35 ಲೀಟರ್ ಗಟ್ಟಿ ಹಾಲು ಕೊಡುವ ಈ ಹೆಮ್ಮೆ ತಳಿ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ

ಹೈನುಗಾರಿಕೆ (Diary business) ಎನ್ನುವುದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ, ಯಾಕೆಂದರೆ ಹಸುಗಳನ್ನು (Cow) ಅಥವಾ ಎಮ್ಮೆಗಳನ್ನು (buffaloes) ಸಾಕುವುದು ಕ್ರಮೇಣ ಕಡಿಮೆಯಾಗುತ್ತಿದೆ

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ (Diary business) ಎನ್ನುವುದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ, ಯಾಕೆಂದರೆ ಹಸುಗಳನ್ನು (Cow) ಅಥವಾ ಎಮ್ಮೆಗಳನ್ನು (buffaloes) ಸಾಕುವುದು ಅದಕ್ಕೆ ಸರಿಯಾಗಿ ಮೇವು ಒದಗಿಸುವುದು ಹಾಗೂ ಜಾನುವಾರುಗಳಿಗೆ ರೋಗ ಭಾರದಂತೆ ತಡೆಗಟ್ಟುವುದು ಮಾಲೀಕರಿಗೆ ದೊಡ್ಡ ಸವಾಲೇ ಸರಿ.

ಹಾಗಾಗಿ ಹೈನುಗಾರಿಕೆ ತುಟ್ಟಿ ಆಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರು ಸಾಕುವವರ ಪ್ರಮಾಣ ಕಡಿಮೆ ಆಗಿದೆ.

ಆದರೆ ಕೆಲವು ಕಡೆಗೆ ಮಾತ್ರ ಇನ್ನೂ ಜಾನುವಾರುಗಳನ್ನು ಸಾಕಿ ಅದರಿಂದ ಲಕ್ಷ ಲಕ್ಷ ಆದಾಯ ಗಳಿಸುವ ರೈತರು (Farmers) ಇದ್ದಾರೆ. ಹೆಚ್ಚಾಗಿ ಗೊಬ್ಬರಕ್ಕಾಗಿ ಹಾಲಿಗಾಗಿ ಜಾನುವಾರು ಸಾಕಾಣಿಕೆ ಮಾಡಲಾಗುತ್ತದೆ.

35 ಲೀಟರ್ ಗಟ್ಟಿ ಹಾಲು ಕೊಡುವ ಈ ಹೆಮ್ಮೆ ತಳಿ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ - Kannada News

ಸ್ವಂತ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 3 ಲಕ್ಷಗಳ ಉಚಿತ ಸಾಲ! ಇನ್ನೇಕೆ ತಡ ಅರ್ಜಿ ಸಲ್ಲಿಸಿ

ಹಸು ಗಿಂತ ಈ ಎಮ್ಮೆ ಬೆಸ್ಟ್

ಹೈನುಗಾರಿಕೆ ಅಂದ್ರೆ ನಮ್ಮ ಯೋಚನೆ ಹಸು ಸಾಕಾಣಿಕೆ ಬಗ್ಗೆ ಇರುತ್ತದೆ, ಆದರೆ ಹಸು ಸಾಕಾಣಿಕಿಂತಲೂ ಎಮ್ಮೆ ಸಾಕಾಣಿಕೆ ಹೆಚ್ಚು ಲಾಭ ತಂದು ಕೊಡಬಲ್ಲದು ಎಂಬುದು ನಿಮಗೆ ಗೊತ್ತಾ?

ಹೌದು ನಮ್ಮ ದೇಶದಲ್ಲಿ ಲಭ್ಯವಿರುವ ಕೆಲವು ಪ್ರಮುಖ ಎಮ್ಮೆ ತಳಿಗಳು ಅತಿ ಹೆಚ್ಚು ಹಾಲನ್ನು ಕೊಡುತ್ತವೆ, ಜೊತೆಗೆ ದೀರ್ಘಾವಧಿಯವರೆಗೆ ಲಾಭವನ್ನು ಗಳಿಸಿ ಕೊಡುತ್ತವೆ. ಅಂತಹ ಒಂದು ಪ್ರಮುಖ ಹೆಮ್ಮೆ ತಳಿ ಅಂದ್ರೆ ಜಾಫ್ರಾಬಾದಿ!

