ರಾಯಲ್ ಎನ್‌ಫೀಲ್ಡ್‌ನಿಂದ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ! 154 ಕಿಮೀ ಮೈಲೇಜ್ ರೇಂಜ್
Royal Enfield Electric Bike: ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಫ್ಲೈಯಿಂಗ್ ಫ್ಲೀ C6 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಒಂದೇ ಚಾರ್ಜ್‌ನಲ್ಲಿ 154 ಕಿಮೀ ರೇಂಜ್, ಆಧುನಿಕ ಫೀಚರ್‌ಗಳು, ಲೈಟ್ ವೇಟ್ ಡಿಸೈನ್‌ನೊಂದಿಗೆ ಯುವಕರ ಗಮನ ಸೆಳೆಯುತ್ತಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಮೊದಲ ಎಲೆಕ್ಟ್ರಿಕ್ ಬೈಕ್
Royal Enfield Electric Bike: ಭಾರತದಲ್ಲಿ ಯುವಕರಿಗೆ ಡ್ರೀಮ್ ಬೈಕ್ ಎಂದೇ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಈಗ ಎಲೆಕ್ಟ್ರಿಕ್ ಸೆಗ್ಮೆಂಟ್‌ಗೆ ಕಾಲಿಟ್ಟಿದೆ. ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಫ್ಲೈಯಿಂಗ್ ಫ್ಲೀ C6 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬೈಕ್ ಆರಂಭಿಕವಾಗಿ ₹2.79 ಲಕ್ಷ (ಎಕ್ಸ್‌ಶೋ ರೂಮ್) ದರದಲ್ಲಿ ಲಭ್ಯವಿದೆ.
ಬ್ಯಾಟರಿ-ಯಾಜ್-ಎ-ಸರ್ವೀಸ್ (BaaS) ಆಯ್ಕೆಯನ್ನು ಬಳಸಿದರೆ ಇದೇ ಬೈಕ್ ಅನ್ನು ಸುಮಾರು ₹1.99 ಲಕ್ಷದ ಆರಂಭಿಕ ದರದಲ್ಲಿ ಪಡೆಯುವ ಅವಕಾಶವೂ ಇದೆ. ಎಲೆಕ್ಟ್ರಿಕ್ ವಾಹನಗಳ ಕಡೆಗೆ ಕಂಪನಿಯ ಹೊಸ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗುತ್ತಿದೆ.
ರೇಂಜ್ ಮತ್ತು ಪರ್ಫಾರ್ಮೆನ್ಸ್
ಫ್ಲೈಯಿಂಗ್ ಫ್ಲೀ C6 ಬೈಕ್‌ನಲ್ಲಿ 15.4kW (ಸುಮಾರು 20hp) ಶಕ್ತಿಯ PMSM ಎಲೆಕ್ಟ್ರಿಕ್ ಮೋಟಾರ್ ಹಾಗೂ 3.91kWh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಕಂಪನಿಯ ಮಾಹಿತಿಯ ಪ್ರಕಾರ ಈ ಬೈಕ್ ಕೇವಲ 3.7 ಸೆಕೆಂಡ್‌ಗಳಲ್ಲಿ 0 ರಿಂದ 60 ಕಿಮೀ ವೇಗವನ್ನು ತಲುಪಬಲ್ಲದು.
ಗರಿಷ್ಠವಾಗಿ 115 ಕಿಮೀ/ಗಂಟೆ ವೇಗವನ್ನು ತಲುಪುವ ಸಾಮರ್ಥ್ಯವಿದ್ದು, ಒಂದೇ ಚಾರ್ಜ್‌ನಲ್ಲಿ ಸುಮಾರು 154 ಕಿಲೋಮೀಟರ್‌ಗಳ ಐಡಿಸಿ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಆನ್‌ಬೋರ್ಡ್ ಫಾಸ್ಟ್ ಚಾರ್ಜರ್ ಮೂಲಕ ಬ್ಯಾಟರಿ 20ರಿಂದ 80 ಶೇಕಡಾ ವರೆಗೆ ಸುಮಾರು 65 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ.
ಆಧುನಿಕ ಫೀಚರ್‌ಗಳು
ನಗರ ಪ್ರದೇಶಗಳಲ್ಲಿ ಸಂಚರಿಸುವ ಯುವ ರೈಡರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್‌ನಲ್ಲಿ ಹಲವು ಸ್ಮಾರ್ಟ್ ಫೀಚರ್‌ಗಳನ್ನು ಸೇರಿಸಲಾಗಿದೆ. ಆಲ್-ಎಲ್‌ಇಡಿ ಲೈಟಿಂಗ್, ಗೂಗಲ್ ಆಧಾರಿತ ನ್ಯಾವಿಗೇಶನ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಸೇರಿದಂತೆ ಹಲವು ತಂತ್ರಜ್ಞಾನಗಳು ಇದರಲ್ಲಿ ಲಭ್ಯ.
ಇದರಲ್ಲಿ ಕಾರ್ನರಿಂಗ್ ABS, ಟ್ರಾಕ್ಷನ್ ಕಂಟ್ರೋಲ್ ಹಾಗೂ ಸ್ಪೋರ್ಟ್ ಮತ್ತು ಇಂಡಿವಿಡ್ಯುಯಲ್ ರೈಡ್ ಮೋಡ್‌ಗಳೂ ಇದ್ದು, ರೈಡರ್‌ಗಳು ತಮ್ಮ ಇಷ್ಟದಂತೆ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ವಿನ್ಯಾಸ ಮತ್ತು ತೂಕ
ಫ್ಲೈಯಿಂಗ್ ಫ್ಲೀ C6 ಡಿಸೈನ್ ವಿಶೇಷವಾಗಿ ಗಮನ ಸೆಳೆಯುವಂತಿದೆ. ಹಳೆಯ ವಿಂಟೇಜ್ ಫ್ಲೈಯಿಂಗ್ ಫ್ಲೀ ಬೈಕ್‌ನಿಂದ ಪ್ರೇರಣೆ ಪಡೆದ ಈ ಮಾದರಿಯಲ್ಲಿ ಎಕ್ಸ್‌ಪೋಸ್‌ಡ್ ಫ್ರೇಮ್, ಗರ್ಡರ್ ಟೈಪ್ ಫ್ರಂಟ್ ಸಸ್ಪೆನ್ಷನ್, ಫ್ಲೋಟಿಂಗ್ ಸೀಟ್ ಮತ್ತು ರಿಮೂವಬಲ್ ಪಿಲಿಯನ್ ಸೀಟ್ ನೀಡಲಾಗಿದೆ.
ಅಲ್ಯೂಮಿನಿಯಂ ಕೇಸಿಂಗ್‌ನೊಳಗೆ ಬ್ಯಾಟರಿ ಪ್ಯಾಕ್ ಅಳವಡಿಸಿರುವುದರಿಂದ ಬೈಕ್ ಏರೋಡೈನಾಮಿಕ್ಸ್ ಮತ್ತು ಕೂಲಿಂಗ್ ವ್ಯವಸ್ಥೆ ಉತ್ತಮವಾಗಿದೆ. ಈ ಬೈಕ್ ಒಟ್ಟು 124 ಕಿಲೋಗ್ರಾಂ ತೂಕ ಹೊಂದಿದ್ದು, ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಲೈಟ್ ವೇಟ್ ಬೈಕ್‌ಗಳಲ್ಲಿ ಒಂದಾಗಿ ಗುರುತಿಸಲಾಗಿದೆ.
ಟೆಕ್ನಾಲಜಿ ಮತ್ತು ಅಭಿವೃದ್ಧಿ
ಈ ಬೈಕ್‌ನಲ್ಲಿ Wi-Fi, ಬ್ಲೂಟೂತ್ ಮತ್ತು 4G ಕನೆಕ್ಟಿವಿಟಿ ಜೊತೆಗೆ ರಿಮೋಟ್ ಮಾನಿಟರಿಂಗ್ ಸೌಲಭ್ಯವಿದೆ. ಜೊತೆಗೆ ಓವರ್-ದಿ-ಏರ್ (OTA) ಅಪ್‌ಡೇಟ್ ಮೂಲಕ ಭವಿಷ್ಯದಲ್ಲಿ ಸಾಫ್ಟ್‌ವೇರ್ ಸುಧಾರಣೆಗಳನ್ನು ಪಡೆಯಬಹುದು.
ಫ್ಲೈಯಿಂಗ್ ಫ್ಲೀ ಟೆಕ್ ಸೆಂಟರ್‌ನಲ್ಲಿ ಈ ಬೈಕ್ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಭಾರತ ಮತ್ತು ಯುಕೆ ಮೂಲದ 200ಕ್ಕೂ ಹೆಚ್ಚು ಇಂಜಿನಿಯರ್‌ಗಳು ಇದರ ಅಭಿವೃದ್ಧಿಯಲ್ಲಿ ಭಾಗವಹಿಸಿದ್ದು, 45ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಕಂಪನಿ ದಾಖಲಿಸಿದೆ.
ಈ ಬೈಕ್ 2025 ರಲ್ಲಿ ಡಿಸೈನ್ ಕಾನ್ಸೆಪ್ಟ್ ವಿಭಾಗದಲ್ಲಿ ಪ್ರತಿಷ್ಠಿತ ರೆಡ್ ಡಾಟ್ ಅವಾರ್ಡ್ ಕೂಡ ಗೆದ್ದಿದೆ. ಭವಿಷ್ಯದಲ್ಲಿ ಫ್ಲೈಯಿಂಗ್ ಫ್ಲೀ ಬ್ರ್ಯಾಂಡ್ ಅಡಿಯಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಕಂಪನಿಯದ್ದಾಗಿದೆ.



