ತಮ್ಮದೇ ಆಗಿರುವ ಸ್ವಂತ ಬಿಸಿನೆಸ್ (Own Business) ಮಾಡಬೇಕು ಅನ್ನೋದು ಹಲವರ ಕನಸು. ಅದರಲ್ಲೂ ಕೋವಿಡ್ ಬಂದು ಹೋದ ನಂತರ ಜನ ಉದ್ಯೋಗಗಳಿಗಿಂತಲೂ ಹೆಚ್ಚಾಗಿ ಉದ್ದಿಮೆ ಬಗ್ಗೆ ಒಲವು ತೋರಿಸುತ್ತಿದ್ದಾರೆ.
ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸುವಂತಹ ಉದ್ಯಮದ ಬಗ್ಗೆ ಜನರು ಬೇಗ ಆಕರ್ಷಿತರಾಗುತ್ತಾರೆ. ಹಾಗೆ ನೀವು ಕೂಡ ನಿಮ್ಮದೇ ಆಗಿರುವ ಒಂದು ಸ್ವಂತ ಉದ್ಯಮ ಸ್ಟಾರ್ಟ್ ಮಾಡಬೇಕು ಅಂದುಕೊಂಡಿದ್ದರೆ, ಸಣ್ಣ ಪ್ರಮಾಣದಲ್ಲಿ ಅತಿ ಕಡಿಮೆ ಬಜೆಟ್ ನಲ್ಲಿ ಇದೊಂದು ಉದ್ಯಮವನ್ನು ಸ್ಟಾರ್ಟ್ (Startup) ಮಾಡಬಹುದು.
ಮಾರುಕಟ್ಟೆಯಲ್ಲಿಯೂ ಕೂಡ ಈ ಉದ್ದಿಮೆಗೆ ಹೆಚ್ಚು ಬೇಡಿಕೆ ಇದ್ದು ನೀವು ಇದನ್ನು ಮಾಡಿದರೆ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸಲು ಸಾಧ್ಯ. ಹಾಗಾದ್ರೆ ಯಾವುದು ಅಂತ ಬ್ಯುಸಿನೆಸ್? ಇಲ್ಲಿದೆ ಮಾಹಿತಿ.
ಕೇವಲ 5 ಲಕ್ಷಕ್ಕೆ ಕಾರು ಬಿಡುಗಡೆ ಮಾಡಿದ ಟಾಟಾ, ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!
ಆರಂಭಿಸಿ ಕುಲ್ಹಾಡ್ ಉದ್ದಿಮೆ (Kulhad Cups Business)
ಸಾಂಪ್ರದಾಯಿಕವಾಗಿ ಕುಲ್ಹಾಡ್ ತಯಾರಿಸುವುದು ಅಂದರೆ ಮಣ್ಣಿನಿಂದ ಮಾಡಿರುವ ಚಿಕ್ಕ ಚಿಕ್ಕ ಕಾಫಿ ಕಪ್ಗಳನ್ನು (Copy cup) ಮಾರಾಟ ಮಾಡುವ ಉದ್ಯಮವನ್ನು ನೀವು ಆರಂಭಿಸಬಹುದು. ಮಣ್ಣಿನ ಕಪ್ (Mud cup) ನಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಮಜವೇ ಬೇರೆ.
ಇದು ನಮ್ಮ ಸಾಂಪ್ರದಾಯಿಕ ಪಾನೀಯ ಕುಡಿಯುವ ಪದ್ಧತಿ ಕೂಡ ಹೌದು. ಕರೋನಾ (Corona) ಬಂದು ಹೋದ ನಂತರ ಜನ ಹೆಚ್ಚು ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಾರೆ, ಹಾಗಾಗಿ ಪ್ಲಾಸ್ಟಿಕ್ ಕಪ್ (Plastic Cup) ನಲ್ಲಿ ಚಹಾ ಅಥವಾ ಪೇಪರ್ ಕಪ್ ನಲ್ಲಿ ಕಾಫಿ ಕುಡಿಯುವುದಕ್ಕಿಂತ ಮಣ್ಣಿನ ಕಪ್ ನಲ್ಲಿ ಚಹಾ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ.
