ಸಿಹಿ ಸುದ್ದಿ! ಈ ಸರ್ಕಾರದ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಸಿಗಲಿದೆ 15 ಲಕ್ಷ ಸಾಲ
Subsidy Loan : ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ (agriculture activities) ಅಗತ್ಯವಾಗಿರುವ ವಸ್ತುಗಳನ್ನು ಖರೀದಿ ಮಾಡಲು ಬೇಕಾಗಿರುವ ಧನ ಸಹಾಯವನ್ನು ಸರ್ಕಾರ ಬೇರೆ ಬೇರೆ ರೀತಿಯಿಂದ ಒದಗಿಸುತ್ತಿದೆ.
ಕೆಲವು ಬಡ್ಡಿ ರಹಿತ ಸಾಲ (no interest loan) ಒದಗಿಸಿದರೆ ಇನ್ನೂ ಕೆಲವು ಅತಿ ಕಡಿಮೆ ಬಡ್ಡಿ ದರಕ್ಕೆ ಸಬ್ಸಿಡಿ ಸಾಲವನ್ನು ಕೂಡ ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಕಿಸಾನ್ ಯೋಜನೆಯ (Central Government Kisan scheme) ಅಡಿಯಲ್ಲಿ ಈಗಾಗಲೇ ಸಾಕಷ್ಟು ಪ್ರಯೋಜನವನ್ನು ರೈತ ಕುಟುಂಬ ಪಡೆದುಕೊಳ್ಳುತ್ತಿದೆ, ಇದರ ಜೊತೆಗೆ ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ಬಂದಿದ್ದು, ಈ ಮೂಲಕ ರೈತರು ಬಹಳ ದೊಡ್ಡ ಮೊತ್ತದ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ.
ಆಧಾರ್ ಉಚಿತ ಸೇವೆ, ಗಡುವು ಮಾರ್ಚ್ 14ರ ತನಕ ಮತ್ತೊಮ್ಮೆ ವಿಸ್ತರಣೆ
PM Kisan FPO ಯೋಜನೆ!
ಎಲ್ಲರಿಗೂ ತಿಳಿದಿರುವಂತೆ ದೇಶದ ರೈತರ ಆರ್ಥಿಕ ಸಬಲೀಕರಣಕ್ಕಾಗಿ (farmers financial stability) ಕೇಂದ್ರ ಸರ್ಕಾರ ಪ್ರತಿ ವರ್ಷ 6,000ಗಳನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಅಡಿಯಲ್ಲಿ ವಿತರಣೆ ಮಾಡುತ್ತಿದೆ.
ನಾಲ್ಕು ಕಂತುಗಳಲ್ಲಿ ಪ್ರತಿ ಕಂತಿಗೆ 2 ಸಾವಿರ ರೂಪಾಯಿಗಳಂತೆ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ, ಈವರೆಗೆ 15 ಕಂತಿನ ಹಣವನ್ನು ಜಮಾ ಮಾಡಲಾಗಿದೆ.
ಇದೇ ರೀತಿ ಈಗ ಕೇಂದ್ರ ಸರ್ಕಾರ PM Kisan FPO ಯೋಜನೆಯನ್ನು ಜಾರಿಗೆ ತಂದಿದೆ. 11 ಜನ ರೈತರಿರುವ ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ಸಾಲ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.
ಈ ಯೋಜನೆಯಲ್ಲಿ ಯಾವುದೇ ಒಬ್ಬ ರೈತ ವೈಯಕ್ತಿಕವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದು ರೈತ ಉತ್ಪಾದಕ ಸಂಘವಾಗಿರಬೇಕು ಹಾಗೂ ಈ ಸಂಘದಲ್ಲಿ 11 ಜನ ರೈತ ಸದಸ್ಯರು ಇರುವುದು ಕಡ್ಡಾಯವಾಗಿದೆ.
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್
PM Kisan FPO ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (Apply for FPO loan)
ರೈತ ಸಂಘ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆ ಅಧಿಕೃತ ವೆಬ್ಸೈಟ್ https://www.enam.gov.in/web/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ನಿಮ್ಮದೇ ಆಗಿರುವ ರೈತ ಸಂಘ ಹೊಂದಿದ್ದರೆ FPO ಗೆ ನೋಂದಾಯಿಸಿಕೊಳ್ಳಬೇಕು.
ನಿಮ್ಮ ಸಂಘದ ಸಂಪೂರ್ಣ ವಿವರ ನೀಡಬೇಕು, ಪ್ರತಿಯೊಬ್ಬ ಸದಸ್ಯರ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಬೇಕಾಗುತ್ತದೆ.
ಯಾವುದೇ ಒಬ್ಬ ರೈತ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಬದಲಿಗೆ ತಾವಾಗಿಯೇ 11 ಜನರ ಸದಸ್ಯರಿರುವ ಸಂಘವನ್ನು ಕಟ್ಟಿಕೊಂಡು ನಂತರ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ.
ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿ ಪರಿಶೀಲನೆ ನಡೆಸಲಾಗುತ್ತದೆ, ಬಳಿಕ ಸಾಲ ಸೌಲಭ್ಯ ಸಿಗುತ್ತದೆ. 15 ಲಕ್ಷ ಸಾಲ ಪಡೆದುಕೊಂಡರೆ ಕೃಷಿ ಉತ್ಪಾದಕ ಸಂಘ ಆ ಹಣವನ್ನು ಕೃಷಿ ಚಟುವಟಿಕೆಗಾಗಿ ಮಾತ್ರ ಬಳಸಬೇಕು. ಕೃಷಿಕರ ಆರ್ಥಿಕ ಅಭಿವೃದ್ಧಿಯ ಸಲುವಾಗಿ ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆ.
ಮಹಿಳೆಯರಿಗಾಗಿಯೇ ಮೀಸಲಿರುವ ಈ ಯೋಜನೆಗಳಲ್ಲಿ ಗಳಿಸಬಹುದು ಲಕ್ಷ ಲಕ್ಷ ಆದಾಯ
15 lakh loan will be available to the farmers under this government scheme
Our Whatsapp Channel is Live Now 👇