6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
Education scholarship : ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್ ಬಿ ಐ ನ (SBI Bank) ಈ ಆಶಾ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು
Education scholarship : ದೇಶದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ವಿದ್ಯಾಭ್ಯಾಸ ಸಿಗಬೇಕು (education for every child) ಬಡವ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ.
ಇದರ ಜೊತೆ ಜೊತೆಗೆ ಕೆಲವು ಕಂಪನಿಗಳು ಸಿಎಸ್ಆರ್ (CSR activities) ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿ ವೇತನವನ್ನು (scholarship) ನೀಡುವ ಮೂಲಕ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತವೆ, ಅಂತಹ ಕಂಪನಿಗಳಲ್ಲಿ ಎಸ್ ಬಿ ಐ ಬ್ಯಾಂಕ್ ಕೂಡ ಒಂದು.
ಸಿಹಿ ಸುದ್ದಿ! ಈ ಸರ್ಕಾರದ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಸಿಗಲಿದೆ 15 ಲಕ್ಷ ಸಾಲ
ಎಸ್ ಬಿ ಐ ಫೌಂಡೇಶನ್ ಸ್ಕಾಲರ್ಶಿಪ್! (State Bank of India foundation scholarship)
ಎಸ್ ಬಿಐ ಫೌಂಡೇಶನ್ ನ (education vertical integrated learning mission – ILM) ಅಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆರನೇ ತರಗತಿಯಿಂದ ದ್ವಿತೀಯ ಪಿಯುಸಿ (6th to 12th student) ಓದುವ ವಿದ್ಯಾರ್ಥಿಗಳಿಗೆ 10,000 ರೂ. ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್ ಬಿ ಐ ನ (SBI Bank) ಈ ಆಶಾ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
ವಿದ್ಯಾರ್ಥಿವೇತನಕ್ಕೆ ಬೇಕಾಗಿರುವ ಅರ್ಹತೆಗಳು! (Eligibilities)
*6ನೇ ತರಗತಿಯಿಂದ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
*ಈ ವರ್ಷ ಅರ್ಜಿ ಸಲ್ಲಿಸುವುದಾದರೆ ಹಿಂದಿನ ವರ್ಷದ ತರಗತಿಯಲ್ಲಿ 75% ನಷ್ಟು ಮಾರ್ಕ್ಸ್ ಪಡೆದುಕೊಂಡಿರಬೇಕು.
*ಅರ್ಜಿ ಸಲ್ಲಿಸುವ ಅಭ್ಯರ್ಥಿ ಭಾರತೀಯ ಪ್ರಜೆಯಾಗಿರಬೇಕು.
*ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 3,00,000 ಮೀರಬಾರದು.
SBIF ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದರೆ ಹತ್ತು ಸಾವಿರ ರೂಪಾಯಿಗಳ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು.
ಆಧಾರ್ ಉಚಿತ ಸೇವೆ, ಗಡುವು ಮಾರ್ಚ್ 14ರ ತನಕ ಮತ್ತೊಮ್ಮೆ ವಿಸ್ತರಣೆ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ (SBIF) ನೀಡುತ್ತಿರುವ ಆಶಾ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು https://www.sbifoundation.in/focus-area-detail/SBIF-Asha-Scholarship ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಿದರೆ ನೀವು ಸ್ಕಾಲರ್ಶಿಪ್ ಗೆ ಆಯ್ಕೆಯಾಗಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to apply)
*ವಿದ್ಯಾರ್ಥಿಯ ಆಧಾರ್ ಕಾರ್ಡ್
*ವಿದ್ಯಾರ್ಥಿಯ ಬ್ಯಾಂಕ್ ಖಾತೆಯ (Bank Account Details) ವಿವರ ಅಥವಾ ಪಾಲಕರ ಬ್ಯಾಂಕ್ ಖಾತೆಯ ವಿವರ
*ಆದಾಯ ಪ್ರಮಾಣ ಪತ್ರ
*75% ಅಂಕ ಪಡೆದಿರುವುದಕ್ಕೆ ಮಾರ್ಕ್ಸ್ ಕಾರ್ಡ್ ಪ್ರೂಫ್
*ಶಾಲೆಯ ಮುಂದಿನ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದಕ್ಕೆ ಫೀಸ್ ರೆಸಿಪ್ಟ್.
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್
State Bank of India foundation Education scholarship Details