ಕಾರಿನ ಮೈಲೇಜ್ ಹೆಚ್ಚಿಸೋದು ಬಹಳ ಸಿಂಪಲ್! ಇಲ್ಲಿದೆ ಟಿಪ್ಸ್, ಜಸ್ಟ್ ಫಾಲೋ ಮಾಡಿ

ಇಂಧನ ಬೆಲೆ ಏರಿಕೆ, ಟ್ರಾಫಿಕ್ ಜಂಜಾಟ ನಡುವೆ ಕಾರಿನ ಮೈಲೇಜ್ ಕಡಿಮೆ ಆಗ್ತಿದೆ ಅಂತ ಚಿಂತೆ ಬೇಡ. ಸಣ್ಣ ಸಣ್ಣ ಟ್ರಿಕ್ಸ್ ಪಾಲಿಸಿದ್ರೆ, ಒಂದು ರೂಪಾಯಿ ಹೆಚ್ಚಾಗದೆ ಕಾರಿನ ಮೈಲೇಜ್ ಸುಲಭವಾಗಿ 25% ಜಾಸ್ತಿ ಮಾಡಬಹುದು.

Increase Car Mileage : ಇಂದು ಕಾರು ಸಿಂಬಲ್ ಆಫ್ ಸ್ಟೇಟಸ್, ಲಗ್ಜುರಿ ಲೈಫ್‌ಸ್ಟೈಲ್ ಅಂತ ಎಲ್ಲರೂ ಭಾವಿಸ್ತಾರೆ. ಆದರೆ ಅದರ ಬೆನ್ನಿಗೆ ಬರುವ ಇಂಧನ ಖರ್ಚು, ಮೆಂಟೈನನ್ಸ್ ವೆಚ್ಚ ಸಣ್ಣ ವಿಷಯವಲ್ಲ. ಹೀಗಾಗಿಯೇ “ಮೈಲೇಜ್ ಹೆಚ್ಚಿಸೋದು ಹೇಗೆ?” ಅನ್ನೋ ಪ್ರಶ್ನೆ ಪ್ರತಿಯೊಬ್ಬ ಡ್ರೈವರ್‌ಗೂ ಬರುತ್ತದೆ.

ಮೈಲೇಜ್ ಹೆಚ್ಚಿಸೋ ಮೊದಲ ಸುಲಭ ಟ್ರಿಕ್ ಎಂದರೆ ಸ್ಮೂತ್ ಡ್ರೈವಿಂಗ್. ಅಚಾನಕ್ ಅಕ್ಸಿಲರೇಟ್ ಅಥವಾ ಪದೇ ಪದೇ ಸ್ಪೀಡ್ ಹೆಚ್ಚಿಸಿ, ಕಡಿಮೆ ಮಾಡಿದ್ರೆ ಇಂಧನ ಹೆಚ್ಚು ಖರ್ಚಾಗುತ್ತೆ. ಆದ್ದರಿಂದ ಕಾರನ್ನು ಸ್ಮೂತ್ ಆಗಿ ಓಡಿಸಿದ್ರೆ ಮೈಲೇಜ್ ಅಚೀವ್ ಆಗುತ್ತೆ.

ಗೇರ್ ಶಿಫ್ಟಿಂಗ್ ಕೂಡ ಮುಖ್ಯ. ಪೆಟ್ರೋಲ್ ಕಾರುಗಳಲ್ಲಿ 2000–2500 RPM, ಡೀಸೆಲ್ ಕಾರುಗಳಲ್ಲಿ 1500–2000 RPMಗೆ ಗೇರ್ ಬದಲಿಸಿದ್ರೆ ಮೈಲೇಜ್ ಸ್ಟೇಬಲ್ ಆಗುತ್ತೆ. ಉದಾಹರಣೆಗೆ, ಮೊದಲ ಗೇರ್ 0-10 km/h, ಎರಡನೇ 10-20, ಮೂರನೇ 20-35, ನಾಲ್ಕನೇ 35-50, ಐದನೇ 50 km/h ಮೇಲಿದೆ. ತಪ್ಪು ಸಮಯಕ್ಕೆ ಗೇರ್ ಇಟ್ಟರೆ ಇಂಜಿನ್ ಮೇಲೆ ಒತ್ತಡ ಬಂದು ಇಂಧನ ಹೆಚ್ಚು ಕರಗುತ್ತದೆ.

