ಆಧಾರ್ ಕಾರ್ಡ್ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ; UIDAI ಸೂಚನೆ!
Aadhaar Card : ಯುಐಡಿಎಐ (UIDAI) ಆಧಾರ್ ಕಾರ್ಡ್ ನೋಂದಣಿ (Aadhaar card registration) ಹಾಗೂ ನವೀಕರಣಕ್ಕೆ ಸಂಬಂಧಪಟ್ಟ ಹಾಗೆ ಮಹತ್ವದ ಬದಲಾವಣೆಯನ್ನು ಮಾಡಿದೆ.
Aadhaar Card : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) ಆಧಾರ್ ಕಾರ್ಡ್ ನೋಂದಣಿ (Aadhaar card registration) ಹಾಗೂ ನವೀಕರಣಕ್ಕೆ ಸಂಬಂಧಪಟ್ಟ ಹಾಗೆ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಗ್ರಾಹಕರು ಆಧಾರ್ ಕಾರ್ಡ್ ಬಳಸುವ ಮುನ್ನ ಈ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
ಅರ್ಜಿ ಸಲ್ಲಿಸಲು ಆಫ್ಲೈನ್ ಮತ್ತು ಆನ್ಲೈನ್ ಅವಕಾಶ (Apply in offline & online)
ಸೆಂಟ್ರಲ್ ಐಡೆಂಟಿಟೀಸ್ ಡೇಟಾ ರೆಪೊಸಿಟರಿಯಲ್ಲಿ (CIDR) ಮಾಹಿತಿಯ ನವೀಕರಣವನ್ನು, ದಾಖಲಾತಿ ಕೇಂದ್ರದಲ್ಲಿ ಅಥವಾ ಆನ್ಲೈನ್ ನಲ್ಲಿ ವೆಬ್ಸೈಟ್ ಮೂಲಕ ಮಾಡಿಕೊಳ್ಳಬಹುದು. 2016ರ ನಿಯಮದ ಪ್ರಕಾರ ಆಧಾರ್ ದಾಖಲೆಯಲ್ಲಿ ವಿಳಾಸ (Aadhaar card address change) ನವೀಕರಣಕ್ಕಾಗಿ ಮಾತ್ರ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿತ್ತು. ಹಾಗೂ ಉಳಿದಂತೆ ಬೇರೆ ಯಾವುದೇ ಬದಲಾವಣೆಗೆ ಕೇಂದ್ರ ಕಚೇರಿಗೆ ಭೇಟಿ ನೀಡಬೇಕಿತ್ತು. ಆದರೆ ಹೊಸ ನಿಯಮದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.
ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3,000 ಪಿಂಚಣಿ, ಯೋಜನೆಗೆ ನೋಂದಾಯಿಸಿಕೊಳ್ಳಿ!
ಆಧಾರ್ ನೋದಾವಣೆಯಲ್ಲಿ ತರಲಾಗಿರುವ ಹೊಸ ಬದಲಾವಣೆ ಏನು?
ಆಧಾರ್ ನೋಂದಣಿ ಮತ್ತು ನವೀಕರಣಕ್ಕಾಗಿ ಫಾರಂ 1ನ್ನು ಬಳಸಲಾಗುತ್ತದೆ. ಇದನ್ನು ಈಗ ಹೊಸದರೊಂದಿಗೆ ಬದಲಾಯಿಸಲಾಗಿದ್ದು, ಫಾರ್ಮ್ 1 ನ್ನು 18 ವರ್ಷ ಮೇಲ್ಪಟ್ಟ ಭಾರತೀಯ ನಿವಾಸಿಗಳು ಹಾಗೂ ಅನಿವಾಸಿ ಭಾರತೀಯ ನಿವಾಸಿಗಳು ಆಧಾರ್ ನವೀಕರಣಕ್ಕಾಗಿ ಬಳಸಿಕೊಳ್ಳಬಹುದು.
ಆಧಾರ್ ಕಾರ್ಡ್ ನಲ್ಲಿ ಸಂಪೂರ್ಣ ಜನ್ಮ ದಿನಾಂಕವನ್ನು ಮುದ್ರಿಸಲು ಬಯಸಿದರೆ, ಸಾಕ್ಷ ಚಿತ್ರ ಪುರಾವೆ ಒದಗಿಸಬೇಕು.
ಆಧಾರ್ ನವೀಕರಣವನ್ನು ಕುಟುಂಬದ ಮುಖ್ಯಸ್ಥರ ದೃಢೀಕರಣದ ಆಧಾರದ ಮೇಲೆ ಹಾಗೂ ಡಾಕ್ಯುಮೆಂಟ್ ಪರೀಕ್ಷೆಯ ಆಧಾರದ ಮೇಲೆ ಮಾಡಬಹುದು. ಇದಕ್ಕೆ ಫಾರ್ಮ್ 1, ಕುಟುಂಬದ ಮುಖ್ಯಸ್ಥರ ಸಹಿ ಬೇಕಾಗುತ್ತದೆ.
ನಿನ್ನೆಯವರೆಗೂ ಕುಸಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್
NRI ಮಕ್ಕಳಿಗೆ ಆಧಾರ್ ಕಾರ್ಡ್ ನವೀಕರಣಕ್ಕೆ ಭಾರತೀಯ ಪಾಸ್ಪೋರ್ಟ್ ಅನ್ನು ಆಧಾರವಾಗಿ ನೀಡಬೇಕು. ಭಾರತದಿಂದ ಹೊರಗೆ ಇರುವ ವ್ಯಕ್ತಿಗೆ ವಿಳಾಸದ ಪುರಾವೆ ನೀಡಲು ಫಾರ್ಮ್ ನಂಬರ್ 2 ಬಳಕೆ ಮಾಡಬೇಕು.
ಐದು ವರ್ಷದ ಮೇಲ್ಪಟ್ಟ ಮಕ್ಕಳ ಆಧಾರ ನವೀಕರಣಕ್ಕೆ ಅಂದರೆ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಆಧಾರ ನೋಂದಾವಣೆಗೆ ಫಾರ್ಮ್ 3 ಬಳಸಲಾಗುತ್ತದೆ.
ಭಾರತದ ಹೊರಗಿನ ವಿಳಾಸವನ್ನು ಹೊಂದಿರುವ ಎನ್ಆರ್ಐ ಮಕ್ಕಳು ಫಾರ್ಮ್ 4 ಬಳಸಬೇಕು.
ಐದು ವರ್ಷಕ್ಕಿಂತ ಕಡಿಮೆ ಮನಸ್ಸಿನ ಭಾರತೀಯ ಹಾಗೂ ಅನಿವಾಸಿ ಭಾರತೀಯ ಮಕ್ಕಳು ಆಧಾರ್ ನೋಂದಣಿ ಮತ್ತು ನವೀಕರಣ ಫಾರ್ಮ್ 5 ಬಳಸಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮತ್ತೊಂದು ಹೊಸ ಠೇವಣಿ ಯೋಜನೆ ಪ್ರಾರಂಭ!
5 ವರ್ಷಕ್ಕಿಂತ ಕಡಿಮೆ ವಯಸ್ಸಿನ NRI ಮಕ್ಕಳು ಭಾರತದ ಹೊರಗಿನ ವಿಳಾಸವನ್ನು ಹೊಂದಿದ್ದರೆ ಫಾರ್ಮ್ 6 ಬಳಸಬೇಕು.
18 ವರ್ಷಕ್ಕಿಂತ ಮೇಲ್ಪಟ್ಟ ವಿದೇಶಿ ಪ್ರಜೆಯು ಭಾರತದಲ್ಲಿ ನೆಲೆಸಿದ್ದರೆ ಫಾರ್ಮ್ 7 ಬಳಸಬೇಕು. ನೋಂದಣಿಗಾಗಿ ವಿದೇಶಿ ಪಾಸ್‌ಪೋರ್ಟ್, OCI ಕಾರ್ಡ್, ಮಾನ್ಯವಾದ ದೀರ್ಘಾವಧಿಯ ವೀಸಾ ಒದಗಿಸಬೇಕು. ಇಮೇಲ್ ಐಡಿ ಕಡ್ಡಾಯ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವಾಸಿ ವಿದೇಶಿ ಪ್ರಜೆಗಳು ಫಾರ್ಮ್ 8 ಬಳಸಬೇಕು.
UIDAI, 18 ವರ್ಷ ವಯಸ್ಸಾದ ಮೇಲೆ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಫಾರ್ಮ್ 9 ಬಳಸಬೇಕು.
Significant change in Aadhaar Card Enrollment Rules