6 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಸರ್ಕಾರದ ಯೋಜನೆಗೆ ಅರ್ಜಿ ಹಾಕಿ

Story Highlights

Education Scholarship : ಈಗ ಸರ್ಕಾರವು ಹೊಸ ಸ್ಕಾಲರ್ಶಿಪ್ ಅನ್ನು ಕೂಡ ನೀಡುವುದಕ್ಕೆ ಮುಂದಾಗಿದೆ. ಈ ಸ್ಕಾಲರ್ಶಿಪ್ ಅನ್ನು ವಿಶೇಷವಾಗಿ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

Education Scholarship : ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳು ಸಿಗುತ್ತಿದೆ. ಮಕ್ಕಳು ಚೆನ್ನಾಗಿ ಓದಬೇಕು ಎನ್ನುವುದು ಸರ್ಕಾರದ ಉದ್ದೇಶ. ಇಂದು ಚೆನ್ನಾಗಿ ಓದಿಕೊಂಡರೆ ಮುಂದೆ ಒಳ್ಳೆ ಕೆಲಸ ಜೊತೆಗೆ ಹೆಚ್ಚಿನ ಸಂಬಳ ಪಡೆದು ಮಕ್ಕಳ ಬದುಕು ಹಸನಾಗುತ್ತದೆ. ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಹಾಯ ಆಗಲಿ ಎಂದು ಸರ್ಕಾರವು ಉಚಿತ ಸಮವಸ್ತ್ರ, ಬಿಸಿಯೂಟ, ಸ್ಕಾಲರ್ಶಿಪ್ ಇದೆಲ್ಲವನ್ನು ಸಹ ನೀಡುತ್ತಿದೆ.

ಇದರ ಜೊತೆಗೆ ಈಗ ಸರ್ಕಾರವು ಹೊಸ ಸ್ಕಾಲರ್ಶಿಪ್ ಅನ್ನು ಕೂಡ ನೀಡುವುದಕ್ಕೆ ಮುಂದಾಗಿದೆ. ಈ ಸ್ಕಾಲರ್ಶಿಪ್ ಅನ್ನು ವಿಶೇಷವಾಗಿ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಎಲ್ಲಾ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿವೇತನದ (Scholarship) ಸೌಲಭ್ಯವನ್ನು ಪಡೆಯಬಹುದು. ಹಾಗಿದ್ದಲ್ಲಿ ಇದರ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳೋಣ..

ಕೇವಲ ₹800 ರೂಪಾಯಿ ಬಂಡವಾಳ ಹಾಕಿ ಈ ಬ್ಯುಸಿನೆಸ್ ಶುರು ಮಾಡಿ, ದಿನಕ್ಕೆ ₹1000 ಲಾಭ ಪಕ್ಕ!

ಕ್ರೀಡಾಪಟುಗಳಿಗೆ ಸ್ಕಾಲರ್ಶಿಪ್

ಸರ್ಕಾರವು ಈಗ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಕೊಡುಗೆಯನ್ನು ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ. ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗಲಿದ್ದು, ಮುಂದೆ ಅವರು ದೊಡ್ಡ ಕ್ರೀಡಾಪಟು ಆಗಲು ಸರ್ಕಾರ ಸಹಾಯ ಮಾಡುತ್ತದೆ. ಪ್ರತಿ ವರ್ಷ ಆ ವಿದ್ಯಾರ್ಥಿಗಳಿಗೆ ₹10,000 ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಸೌಲಭ್ಯವನ್ನು ಪಡೆಯಬಹುದು.

ಈ ವರ್ಷ ಈ ಸ್ಕಾಲರ್ಶಿಪ್ ಪಡೆಯುವುದಕ್ಕೆ ಅರ್ಜಿ ಆಹ್ವಾನ ಸರ್ಕಾರ ನೀಡಿದ್ದು, ಒಂದು ವೇಳೆ ನೀವು ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಹೊಂದಿದ್ದರೆ, ಸೇವಾಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. https://sevasindhuservices.karnataka.gov.in ಇದು ಸ್ಕಾಲರ್ಶಿಪ್ ಲಿಂಕ್ ಆಗಿದ್ದು, ಈ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕ ಆಗಿದೆ.

ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್, ಜೂನ್ 17 ರಂದು ಬ್ಯಾಂಕ್ ಗಳು ಬಂದ್! ಕಾರಣ ಇಲ್ಲಿದೆ ತಿಳಿಯಿರಿ

Education Scholarshipಸರ್ಕಾರದ ನಿಯಮಗಳು

*ಅರ್ಜಿ ಹಾಕುವ ವಿದ್ಯಾರ್ಥಿ 2023-24ನೇ ಸಾಲಿನಲ್ಲಿ 6 ರಿಂದ 10ನೇ ತರಗತಿ ಒಳಗೆ ಓದುತ್ತಿರುವ ವಿದ್ಯಾರ್ಥಿ ಆಗಿರಬೇಕು.

*ಅರ್ಜಿ ಹಾಕುವ ವಿದ್ಯಾರ್ಥಿಯು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ಸ್ಥಾನದಲ್ಲಿ ಗೆದ್ದಿರಬೇಕು ಅಥವಾ ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರಬೇಕು.

*ಹೆಚ್ಚು ಸ್ಪೋರ್ಟ್ಸ್ ಗಳಲ್ಲಿ ವಿದ್ಯಾರ್ಥಿ ಭಾಗಿ ಆಗಿದ್ದರು ಸಹ, ಅವರಿಗೆ ಸ್ಕಾಲರ್ಶಿಪ್ ಸಿಗುವುದು ಒಂದೇ ಮೊತ್ತಕ್ಕೆ ಮಾತ್ರ.

*2023ರ ಏಪ್ರಿಲ್ 1 ರಿಂದ 2024ರ ಮಾರ್ಚ್ 31ರ ಒಳಗೆ ನಡೆದಿರುವ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ, ಮೊದಲ ಸ್ಥಾನ ಪಡಿದಿರಬೇಕು.

ಲಕ್ಷಾಂತರ ಗ್ರಾಹಕರಿಗೆ ರಾತ್ರೋ-ರಾತ್ರಿ ಶಾಕ್ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! ಏನು ಗೊತ್ತಾ?

ಅಗತ್ಯವಿರುವ ದಾಖಲೆಗಳು

*ಆಧಾರ್ ಕಾರ್ಡ್
*ಕ್ರೀಡಾಪಟು ಎಂದು ಹೇಳಲು ಬೇಕಿರುವ ದಾಖಲೆಗಳು
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಈ ವರ್ಷದ ಅಡ್ಮಿಶನ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಮಾರ್ಕ್ಸ್ ಕಾರ್ಡ್
https://ysd.karnataka.gov.in/ ಈ ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.

Scholarship for students studying in class 6 to 10th, Apply for the scheme

Related Stories