ಜಾಫ್ರಾಬಾದಿ ಎಮ್ಮೆ ತಳಿ; (jafarabadi buffalo)

jafarabadi buffaloಹೆಚ್ಚಾಗಿ ನಮ್ಮ ದೇಶದಲ್ಲಿ ಜನರು ಸಾಕುವಂತಹ ತಳಿ ಅಂದ್ರೆ ಮೂರ್ರ ಹಾಗೂ ಜಾಫ್ರಾಬಾದಿ (jafarabadi buffalo). ಈ ಎಮ್ಮೆ ತಳಿಗಳು ಹರಿಯಾಣ, (Haryana) ಮಹಾರಾಷ್ಟ್ರ, ಗುಜರಾತ್ (Gujarat) ಭಾಗಗಳಲ್ಲಿ ಮಾತ್ರ ಲಭ್ಯ ಇವೆ, ಈ ಎಮ್ಮೆ ತಳಿಗಳನ್ನು ಸಾಕಬಹುದು ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವಂತಹ ಸಾಮರ್ಥ್ಯ ಇರುವ ಅತ್ಯುತ್ತಮವಾದ ಹೆಮ್ಮೆ ತಳಿ ಜಾಫ್ರಾಬಾದಿ

ಗೃಹಲಕ್ಷ್ಮಿಯರಿಗಾಗಿ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೆಚ್ಚಿಸಿದ ಸರ್ಕಾರ! ಬೆಲೆ ಈಗ ಇನ್ನಷ್ಟು ಕಡಿಮೆ

ಅತಿ ಹೆಚ್ಚು ಹಾಲು ಕೊಡುವ ಹೆಮ್ಮೆ ತಳಿ!

ಜಾಫ್ರಾಬಾದಿ ಎಮ್ಮೆ ಹಸುಗಳಂತೆ ಅಲ್ಲ ಇದು ಅತಿ ಹೆಚ್ಚು ಹಾಲನ್ನು ಕೊಡುತ್ತದೆ, ಪ್ರತಿ ದಿನ ಸರಾಸರಿ 20ರಿಂದ 30 ಲೀಟರ್ ಹಾಲನ್ನು ಜಾಫ್ರಾಬಾದಿ ಎಮ್ಮೆಯಿಂದ ಪಡೆಯಬಹುದು.

ಹಸುವಿನ ಹಾಲಿಗಿಂತಲೂ ಎಮ್ಮೆ ಹಾಲು (Milk) ಹೆಚ್ಚು ಗಟ್ಟಿಯಾಗಿರುತ್ತದೆ, ಇದರಲ್ಲಿ ಇರುವ ಫ್ಯಾಟ್ ಅಂಶ ಜಾಸ್ತಿ ಹಾಗಾಗಿ ಹೆಚ್ಚು ಪೋಷಕಾಂಶ ಯುಕ್ತ ಎಮ್ಮೆ ಹಾಲನ್ನು ಜನ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಹಸು ಹಾಲಿಗೆ ಹೋಲಿಸಿದರೆ ಎಮ್ಮೆ ಹಾಲು ಹೆಚ್ಚು ಗಟ್ಟಿಯಾಗಿರುತ್ತದೆ, ಜೊತೆಗೆ ಪ್ರತಿ ಲೀಟರ್ಗೆ 60 ರಿಂದ 80ಗಳ ವರೆಗೆ ಬೆಲೆ ಇದೆ.

ಜಾಫ್ರಾಬಾದಿ ಎಮ್ಮೆ ಸಾಕಿ ಲಾಭಗಳಿಸಿ:

ಇದೊಂದು ಅತ್ಯುತ್ತಮ ಎಮ್ಮೆ ತಳಿಯಾಗಿದ್ದು ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, ಹಾಗಾಗಿ ಬಹಳ ಹೈಟೆಕ್ ಆಗಿರುವ ಕೊಟ್ಟಿಗೆ ನಿರ್ಮಿಸುವ ಅಗತ್ಯವಿಲ್ಲ. ಈ ಎಮ್ಮೆಗಳಿಗೆ ಸ್ವಚ್ಛತೆ ಹಾಗೂ ಕಾಲಕಾಲಕ್ಕೆ ತಕ್ಕಂತೆ ಆಹಾರವನ್ನು ಒದಗಿಸಬೇಕು. ಪ್ರತಿ ದಿನ 5 ರಿಂದ 10 ಕೆಜಿ ಮೆಕ್ಕೆಜೋಳ ನುಚ್ಚು ಮೊದಲಾದ ಆಹಾರ ಹಾಗೂ ಹುಲ್ಲಿನ ಮೇವು ನೀಡಬೇಕು.