ಪ್ಲಾಸ್ಟಿಕ್ ಕಪ್ ಗಳಿಗೆ ಉತ್ತಮ ಪರ್ಯಾಯವಾಗಿ (Alternative) ಮಣ್ಣಿನ ಕಪ್ ಬಳಸಲಾಗುತ್ತದೆ. ಇದು ಪರಿಸರ ಸ್ನೇಹಿ ಕೂಡ ಹೌದು, ಹಾಗಾಗಿ ಇದನ್ನೇ ನೀವು ಬಂಡವಾಳವಾಗಿಸಿಕೊಂಡು ನಿಮ್ಮದೇ ಆದ ಕುಲ್ಹಾಡ್ ತಯಾರಿಸುವ ಹಾಗೂ ಮಾರಾಟ ಮಾಡುವ ಉದ್ದಿಮೆ ಆರಂಭಿಸಬಹುದು.
ನಿಮಗಾಗಿ ಮೀಸಲು ಈ ಉಚಿತ ಪಿಂಚಣಿ ಯೋಜನೆ; ಪಡೆಯಿರಿ ಪ್ರತಿ ತಿಂಗಳು 3 ಸಾವಿರ ಪಿಂಚಣಿ
ಅತಿ ಕಡಿಮೆ ಬಂಡವಾಳದಲ್ಲಿ ಆರಂಭಿಸಿ ಈ ಬ್ಯುಸಿನೆಸ್
ನಿಮಗೆ ಚಿಕ್ಕದಾಗಿ ಈ ಉದ್ಯಮವನ್ನು ಆರಂಭಿಸಲು ಕೇವಲ 5000 ರೂ. ಇದ್ದರೂ ಸಾಕು. ಚಿಕ್ಕ ಜಾಗದಲ್ಲಿ ಸ್ಟಾರ್ಟ್ ಮಾಡಬಹುದು. 2020 ರಲ್ಲಿ ಕೇಂದ್ರ ಸರ್ಕಾರ 25,000 ವಿದ್ಯುತ್ ಮಡಿಕೆ ಚಕ್ರಗಳನ್ನು (electric chalk) ವಿತರಿಸಿದೆ. ಅಳಿವಿನ ಅಂಚಿನಲ್ಲಿ ಇರುವ ಸಾಂಪ್ರದಾಯಿಕ ಕಲೆ ಆಗಿರುವ ಕುಂಬಾರಿಕೆ (Pottery Business) ಯನ್ನು ಜೀವಂತವಾಗಿ ಉಳಿಸಲು ಕುಂಬಾರ ಸಮುದಾಯಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಈ ಮಣ್ಣಿನ ಚಕ್ರ ವನ್ನು ವಿತರಣೆ ಮಾಡಿತ್ತು.
ನೀವು ಈ ಉದ್ಯಮವನ್ನು ಆರಂಭಿಸುವುದಾದರೆ ಸರ್ಕಾರದಿಂದಲೂ ಕೂಡ ಬೆಂಬಲ ಸಿಗುತ್ತದೆ, ಯಾಕೆಂದರೆ ಸಾಂಪ್ರದಾಯಿಕ ಕಲೆಯನ್ನು ಸಕ್ರಿಯವಾಗಿ ಉಳಿಸಿಕೊಳ್ಳಲು ಸರ್ಕಾರವು ಕೂಡ ಹೆಚ್ಚಿನ ಮಾನ್ಯತೆ ನೀಡುತ್ತದೆ.
ಕುಲ್ಹಾಡ್ ಅಥವಾ ಮಣ್ಣಿನ ಕಪ್ಪು ಬಳಸುವುದರ ಮೂಲಕ ಪ್ಲಾಸ್ಟಿಕ್ ಹಾಗೂ ಪೇಪರ್ ಗಳಿಗೆ ಗುಡ್ ಬೈ ಹೇಳಬೇಕು ಎಂದು ರಸ್ತೆ ಹಾಗೂ ಸಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ತಿಳಿಸಿದ್ದಾರೆ. ಹಾಗಾಗಿ ಪರಿಸರ ಸ್ನೇಹಿಯಾಗಿರುವ ಕುಲ್ಹಾಡ್ ಅನ್ನು ಮಾರಾಟ ಮಾಡುವುದು ಅತ್ಯುತ್ತಮ ಬ್ಯುಸಿನೆಸ್ ಐಡಿಯಾ (Business Idea) ಆಗಿದೆ.
