Credit Card: ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ಹಣ ಇಲ್ಲವೇ? ಈ ಒಂದು ಉಪಾಯ ಸಿಬಿಲ್ ಸ್ಕೋರ್ ಉಳಿಸುತ್ತದೆ
Credit Card: ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಕಟ್ಟದಿದ್ದರೆ ಸಿಬಿಲ್ ಸ್ಕೋರ್ ಕುಸಿಯುವ ಅಪಾಯ ಇದೆ. ಆದರೆ ಸರಳ ಹಣಕಾಸು ಶಿಸ್ತು ಸ್ಮಾರ್ಟ್ ಪಾವತಿ ವಿಧಾನಗಳು ಅನುಸರಿಸಿದರೆ ಒತ್ತಡವಿಲ್ಲದೇ ಕ್ರೆಡಿಟ್ ಆರೋಗ್ಯ ಕಾಪಾಡಬಹುದು

- ಕ್ರೆಡಿಟ್ ಕಾರ್ಡ್ ಬಿಲ್ ತಡವಾದರೆ ಸಿಬಿಲ್ ಸ್ಕೋರ್ಗೆ ನೇರ ಹೊಡೆತ
- ಕ್ರೆಡಿಟ್ ಕಾರ್ಡ್ ಪಾವತಿ ಸ್ಮಾರ್ಟ್ ಆಗಿದ್ದರೆ ದಂಡ, ಬಡ್ಡಿ ತಪ್ಪಿಸಬಹುದು
- ಕ್ರೆಡಿಟ್ ಕಾರ್ಡ್ ಬಿಲ್ ಟಿಪ್ಸ್ ಅನುಸರಿಸಿದರೆ ಹಣಕಾಸು ಒತ್ತಡ ಕಡಿಮೆ
Credit Card: ಇಂದಿನ ವೇಗದ ಜೀವನದಲ್ಲಿ ಕ್ರೆಡಿಟ್ ಕಾರ್ಡ್ ಬಹುತೇಕ ಮನೆಗಳಲ್ಲಿ ಅವಶ್ಯಕ ಸಾಧನವಾಗಿಬಿಟ್ಟಿದೆ. ಆದರೆ ಬಿಲ್ ಬಂದಾಗ ಅದನ್ನು ನಿರ್ಲಕ್ಷ್ಯ ಮಾಡಿದರೆ ಅದೇ ಸೌಲಭ್ಯ ದೊಡ್ಡ ತಲೆನೋವಾಗಬಹುದು. ತಡ ಪಾವತಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ಹಲವರಿಗೆ ಅರಿವಾಗುವುದೇ ತಡವಾಗಿ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹಬ್ಬದ ಸೀಸನ್ನಲ್ಲಿ ಕಾರ್ಡ್ ಬಳಕೆ ಹೆಚ್ಚಿದಂತೆ ಬಿಲ್ ಮೊತ್ತವೂ ಹೆಚ್ಚಾಗಿದೆ. ಖರ್ಚು ಮಾಡುವುದು ಸುಲಭವಾದರೂ, ಅದನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುವುದು ಹಣಕಾಸು ಶಿಸ್ತಿನ ನಿಜವಾದ ಪರೀಕ್ಷೆ.
ಪಾವತಿಯಲ್ಲಿ ತಪ್ಪು ಆಗದಂತೆ ನೋಡಿಕೊಳ್ಳಿ
ಬಿಜಿ ದಿನಚರಿಯಲ್ಲಿ ಡ್ಯೂ ಡೇಟ್ ಮರೆತು ಹೋಗುವುದು ಸಾಮಾನ್ಯ. ಅದಕ್ಕಾಗಿ ಬ್ಯಾಂಕ್ ಖಾತೆಯಿಂದ ಆಟೋ ಪೇ ಆಯ್ಕೆಯನ್ನು ಸಕ್ರಿಯಗೊಳಿಸುವುದು ಉತ್ತಮ. ಡ್ಯೂ ದಿನವೇ ಪಾವತಿ ಆಗುವುದರಿಂದ ಲೇಟ್ ಫೀಸ್, ದಂಡಗಳ ಸಮಸ್ಯೆ ಇಲ್ಲ.
ಸಂಬಳ ಬಂದ ಕೂಡಲೇ ಬಿಲ್ ಕ್ಲಿಯರ್ ಮಾಡಿ
ನಿಮ್ಮ ಸಂಬಳ ಕ್ರೆಡಿಟ್ ಆದ ತಕ್ಷಣ ಕಾರ್ಡ್ ಬಿಲ್ ಪಾವತಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ತಿಂಗಳ ಕೊನೆಯಲ್ಲಿ ಬೇರೆ ಖರ್ಚುಗಳಿಂದ ಹಣ ಮುಗಿದು ಬಿಲ್ ಬಾಕಿ ಉಳಿಯುವ ಪರಿಸ್ಥಿತಿ ತಪ್ಪುತ್ತದೆ.
ಸ್ಟೇಟ್ಮೆಂಟ್ ಪರಿಶೀಲನೆ ಮುಖ್ಯ
ಪ್ರತಿ ತಿಂಗಳು ಸ್ಟೇಟ್ಮೆಂಟ್ ಗಮನದಿಂದ ಓದುವುದು ಅಗತ್ಯ. ತಪ್ಪಾದ ಟ್ರಾನ್ಸಾಕ್ಷನ್ಗಳು, ಅನಗತ್ಯ ಚಾರ್ಜ್ಗಳು ಇದ್ದರೆ ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಬಹುದು. ಕ್ಯಾಲೆಂಡರ್ ರಿಮೈಂಡರ್ ಇಡುವುದು ಸಹ ಉಪಯುಕ್ತ.
ಬಿಲ್ ಕಟ್ಟಲು ಆಗದಿದ್ದರೆ ಏನು ಮಾಡಬೇಕು
ಒಮ್ಮೊಮ್ಮೆ ಸಂಪೂರ್ಣ ಬಿಲ್ ಪಾವತಿ ಕಷ್ಟವಾಗಬಹುದು. ಅಂಥ ಸಂದರ್ಭಗಳಲ್ಲಿ ಕನಿಷ್ಠ ಮಿನಿಮಮ್ ಡ್ಯೂ ಆದರೂ ಕಟ್ಟುವುದು ಅತ್ಯವಶ್ಯ. ದೊಡ್ಡ ಮೊತ್ತ ಇದ್ದರೆ ಕಡಿಮೆ ಬಡ್ಡಿಯ EMIಗೆ ಪರಿವರ್ತಿಸಿಕೊಳ್ಳುವುದು ಉತ್ತಮ ಆಯ್ಕೆ. ಬಿಲ್ ಸಂಪೂರ್ಣ ನಿರ್ಲಕ್ಷ್ಯ ಮಾಡುವುದಕ್ಕಿಂತ ಇದು ಬಹಳ ಸುರಕ್ಷಿತ.
ಸಮಯಕ್ಕೆ ಪಾವತಿ ಮಾಡುವ ಸಣ್ಣ ಶಿಸ್ತು ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿಯ ಲೋನ್, ಸುಲಭ ಕ್ರೆಡಿಟ್ ಅನುಮೋದನೆಗೆ ದಾರಿ ಮಾಡಿಕೊಡುತ್ತದೆ.




