ಎಸ್ಬಿಐನಲ್ಲಿ ಸಾಲ ಮಾಡಿರೋ ಗ್ರಾಹಕರಿಗೆ ಭರ್ಜರಿ ಸುದ್ದಿ! ಲೋನ್ ಇಎಂಐ ಕಡಿತ - Loan EMI
ಸ್ವಾತಂತ್ರ್ಯೋತ್ಸವದ ದಿನ ಎಸ್ಬಿಐ ತನ್ನ ಗ್ರಾಹಕರಿಗೆ ದೊಡ್ಡ ಉಡುಗೊರೆ ನೀಡಿದೆ. ಹೋಮ್ ಲೋನ್ ಹಾಗೂ ಕಾರ್ ಲೋನ್ಗಳ ಬಡ್ಡಿದರ ಕಡಿತದಿಂದ ಇಎಂಐ ಭಾರ ಕಡಿಮೆಯಾಗಲಿದ್ದು, ಹೊಸ ಸಾಲಗಾರರಿಗೂ ಲಾಭವಾಗಲಿದೆ.

- ಎಸ್ಬಿಐ ಬಡ್ಡಿದರ ಕಡಿತ:, ಹೋಮ್ ಲೋನ್, ಕಾರ್ ಲೋನ್ EMI ಕಡಿಮೆ
- ಎಂಸಿಎಲ್ಆರ್ ಬದಲಾವಣೆ, 0.05% ಇಳಿಕೆ, ಹೊಸ ದರ ಜಾರಿ
- ಗ್ರಾಹಕರಿಗೆ ಲಾಭ, ಕಡಿಮೆ ಬಡ್ಡಿ, ಸುಲಭ ಪಾವತಿ ಅವಕಾಶ
Loan EMI : ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಹೋಮ್ ಲೋನ್ (Home Loan) ಹಾಗೂ ಕಾರ್ ಲೋನ್ (Car Loan) ಬಡ್ಡಿದರವನ್ನು ಕಡಿತಗೊಳಿಸಿದೆ. ಇದರಿಂದ ಸಾಲ ಪಡೆದಿರುವ ಕೋಟ್ಯಂತರ ಗ್ರಾಹಕರಿಗೆ ಇಎಂಐ ಪಾವತಿಯಲ್ಲಿ ಸ್ವಲ್ಪ ರಿಲೀಫ್ ಸಿಗಲಿದೆ.
ಈ ಬದಲಾವಣೆ ಆಗಸ್ಟ್ 15, 2025ರಿಂದಲೇ ಜಾರಿಯಲ್ಲಿದೆ. ಫ್ಲೋಟಿಂಗ್ ರೇಟ್ನಲ್ಲಿ ಲೋನ್ ಪಡೆದವರಿಗೆ ಇದು ವಿಶೇಷ ಲಾಭಕಾರಿ. ಕಡಿಮೆ ಬಡ್ಡಿದರದಿಂದ ಈಎಂಐ ಮಾತ್ರವಲ್ಲದೆ, ಸಾಲ ಮುಗಿಸುವ ಅವಧಿಯೂ ಕಡಿಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಧಿಡೀರ್ ಬದಲಾವಣೆ, ನಿಮ್ಮ ನಗರದಲ್ಲಿ ಹೇಗಿದೆ ಪರಿಶೀಲಿಸಿ
ಎಸ್ಬಿಐ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ಅನ್ನು 0.05% ಕಡಿತಗೊಳಿಸಿದೆ. ಇದರ ಪರಿಣಾಮವಾಗಿ ಓವರ್ನೈಟ್ ಹಾಗೂ ಒಂದು ತಿಂಗಳ ಎಂಸಿಎಲ್ಆರ್ 7.95%ರಿಂದ 7.90%ಕ್ಕೆ ಇಳಿಕೆಯಾಗಿದೆ.
ಮೂರು ತಿಂಗಳ ದರ 8.35%ರಿಂದ 8.30%ಕ್ಕೆ, ಆರು ತಿಂಗಳ ದರ 8.70%ರಿಂದ 8.65%ಕ್ಕೆ ಹಾಗೂ ಒಂದು ವರ್ಷದ ದರ 8.80%ರಿಂದ 8.75%ಕ್ಕೆ ಇಳಿದಿದೆ.
ಹೊಸ ಹೋಮ್ ಲೋನ್ (Home Loan) ಪಡೆಯುವವರಿಗಾಗಿಯೂ ಇದು ಉತ್ತಮ ಅವಕಾಶ. ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುವುದರಿಂದ ಮನೆ ಅಥವಾ ಕಾರು ಖರೀದಿ ಕನಸು ಸುಲಭವಾಗಿ ನನಸಾಗಬಹುದು. ಕಾರ್ ಲೋನ್ ಪಡೆದವರಿಗೂ ಇದೇ ರೀತಿಯ ಲಾಭ ದೊರೆಯಲಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ₹2 ಲಕ್ಷ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಇಲ್ಲಿದೆ ಪಕ್ಕ ಲೆಕ್ಕಾಚಾರ
ಆದಾಗ್ಯೂ, ಎಸ್ಬಿಐ ಹೋಮ್ ಲೋನ್ಗಳಿಗೆ 0.35% ಪ್ರಾಸೆಸಿಂಗ್ ಫೀ (processing fee) ವಿಧಿಸುತ್ತದೆ. ಇದಕ್ಕೆ ಕನಿಷ್ಠ ರೂ.2,000 ಹಾಗೂ ಗರಿಷ್ಠ ರೂ.10,000 ಅನ್ವಯವಾಗುತ್ತದೆ. ಜೊತೆಗೆ GST ಕೂಡ ಸೇರಲಿದೆ.
ಹೊಸ ಸಾಲಕ್ಕೆ ಅರ್ಜಿ ಹಾಕುವವರು ತಮ್ಮ ಸಿಬಿಲ್ ಸ್ಕೋರ್ (CIBIL score) ಪರಿಶೀಲಿಸುವುದು ಅತಿ ಮುಖ್ಯ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದಲ್ಲಿ ಇನ್ನಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬಹುದು.
ಎಸ್ಬಿಐ ಕೈಗೊಂಡಿರುವ ಈ ಕ್ರಮವು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜನರಿಗೆ ನಿಜವಾದ ಆರ್ಥಿಕ ಉಡುಗೊರೆಯಾಗಿದೆ. ಕಡಿಮೆ ಇಎಂಐ ಭಾರದಿಂದ ಹಣಕಾಸು ನಿರ್ವಹಣೆ ಸುಲಭವಾಗುವುದರ ಜೊತೆಗೆ ಇಷ್ಟದ ಮನೆ ಅಥವಾ ಕಾರು ಖರೀದಿ ಕನಸೂ ತ್ವರಿತವಾಗಿ ಸಾಕಾರಗೊಳ್ಳಲಿದೆ.
SBI Cuts Loan EMI Rates