ಇದನ್ನೂ ಓದಿ: 5 ಲಕ್ಷಕ್ಕೇ ಕಾರು ಖರೀದಿಸಿ! ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಲೋ-ಬಜೆಟ್ ಆಪ್ಷನ್‌ಗಳು

ಟ್ರಾಫಿಕ್‌ನಲ್ಲಿ 30 ಸೆಕೆಂಡ್‌ಗಿಂತ ಹೆಚ್ಚು ನಿಲ್ಲೋ ಪರಿಸ್ಥಿತಿ ಬಂದರೆ, ಇಂಜಿನ್ ಆಫ್ ಮಾಡ್ಬೇಕು. ಇದು ನೇರವಾಗಿ ಮೈಲೇಜ್ ಹೆಚ್ಚಿಸೋ ಸ್ಮಾರ್ಟ್ ಹ್ಯಾಬಿಟ್. ಇದೇ ರೀತಿಯಲ್ಲಿ ಕಾರಿನ ಟೈರ್ ಪ್ರೆಶರ್ ಕೂಡ ಬಹಳ ಮುಖ್ಯ. ವಾರಕ್ಕೆ ಒಂದು ಬಾರಿ ಚೆಕ್ ಮಾಡಿದ್ರೆ ಸಾಕು. ಹೈವೇ ಡ್ರೈವ್ ಮಾಡಿದ್ರೆ 1-3 PSI ಹೆಚ್ಚಾಗಿ ಇಡೋದ್ರಿಂದ ಕಾರು ಸ್ಮೂತ್ ಆಗಿ ಓಡುತ್ತೆ.

AC ಬಳಕೆಯಲ್ಲೂ ಟ್ರಿಕ್ ಇದೆ. ಕಾರು ಪಾರ್ಕ್ ಮಾಡಿದ ತಕ್ಷಣ AC ಆನ್ ಮಾಡಿದ್ರೆ ಇಂಧನ ಹೆಚ್ಚಾಗಿ ಖರ್ಚಾಗುತ್ತೆ. ಮೊದಲು ಬಾಗಿಲು, ಕಿಟಕಿ ತೆರೆದು ಬಿಸಿ ಗಾಳಿ ಹೊರ ಹಾಕಿ, ನಂತರ AC ಆನ್ ಮಾಡಿದ್ರೆ ಹೆಚ್ಚು ಲಾಭ.

ಮತ್ತೊಂದು ಟಿಪ್ ಅಂದ್ರೆ ಫ್ಯುಯೆಲ್ ಕ್ವಾಲಿಟಿ. ವಿಶ್ವಾಸಾರ್ಹ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಇಂಧನ ಹಾಕಿಸಿ. ಪ್ರತಿ ಫುಲ್ ಟ್ಯಾಂಕ್ ನಂತರ ಮೈಲೇಜ್ ಕ್ಯಾಲ್ಕುಲೇಷನ್ ಮಾಡಿ, ವಾಹನದ ಆರೋಗ್ಯ ಚೆಕ್ ಮಾಡಬಹುದು. ಸಿಎನ್‌ಜಿ ಕಾರುಗಳಿರುವವರು ತಿಂಗಳಲ್ಲಿ ಒಮ್ಮೆ ಪೆಟ್ರೋಲ್‌ನಲ್ಲಿ ಡ್ರೈವ್ ಮಾಡಿದ್ರೆ ಇಂಜಿನ್ ಸ್ವಚ್ಛವಾಗಿರುತ್ತೆ.

ಹೀಗಾಗಿ, ಖರ್ಚು ಮಾಡದೇ, ಚಿಕ್ಕ ಹ್ಯಾಬಿಟ್ ಬದಲಾಯಿಸಿದ್ರೆ ಕಾರಿನ ಮೈಲೇಜ್ 25%ವರೆಗೆ ಹೆಚ್ಚಿಸೋದು ನಿಮ್ಮ ಕೈಯಲ್ಲಿದೆ.

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories