಗಟ್ಟಲು ಬಳಕೆದಾರರಿಗೆ ಹೆಚ್ಚಿನ ಭದ್ರತೆ ಒದಗಿಸಲು, ಕಾರ್ಡ್ ಟೋಕನೈಜೇಷನ್ (card tokenisation) ಪ್ರಾರಂಭಿಸಿದೆ.

ಆರಂಭದಲ್ಲಿ ಕೇಂದ್ರದಲ್ಲಿ ಮಾತ್ರ ಇದ್ದ ಈ ಟೋಕನೈಸೇಷನ್ ಈಗ ಸೆಂಟ್ರಲ್ ಬ್ಯಾಂಕ್ ನಿಂದ ಹೊಸ ಚಾನೆಲ್ ಗಳಲ್ಲಿಯೂ ಪರಿಚಯಿಸಲಾಗಿದೆ.

ಸ್ವಂತ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 3 ಲಕ್ಷಗಳ ಉಚಿತ ಸಾಲ! ಇನ್ನೇಕೆ ತಡ ಅರ್ಜಿ ಸಲ್ಲಿಸಿ

ಕಾರ್ಡ್ ಅನ್ ಫೈಲ್ ಟೋಕನೈಜೇಷನ್; (card on file tokenization)

ವ್ಯಾಪಾರಿಯ ಅಪ್ಲಿಕೇಶನ್ ಹಾಗೂ ವೆಬ್ ಗಳಲ್ಲಿ ನೀವು ಟೋಕನ್ ಬಳಕೆ ಮಾಡುವುದರ ಮೂಲಕ ಯಾವುದೇ ವ್ಯವಹಾರ ಮಾಡಬಹುದು ಹಾಗೂ ನಿಮ್ಮ ಕಾರ್ಡ್ಗಳ ಎಲ್ಲಾ ವಿವರಗಳು ಕೂಡ ಸೇಫ್ ಆಗಿ ಇರುತ್ತವೆ.

ಈ ಪ್ರಯೋಜನವನ್ನು ನೀವು ಬ್ಯಾಂಕ್ ನಿಂದಲೇ ಪಡೆದುಕೊಳ್ಳಬೇಕು. ವಿವಿಧ ಈ ಕಾಮರ್ಸ್ ಪ್ಲಾಟ್ ಫಾರ್ಮ್ (E-Commerce platform) ಗಳಿಗೆ ನೇರವಾಗಿ ನಿಮ್ಮ ಖಾತೆಯನ್ನು ಲಿಂಕ್ ಮಾಡಿಕೊಳ್ಳಲು ಸಾಧ್ಯವಿದೆ. ಇದರಿಂದಾಗಿ ನಿಮ್ಮ ಕಾರ್ಡ್ ನಲ್ಲಿ ಇರುವ ಯಾವ ವಿವರವೂ ಕೂಡ ಬಹಿರಂಗಗೊಳ್ಳುವುದಿಲ್ಲ. ಇದಕ್ಕೆ ಪ್ರತ್ಯೇಕ ಕೋಡ್ ಇರುತ್ತದೆ.

ಆರ್ ಬಿ ಐ ನ ಹೇಳಿಕೆ:

ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಡ್ ಆನ್ ಫೈಲ್ ಟೋಕನೈಸೇಷನ್ (COFT) ಯನ್ನು ಸಪ್ಟೆಂಬರ್ 2021 ರಲ್ಲಿ ಪರಿಚಯಿಸಿತ್ತು. ಇದನ್ನು 2022 ರಿಂದ ಬ್ಯಾಂಕುಗಳಲ್ಲಿ (Banks) ಪ್ರಾರಂಭಿಸಲಾಯಿತು. ಆರ್ ಬಿಐ ವ್ಯವಸ್ಥೆಗಾಗಿ ಕೊಟ್ಟು 5 ಲಕ್ಷ ಕೋಟಿ ಮೀಸಲಿಟ್ಟಿದೆ. ಹಾಗೂ ಈ ವ್ಯವಸ್ಥೆಯ ಮೂಲಕ 56 ಕೋಟಿಗೂ ಹೆಚ್ಚು ಟೋಕನ್ ಬಿಡುಗಡೆ.

ಗೃಹಲಕ್ಷ್ಮಿಯರಿಗಾಗಿ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೆಚ್ಚಿಸಿದ ಸರ್ಕಾರ! ಬೆಲೆ ಈಗ ಇನ್ನಷ್ಟು ಕಡಿಮೆ

ಟೋಕನ್ ವ್ಯವಸ್ಥೆಯ ಪ್ರಯೋಜನ

Credit Card and Debit Cardಮೊದಲು ಕ್ರೆಡಿಟ್ ಹಾಗೂ ಡಿಬಿಟ್ ಕಾರ್ಡ್ಗಳ ಮೂಲಕ ಖರೀದಿ ಮಾಡುವುದಿದ್ದರೆ ವೆಬ್ಸೈಟ್ನಲ್ಲಿ ವಿವರಗಳನ್ನು ನಮೂದಿಸಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ವಂಚನೆಯ ಪ್ರಕರಣಗಳು ಕೂಡ ಜಾಸ್ತಿ ಆಗಿದ್ದವು. ಅಂದರೆ ನೀವು ನೀಡಿದ ವಿವರಗಳನ್ನು ಇಟ್ಟುಕೊಂಡು ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಇದೀಗ ಟೋಕನ್ ವ್ಯವಸ್ಥೆಯನ್ನು ಆರ್‌ಬಿಐ (Reserve Bank of India) ಪರಿಚಯಿಸಿದ ನಂತರ ನಾವು ಬಳಸುವ ಎಲ್ಲಾ ಕಾರ್ಡ್ ವಿವರಗಳು ಸುರಕ್ಷಿತವಾಗಿರುತ್ತವೆ. ಪಾವತಿ ಮಾಡುವ ಸಮಯದಲ್ಲಿ ಕಾರ್ಡ್ ನ ಯಾವುದೇ ಮಾಹಿತಿಯನ್ನು ನೀಡಬೇಕಾಗಿಲ್ಲ.

ಬ್ಯಾಂಕ್ ಮಟ್ಟದಲ್ಲಿ ನೀವು ಟೋಕನ್ ರಚಿಸಿಕೊಳ್ಳಬಹುದು ಇದರಿಂದ ಒಂದು ಟೋಕನ್ ನೊಂದಿಗೆ ಯಾವುದೇ ಬ್ಯಾಂಕ್ ನಲ್ಲಿ ಸುಲಭವಾಗಿ ಶಾಪಿಂಗ್ ಮಾಡಬಹುದು. ಟೋಕನೈಸೇಷನ್ ವ್ಯವಸ್ಥೆಯಿಂದ ಇದೀಗ ಗ್ರಾಹಕರು ಯಾವುದೇ ಅಪಾಯವಿಲ್ಲದೆ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ (Credit Card and Debit Card) ಬಳಸಿಕೊಳ್ಳಲು ಸಾಧ್ಯವಿದೆ.

RBI has issued an important Update on credit card and debit card users

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories