ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ ಸಾಲ! ಈ ರೀತಿಯಾಗಿ ಅರ್ಜಿ ಸಲ್ಲಿಸಿ

Story Highlights

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (Karnataka Sheep and Wool Development Corporation) ಕಡೆಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಬ್ಸಿಡಿ ಸಾಲ (Subsidy Loan) ನೀಡಲಾಗುತ್ತದೆ.

Loan Scheme : ನಮ್ಮ ರಾಜ್ಯದಲ್ಲಿ ಈಗ ಕುರಿ ಮತ್ತು ಮೇಕೆಗಳ ಮಾಂಸಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಹಾಗಾಗಿ ಇವುಗಳ ಉತ್ಪಾದನೆ ಸಹ ಜಾಸ್ತಿ ಆಗಬೇಕು ಎಂದು ಸರ್ಕಾರ ನಿರ್ಧಾರ ಮಾಡಿದ್ದು, ಇವುಗಳ ಸಾಕಾಣಿಕೆ, ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (Karnataka Sheep and Wool Development Corporation) ಕಡೆಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಬ್ಸಿಡಿ ಸಾಲ (Subsidy Loan) ನೀಡಲಾಗುತ್ತದೆ. ಅರ್ಹತೆ ಇರುವ ರೈತರು ಈ ಸಾಲ ಸೌಲಭವನ್ನು ಪಡೆಯಬಹುದು.

ಈ ಯೋಜನೆಯ ಸೌಲಭ್ಯಗಳು:

*ಕಷ್ಟದಲ್ಲಿರುವ ಕುರಿ ಸಾಕುವವರಿಗೆ ಕುರಿಗಳ ನಿರ್ವಹಣೆಗೆ ದೊಡ್ಡಿ ನಿರ್ಮಿಸಲು ಮತ್ತು ವಸತಿ ಏರ್ಪಾಡು ಮಾಡಲು 5 ಲಕ್ಷದವರೆಗು Loan ಸಿಗುತ್ತದೆ.

*ಕುರಿ ಮೇಕೆ ಸೊಸೈಟಿಯನ್ನು ಸಹ ಸ್ಥಾಪಿಸಲಾಗಿದ್ದು, ಈ ಸಂಘಗಳಿಗೆ 5 ಲಕ್ಷದವರೆಗೂ Loan ಸಿಗುತ್ತದೆ. ಈ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಸಾಕಷ್ಟು ರೀತಿಯ ಸೌಲಭ್ಯಗಳು ಸಹ ಸಿಗುತ್ತದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು.

*ಒಂದು ವೇಳೆ ಕುರಿಕಾಯುವವರು ಮೃತರಾದರೆ ಅವರ ಮನೆಯವರಿಗೆ 5 ಲಕ್ಷದವರೆಗು ವಿಮೆಯ (Insurance) ಸೌಲಭ್ಯ ಸಿಗಲಿದೆ.

*ಒಂದು ವೇಳೆ ಕುರಿ ಅಥವಾ ಮೇಕೆಗಳು ಪ್ರಕೃತಿ ವಿಕೋಪದ ಕಾರಣ ಮರಣ ಹೊಂದಿದರೆ, ಅವುಗಳಿಗೆ ವಿಮೆಯ ಸೌಲಭ್ಯ ಇದ್ದು, ಅನುಗ್ರಹ ಯೋಜನೆಯಲ್ಲಿ ಇದಕ್ಕೆ ಸಹಾಯ ಸಿಗಲಿದ್ದು, 6 ವರ್ಷ ಮೇಲ್ಪಟ್ಟ ಕುರಿ ಅಥವಾ ಮೇಕೆಗೆ ₹5000 ವಿಮೆ ಹಣ, 3-6 ವರ್ಷದ ಕುರಿ ಮೇಕೆಗಳಿಗೆ ₹3500 ರೂಪಾಹಿ ವಿಮೆ ಸಿಗುತ್ತದೆ.

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಸಿಗುತ್ತೆ 2 ರಿಂದ 3 ಲಕ್ಷದವರೆಗು ಸಾಲ! ಇಂದೇ ಅರ್ಜಿ ಸಲ್ಲಿಸಿ

*ಈ ಸಂಘದಲ್ಲಿರುವ ಎಲ್ಲರಿಗು ಕುರಿ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತರಬೇತಿ ನೀಡುವುದರ ಜೊತೆಗೆ, ಜಂತುನಾಶಕ ಔಷಧಿಗಳನ್ನು ಫ್ರೀಯಾಗಿ ಕೊಡಲಾಗುತ್ತದೆ.

*ಕುರಿ ತಳಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಸಹ ಇದ್ದು, ಅವುಗಳ ಮೂಲಕ ಮಿಶ್ರತಳಿ ಟಗರು ಗಳ ಅಭಿವೃದ್ಧಿಗೆ ಧನಸಹಾಯ, ಹಾಗೆಯೇ ಯಂತ್ರಗಳನ್ನು ಸಹ ಒದಗಿಸಲಾಗುವುದು.

*ಕುರಿಗಳಿಗೆ ಜಂತುನಾಶಕಗಳನ್ನು ನೀಡಲು, ಈ ಯೋಜನೆಗಳ ಅಡಿಯಲ್ಲಿ ಯಂತ್ರಗಳನ್ನು ಕೊಡಲಾಗುತ್ತದೆ, ಅವುಗಳ ಮೂಲಕ ಔಷಧಿ ಕುಡಿಸಬಹುದು.

*ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದವರಿಗೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳ ವತಿಯಿಂದ 6+1 ಕುರಿ ಮೇಕೆ ಘಟಕ ವಿತರಣೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ 10+1 ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ಸಿಗಲಿದೆ.

*ಬೇರೆ ಬೇರೆ ಊರುಗಳಿಗೆ ಹೋಗುವ ಕುರಿಗಾಹಿಗಳಿಗೆ ಅನುಕೂಲ ಆಗಲಿ ಎಂದು ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಫ್ಲೋರ್ ಮ್ಯಾಟ್ ಇದೆಲ್ಲವನ್ನು ಸಹ ಕೊಡಲಾಗುತ್ತದೆ.

ಇಂದು ಚಿನ್ನದ ಬೆಲೆ ಹೇಗಿದೆ ಗೊತ್ತಾ? ಭಾನುವಾರ (ಜೂನ್ 30, 2024) ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

Sheep and goat farmingಅಮೃತ ಸ್ವಾಭಿಮಾನಿ ಯೋಜನೆ:

ಕುರಿ ಮೇಕೆ ಸಾಕಾಣಿಕೆಗೆ ಈಗಾಗಲೇ ಇಷ್ಟೆಲ್ಲಾ ಸೌಲಭ್ಯವಿದೆ. ಅವುಗಳ ಜೊತೆಗೆ ಈಗ ಅಮೃತ ಸ್ವಾಭಿಮಾನಿ ಯೋಜನೆಯ ಮೂಲಕ 20+1 ಕುರಿಗಳ ಕುರಿ ಅಥವಾ ಮೇಕೆಗಳಿಗೆ ಘಟಕ ಸ್ಥಾಪನೆ ಮಾಡಲು 1.75 ಲಕ್ಷದವರೆಗು ಹಣಕಾಸಿನ ಸಹಾಯ ಮಾಡಲಾಗುತ್ತದೆ.

ರೈತರಿಗೆ ಇದು ಹೆಚ್ಚು ಅನುಕೂಲ ನೀಡುವ ಯೋಜನೆ. ಕುರಿ ಸಾಕಣಿಕೆ ಸಂಘಗಳಲ್ಲಿ ಸದಸ್ಯರಾಗಿ ಇರುವವರಿಗೆ ಈ ಸಾಲ ಸಿಗಲಿದ್ದು, ಇದರಲ್ಲಿ 50% ಸಾಲವಾಗಿರುತ್ತದೆ, 25% ರಾಜ್ಯ ಸರ್ಕಾರದಿಂದ ಸಿಗುವ ಸಹಾಯಧನ, ಇನ್ನು 25% ಸಾಲದ ಮೊತ್ತವನ್ನು ಫಲಾನುಭವಿಗಳ ವಂತಿಕೆ ಮೂಲಕ ಅನುಷ್ಠಾನ ಮಾಡಿಕೊಡಲಾಗುತ್ತದೆ.

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೂ ಸಾಲ! ಬಂಪರ್ ಕೊಡುಗೆ

ಯಾರೆಲ್ಲಾ ಈ ಸೌಲಭ್ಯ ಪಡೆಯಬಹುದು:

ನಮ್ಮ ರಾಜ್ಯದಲ್ಲಿ ಕುರಿ ಮೇಕೆ ಸಾಕಾಣಿಕೆಗೆ ಸಹಾಯ ಆಗಲಿ ಎಂದು ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಅಭಿವೃದ್ಧಿ ನಿಗಮವು ನಮ್ಮ ಇಡೀ ರಾಜ್ಯದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕರ ಸಂಘಗಳನ್ನು ಶುರು ಮಾಡಿದೆ.

ನಮ್ಮ ರಾಜ್ಯದಲ್ಲಿ ಹೋಬಳಿ ಮಟ್ಟವನ್ನು ಗಮನಿಸಿದರೆ ಸುಮಾರು 15,000 ಸಂಘಗಳನ್ನು ನೋಡಬಹುದು. ಜೊತೆಗೆ ಸಾಕಷ್ಟು ಕುರಿ ಸೊಸೈಟಿಗಳು ಕೂಡ ಇದೆ. ಈ ಸಂಘಗಳ ಮೂಲಕ ಎಲ್ಲಾ ಸೌಲಭ್ಯ ಜನರನ್ನು ತಲುಪುತ್ತದೆ. ಈ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಈ ಎಲ್ಲಾ ಸೌಲಭ್ಯಗಳು ಸಿಗುತ್ತದೆ.

Sheep and goat farming will get subsidy loans from the government

Related Stories