ಸ್ಟೇಟ್ ಬ್ಯಾಂಕ್ ನಲ್ಲಿ 4 ಲಕ್ಷ ಹೂಡಿಕೆಗೆ 5 ವರ್ಷದಲ್ಲಿ ಎಷ್ಟು ಲಾಭ ಗೊತ್ತ? ಲೆಕ್ಕಾಚಾರ ಇಲ್ಲಿದೆ
Fixed Deposit: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹4 ಲಕ್ಷವನ್ನು 5 ವರ್ಷಗಳ ಫಿಕ್ಸ್ಡ್ ಡಿಪಾಜಿಟ್ ಆಗಿ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತದೆ? ಸಾಮಾನ್ಯರು, ಹಿರಿಯರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಲಭ್ಯವಾಗುವ ಲಾಭದ ಲೆಕ್ಕಾಚಾರ ಇಲ್ಲಿದೆ.

SBI Fixed Deposit: ಷೇರು ಮಾರುಕಟ್ಟೆಯಲ್ಲಿ ಅಪಾಯಗಳಿದ್ದರೂ, ಸುರಕ್ಷಿತ ಹೂಡಿಕೆ ಬಗ್ಗೆ ಯೋಚಿಸುವ ಅನೇಕರು ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಿಕ್ಸ್ಡ್ ಡಿಪಾಜಿಟ್ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. ಕಡಿಮೆ ಅಪಾಯ, ಸ್ಥಿರ ಬಡ್ಡಿ ಮತ್ತು ಭದ್ರತೆ ಇರುವುದರಿಂದ ಬ್ಯಾಂಕ್ ಎಫ್‌ಡಿ ಇನ್ನೂ ಜನಪ್ರಿಯ ಹೂಡಿಕೆ ಮಾರ್ಗವಾಗಿದೆ.
ಪ್ರಸ್ತುತ SBI ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳ ಫಿಕ್ಸ್ಡ್ ಡಿಪಾಜಿಟ್ ಯೋಜನೆಗಳಿವೆ. ಅವುಗಳಲ್ಲಿ ಬಡ್ಡಿದರವು ಸುಮಾರು 3.05% ರಿಂದ 7.15% ವರೆಗೆ ಇದೆ.
5 ವರ್ಷದ FD ಮೇಲೆ ಎಷ್ಟು ಬಡ್ಡಿ?
SBI ಯಲ್ಲಿ 60 ತಿಂಗಳು (5 ವರ್ಷ) ಅವಧಿಗೆ ಫಿಕ್ಸ್ಡ್ ಡಿಪಾಜಿಟ್ ಮಾಡಿದರೆ ವಿವಿಧ ವಯೋವರ್ಗದ ಗ್ರಾಹಕರಿಗೆ ವಿಭಿನ್ನ ಬಡ್ಡಿದರ ಸಿಗುತ್ತದೆ.
- ಸಾಮಾನ್ಯ ನಾಗರಿಕರಿಗೆ ಸುಮಾರು 6.05% ಬಡ್ಡಿ
- ಹಿರಿಯ ನಾಗರಿಕರಿಗೆ 7.05% ಬಡ್ಡಿ
- 80 ವರ್ಷ ಮೇಲ್ಪಟ್ಟವರಿಗೆ ಸುಮಾರು 7.15% ಬಡ್ಡಿ ನೀಡಲಾಗುತ್ತದೆ.
ಈ ಕಾರಣದಿಂದ ಹಿರಿಯ ನಾಗರಿಕರಿಗೆ FD ಹೂಡಿಕೆ ಇನ್ನಷ್ಟು ಲಾಭದಾಯಕವಾಗುತ್ತದೆ.
₹4 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ?
ಒಬ್ಬ ಸಾಮಾನ್ಯ ನಾಗರಿಕನು ₹4,00,000 ಅನ್ನು SBI ಯಲ್ಲಿ 5 ವರ್ಷಗಳ FD ಆಗಿ ಇಟ್ಟರೆ, ಅವಧಿ ಮುಗಿಯುವಾಗ ಸುಮಾರು ₹1,40,071 ಬಡ್ಡಿ ಲಭಿಸುತ್ತದೆ. ಹೀಗಾಗಿ ಒಟ್ಟು ಮೊತ್ತ ಸುಮಾರು ₹5,40,071 ಆಗುತ್ತದೆ.
ಹಿರಿಯ ನಾಗರಿಕರು ಇದೇ ಮೊತ್ತವನ್ನು ಹೂಡಿಕೆ ಮಾಡಿದರೆ ಸುಮಾರು ₹1,67,303 ಬಡ್ಡಿ ಪಡೆಯಬಹುದು. ಅಂದರೆ ಮೆಚ್ಯುರಿಟಿ ಸಮಯದಲ್ಲಿ ಒಟ್ಟು ₹5,67,303 ಹಣ ಅವರ ಖಾತೆಗೆ ಬರುತ್ತದೆ.
80 ವರ್ಷ ಮೇಲ್ಪಟ್ಟವರಿಗೆ ಇನ್ನಷ್ಟು ಲಾಭ
80 ವರ್ಷಕ್ಕಿಂತ ಮೇಲ್ಪಟ್ಟ “ಸೂಪರ್ ಸೀನಿಯರ್ ಸಿಟಿಜನ್” ಗ್ರಾಹಕರು ಇನ್ನೂ ಹೆಚ್ಚಿನ ಬಡ್ಡಿದರ ಪಡೆಯುತ್ತಾರೆ. ₹4 ಲಕ್ಷ ಹೂಡಿಕೆ ಮಾಡಿದರೆ ಸುಮಾರು ₹1,70,097 ಬಡ್ಡಿ ಸಿಗುತ್ತದೆ.
ಇದರಿಂದ ಮೆಚ್ಯುರಿಟಿ ವೇಳೆಗೆ ಒಟ್ಟು ₹5,70,097 ಮೊತ್ತ ಲಭ್ಯವಾಗುತ್ತದೆ.
ವಿಶೇಷ ಯೋಜನೆ ಕೂಡ ಲಭ್ಯ
SBI ತನ್ನ ವಿಶೇಷ “ಅಮೃತ್ ವೃಷ್ಟಿ” ಎಂಬ 444 ದಿನಗಳ FD ಯೋಜನೆಯನ್ನೂ ನೀಡುತ್ತಿದೆ. ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು ಸುಮಾರು 6.45% ವರೆಗೆ ಬಡ್ಡಿ ಪಡೆಯುವ ಅವಕಾಶವಿದೆ.
ಹೀಗಾಗಿ ಸುರಕ್ಷಿತ ಹಾಗೂ ಸ್ಥಿರ ಆದಾಯ ಬಯಸುವವರಿಗೆ ಬ್ಯಾಂಕ್ FD ಇನ್ನೂ ಉತ್ತಮ ಆಯ್ಕೆಯಾಗಿ ಉಳಿದಿದೆ.