ATM ನಿಂದ ಹರಿದ ನೋಟು ಹೊರಬಂದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಜಾಫ್ರಾಬಾದಿ ಎಮ್ಮೆ ತಳಿಯ ಬೆಲೆ;

ಈ ಎಮ್ಮೆ ತಳಿ ಸಾಕಾಣಿಕೆ ಮಾಡಿದರೆ ಪ್ರತಿ ದಿನ ಸರಾಸರಿ 20 ರಿಂದ 25 ಲೀಟರ್ ಹಾಲನ್ನು ಮಾರಾಟ ಮಾಡಬಹುದು. ಪ್ರತಿ ಲೀಟರ್ ಗೆ 60 ರೂಪಾಯಿಗಳಿಂದ 80ಗಳಿಗೆ ಮಾರಾಟ ಮಾಡಿದರೆ ದಿನಕ್ಕೆ 4000ಗಳಿಗಿಂತಲೂ ಅಧಿಕ ಹಣ ಸಂಪಾದನೆ ಮಾಡಬಹುದು.

ಖರ್ಚು ವೆಚ್ಚಗಳನ್ನು ಹೋಗಲಾಡಿಸಿ ಕನಿಷ್ಠ 2000ಗಳನ್ನು ಪ್ರತಿದಿನ ಉಳಿತಾಯ (Savings) ಮಾಡಬಹುದು. ಅಂದರೆ ಪ್ರತಿ ತಿಂಗಳು ನಿವ್ವಳ ಲಾಭ (Income) ಸುಮಾರು 50ರಿಂದ 60 ಸಾವಿರ ರೂಪಾಯಿಗಳು ಎನ್ನಬಹುದು.

ಇನ್ನು ಜಾಫ್ರಾಬಾದಿ ಎಮ್ಮೆಗಳಿಗೆ, ಹಸುಗಳಿಗೆ ಬರುವಂತೆ ಹೆಚ್ಚಿನ ಕಾಯಿಲೆಗಳು ಬರುವುದಿಲ್ಲ, ಹಾಗಾಗಿ ದೀರ್ಘಾವಧಿಗೆ ಈ ಎಮ್ಮೆ ತಳಿ ಹಾಲನ್ನು ನೀಡುತ್ತದೆ. ಪ್ರತಿ 18 ತಿಂಗಳಿಗೆ ಗರ್ಭ ಧರಿಸುವ ಈ ಎಮ್ಮೆ ತಳಿ, ಹಾಲು ಮಾರಾಟಕ್ಕೆ ಮಾತ್ರವಲ್ಲದೆ, ಗೊಬ್ಬರಕ್ಕೂ ಕೂಡ ಅತ್ಯುತ್ತಮ ತಳಿ ಎನಿಸಿದೆ. ಇನ್ನು ಸುಮಾರು 60 ಸಾವಿರದಿಂದ ಒಂದು ಲಕ್ಷ ರೂಪಾಯಿಗಳಿಗೆ ಜಾಫ್ರಾಬಾದಿ ಎಮ್ಮೆ ಖರೀದಿ ಮಾಡಬಹುದು.

ಇನ್ನು ಜಾಫ್ರಾಬಾದಿ ಹಾಗೂ ಇತರ ಕೆಲವು ಎಮ್ಮೆಗಳು ನೋಡುವುದಕ್ಕೆ ಒಂದೇ ರೀತಿಯಾಗಿ ಇರುತ್ತದೆ, ದಷ್ಟಪುಷ್ಟವಾಗಿರುವ ಜಾಫ್ರಭಾದಿ ಸುಮಾರು 400 ಕೆಜಿ ತೂಕ ಇರುತ್ತದೆ. ಈ ಎಮ್ಮೆ ತಳಿ ಆಯ್ಕೆಮಾಡುವಾಗ ರೈತರು ಮೋಸ ಹೋಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಸರಿಯಾದ ಮಾಹಿತಿ ಪಡೆದುಕೊಂಡು ನಂತರ ಖರೀದಿ ಮಾಡಿ.

This Buffalo will Give 35 liters of solid milk, earn lakhs of income by Dairy Farming

Follow us On

FaceBook Google News

This Buffalo will Give 35 liters of solid milk, earn lakhs of income by Dairy Farming