ಈ ಎಲ್ಲಾ ಮಾರುತಿ ಕಾರುಗಳ ಮೇಲೆ ರೂ 40,000 ಡಿಸ್ಕೌಂಟ್! ಹಬ್ಬದ ಸೀಸನ್‌ಗೆ ಬಂಪರ್ ಆಫರ್
ಎಷ್ಟಿರುತ್ತೆ ಬೆಲೆ:
ಟೀ, ಕಾಫಿ ಕುಡಿಯುವಂತಹ ಚಿಕ್ಕ ಕಪ್ ಗಳಿಗೆ 100 ಯೂನಿಟ್ ಗೆ 50 ರೂಪಾಯಿಗಳು ಹಾಗೂ ಲಸ್ಸಿ ಮಿಲ್ಕ್ ಸೇವನೆ ಮಾಡುವಂತಹ ಕುಲ್ಹಾಡ್ ಗೆ ಪ್ರತಿ ಯೂನಿಟ್ ಗೆ 150 ರೂ. ಹಾಗೂ ಸಾಮಾನ್ಯ ಕಪ್ ಗೆ 100 ರೂಪಾಯಿಗಳು ಇರುತ್ತವೆ. ಅಂದರೆ ನೀವು ಪ್ರತಿದಿನ 50ರಿಂದ 500 ಚಹಾ ಮತ್ತು ಲಸ್ಸಿ ಕುಡಿಯುವಂತಹ ಕಪ್ ಮಾರಾಟ ಮಾಡಿದ್ರೆ ಸಾವಿರ ರೂಪಾಯಿಗಳವರೆಗೆ ಆದಾಯ ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ ಹಾಗೂ ಹೋಟೇಲಗಳಲ್ಲಿಯೂ ಕೂಡ ಮಣ್ಣಿನ ಕಪ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ, ಹಾಗಾಗಿ ನೀವು ಇಂತಹ ಶಾಪ್ಗಳ ಜೊತೆಗೆ ಟೈ ಅಪ್ ಮಾಡಿಕೊಂಡರೆ ದಿನಕ್ಕೆ ಐದರಿಂದ ಏಳು ಸಾವಿರ ರೂಪಾಯಿಗಳವರೆಗೆ ಗಳಿಸಬಹುದು.
ಅಲ್ಲಿಗೆ ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಲು ನಿಮಗೆ ಸಾಧ್ಯವಾಗುತ್ತದೆ. ಅದರೆ ಮಣ್ಣಿನ ಕಪ್ ಆಗಿರುವುದರಿಂದ ವರ್ಗಾವಣೆ ಸಮಯದಲ್ಲಿ ಒಡೆದುಹೋಗುವ ಸಾಧ್ಯತೆ ಇರುತ್ತದೆ. ಎಚ್ಚರವಹಿಸಿ. ಇಲ್ಲವಾದರೆ ಲಾಸ್ ಆಗಬಹುದು.
ಒಟ್ಟಿನಲ್ಲಿ ಅತಿ ಕಡಿಮೆ ಬಂಡವಾಳ, ಪರಿಸರ ಸ್ನೇಹಿಯಾಗಿರುವ ಮಣ್ಣಿನ ಕಪ್ ಅಥವಾ ಕುಲ್ಹಾಡ್ ತಯಾರಿಸಿ ಮಾರಾಟ ಮಾಡುವ ಬ್ಯುಸಿನೆಸ್ ಅನ್ನು ಆಯ್ಕೆ ಮಾಡಿಕೊಳ್ಳಿ ತಿಂಗಳಿಗೆ ಲಕ್ಷಾನುಗಟ್ಟಲೆ ಹಣವನ್ನು ಸಂಪಾದಿಸಿ.
Start Eco Friendly Kulhad Cups Business with Low Investment, Know this Business Idea
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.