ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೊರಟ್ರಾ! ಈ ವಿಚಾರಗಳು ನೆನಪಿರಲಿ
Second Hand Car: ನೀವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸೋಕೆ ಆಲೋಚಿಸ್ತಿದ್ದೀರಾ? ಮೊದಲು ಈ ಪ್ರಮುಖ ಅಂಶಗಳನ್ನು ಗಮನದಲ್ಲಿಡಿ. ಸರಿಯಾಗಿ ಪರಿಶೀಲಿಸದೇ ಖರೀದಿ ಮಾಡಿದ್ರೆ ಭಾರೀ ನಷ್ಟ ಅನುಭವಿಸಬೇಕಾದೀತು!
- ಸೆಕೆಂಡ್ ಹ್ಯಾಂಡ್ ಖರೀದಿಸೋದು ಲಾಭವೇ?
- ಬಜೆಟ್ ಸಮಸ್ಯೆಯಿಂದಾಗಿ ಸೆಕೆಂಡ್ ಹ್ಯಾಂಡ್ ಕಾರು ಸೂಕ್ತ ಆಯ್ಕೆ
- ಇಂಜಿನ್ (Engine), ಗೇರ್‌ಬಾಕ್ಸ್ (Gearbox), ಬಾಡಿ (Body) ಚೆಕ್ ಮಾಡಿ
Second Hand Car: ಈ ದಿನಗಳಲ್ಲಿ ಹೊಸ ಕಾರು ಖರೀದಿ ಮಾಡಲು ಹೆಚ್ಚಿನ ವೆಚ್ಚ ಬೇಕಾಗುತ್ತದೆ. ಆದ್ದರಿಂದ ಹಲವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ಪರಿ ಹೆಚ್ಚು ಕಾಣಿಸುತ್ತಿದೆ.
ಸಣ್ಣ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಕಾರು (Cars) ಲಭ್ಯವಿರುವುದರಿಂದ, ಇದು ಜನಪ್ರಿಯ ಆಯ್ಕೆಯಾಗುತ್ತಿದೆ. ಆದರೆ, ಖರೀದಿ ಮಾಡುವ ಮೊದಲು ಕೆಲವೊಂದು ಪ್ರಮುಖ ಅಂಶಗಳನ್ನು ಪರಿಶೀಲಿಸದೇ ಇದ್ದರೆ, ಅದು ಭಾರೀ ನಷ್ಟಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಮೊದಲು ಕಾರಿನ ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಿ
ಬಳಕೆ ಮಾಡಿದ ಕಾರು ಬಹುತೇಕ ಚೆನ್ನಾಗಿ ಕಾಣಿಸಬಹುದು, ಆದರೆ ಅದು ಒಳಗಿನ ತಾಂತ್ರಿಕ ದೋಷಗಳನ್ನು ಹೊಂದಿರಬಹುದು. ಕಾರು ಮ್ಯಾಕಾನಿಕ್ ಸಹಾಯ ಪಡೆದು, ಇಂಜಿನ್, ಬ್ರೇಕ್, ಗೇರ್‌ಬಾಕ್ಸ್, ಹಾಗೂ ಇಂಧನ ವ್ಯವಸ್ಥೆಯನ್ನು ಚೆಕ್ ಮಾಡಿಸಿಕೊಳ್ಳಿ.
ಈಚೆಗೆ ದುರಸ್ಥಿ ಮಾಡಲಾದ ಹಳೆಯ ಕಾರುಗಳನ್ನು ಒಬ್ಬ ಸಾಮಾನ್ಯ ಗ್ರಾಹಕರು ಗುರುತಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಒಳ್ಳೆಯ ಮ್ಯಾಕಾನಿಕ್ ನಿಂದ ಪರಿಶೀಲನೆ ಮಾಡಿಸಿಕೊಳ್ಳುವುದು ಸೂಕ್ತ.
ಇದನ್ನೂ ಓದಿ: ಸಿಕ್ಕಾಪಟ್ಟೆ ಕಡಿಮೆ ಬಡ್ಡಿಗೆ ಲೋನ್ ಪಡೆಯೋ ಸೀಕ್ರೆಟ್ ಟಿಪ್ಸ್ ಇಲ್ಲಿದೆ
ಇಂಜಿನ್ (Engine) ಮತ್ತು ಗೇರ್‌ಬಾಕ್ಸ್ (Gearbox) ಪರಿಶೀಲನೆ
ಇಂಜಿನ್ ಕಾರಿನ ಎಲ್ಲ ಅಂಶಗಳಲ್ಲಿ ಬಹಳ ಮುಖ್ಯ. ಇಂಜಿನ್‌ನಿಂದ ಯಾವುದೇ ಶಬ್ದ ಬರುತ್ತಿದೆಯಾ? ಆಯಿಲ್ (Oil) ಲೀಕ್ ಆಗುತ್ತಿದ್ದೆಯಾ? ಗೇರ್‌ಬಾಕ್ಸ್ ಮೃದುವಾಗಿ ಕೆಲಸ ಮಾಡುತ್ತದೆಯೇ? ಈ ಅಂಶಗಳನ್ನು ಗಮನಿಸದೆ ಕಾರು ಖರೀದಿ ಮಾಡಿದ್ದರೆ ನಂತರ ಭಾರೀ ದುರಸ್ತಿ ವೆಚ್ಚ ಎದುರಾಗಬಹುದು.
ಬಾಡಿ (Body) ಹಾಗೂ ಬಣ್ಣದ ಗುಣಮಟ್ಟವನ್ನು ಗಮನಿಸಿ
ಕೆಲವು ಕಾರುಗಳು ಅಪಘಾತಕ್ಕೊಳಗಾಗಿ ದುರಸ್ಥಿ ಮಾಡಿರಬಹುದು. ಕಾರಿನ ಮೇಲ್ಮೈಯಲ್ಲಿ (ಪೇಂಟ್) ಯಾವುದೇ ಬಣ್ಣದ ವ್ಯತ್ಯಾಸವಿದೆಯಾ? ಡೆಂಟ್‌ಗಳು ಅಥವಾ ಗೀರುಗಳು ಇದ್ದರೂ ಗಮನಿಸಿ. ವಾಹನದ ಮೆಟಲ್ ಬಾಡಿಯಲ್ಲಿ ಯಾವುದೇ ಬದಲಾವಣೆ ಇದ್ದರೆ ಅದು ಅಪಘಾತಕ್ಕೊಳಗಾದ ಕಾರಣವಾಗಿರಬಹುದು.
ಇದನ್ನೂ ಓದಿ: 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ಬೆಸ್ಟ್ CNG ಕಾರುಗಳು
ಪೆಟ್ರೋಲ್, ಡೀಸೆಲ್ ಅಥವಾ CNG? RC ಕಡ್ಡಾಯವಾಗಿ ನೋಡಬೇಕು!
ಕೆಲವರು ಬಳಕೆ ಮಾಡಿದ ಕಾರುಗಳನ್ನು CNG ಗೆ ಪರಿವರ್ತಿಸಿ ಬಳಸುತ್ತಾರೆ. ಆದರೆ ಈ ಬದಲಾವಣೆಗಳು ವಾಹನದ ಆರ್‌ಸಿ (Registration Certificate) ಯಲ್ಲಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ ನಂತರದ ಹಂತದಲ್ಲಿ ಸಮಸ್ಯೆ ಎದುರಾಗಬಹುದು.
ಸೈಲೆನ್ಸರ್‌ನಿಂದ ಬರುವ ಹೊಗೆಯನ್ನು ಗಮನಿಸಿ
ಸೈಲೆನ್ಸರ್‌ನಿಂದ ಕಪ್ಪು ಅಥವಾ ನೀಲಿ ಹೊಗೆ ಬರುತ್ತಿದೆಯಾ? ಇದರಿಂದ ಇಂಜಿನ್‌ನಲ್ಲಿ ತೊಂದರೆ ಇರಬಹುದೆಂಬುದು ಸ್ಪಷ್ಟವಾಗುತ್ತದೆ. ಇಂತಹ ಸಮಸ್ಯೆ ಇರುವ ಕಾರು ಖರೀದಿಸದಿರುವುದು ಉತ್ತಮ.
ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೂ ಸಿಗುತ್ತೆ ಹೋಂ ಲೋನ್! ಬ್ಯಾಂಕ್ ಬಂಪರ್ ಆಫರ್
ಚಾಸಿಸ್ (Chassis) ನಂಬರ್ ದಾಖಲೆಗಳೊಂದಿಗೆ ಪರಿಶೀಲಿಸಿ
ಪೇಪರ್‌ನಲ್ಲಿ ಇರುವ ಚಾಸಿಸ್ ನಂಬರ್ ಮತ್ತು ಕಾರಿನ ಮೆಟಲ್ ಬಾಡಿಯಲ್ಲಿರುವ ನಂಬರನ್ನು ಹೋಲಿಸಿ. ಇದು ಸರಿಹೊಂದದಿದ್ದರೆ ಅದು ದಾಖಲೆಗಳ ಗೊಂದಲವಿರುವ ಕಾರಾಗಿರಬಹುದು.
ಟೆಸ್ಟ್ ಡ್ರೈವ್ ಮಾಡಿದರೆ ಎಲ್ಲವೂ ಗೊತ್ತಾಗುತ್ತೆ!
ಟೆಸ್ಟ್ ಡ್ರೈವ್ ಮಾಡುವ ಮೂಲಕ ನೀವು ಕಾರಿನ ಸ್ಥಿತಿ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು. ಕನಿಷ್ಠ 20 ನಿಮಿಷಗಳ ಕಾಲ ಕಾರನ್ನು ಚಾಲನೆ ಮಾಡಬೇಕು. ವೇಗ (Speed) ಬದಲಾಯಿಸಿದಾಗ ಏನಾದರೂ ತೊಂದರೆ ಉಂಟಾಗುತ್ತಿದೆಯಾ? ಗೇರ್ ಬದಲಾವಣೆಯಲ್ಲಿ ತೊಂದರೆ ಇದೆಯೇ? ಈ ಅಂಶಗಳನ್ನ ಪರೀಕ್ಷಿಸಿ ಖರೀದಿಸುವ (Buy Second Hand Car) ನಿರ್ಧಾರ ಕೈಗೊಳ್ಳಿ.
Second Hand Car, Things You Must Check Before Buying a Used Car