ಈ ಬ್ಯಾಂಕ್ ಗ್ರಾಹಕರು ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡಬಹುದು, ಯಾವುದೇ ATM ನಲ್ಲಿ ಜಸ್ಟ್ QR ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯೋನೋ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಲಭ್ಯಗೊಳಿಸಿದೆ. ಇದು ಹೊಸ UPI (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವೈಶಿಷ್ಟ್ಯಗಳನ್ನು ಒಳಗೊಂಡಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI YONO APP) ಯೋನೋ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಲಭ್ಯಗೊಳಿಸಿದೆ. ಇದು ಹೊಸ UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ (Cardless Cash) ಹಿಂಪಡೆಯುವಿಕೆ (ICW) ಜೊತೆಗೆ ಸ್ಕ್ಯಾನ್ ಮತ್ತು ಪೇ, ಸಂಪರ್ಕಗಳಿಗೆ ಪಾವತಿಗಳು, ನಗದು ವಿನಂತಿ ಇತ್ಯಾದಿ. ಇನ್ನು ಮುಂದೆ, ICW ವೈಶಿಷ್ಟ್ಯವನ್ನು ಅಪ್ಲಿಕೇಶನ್‌ನಲ್ಲಿ ಅಳವಡಿಸಲಾಗಿದೆ ಇದರಿಂದ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ (ATM Card) ಬಳಸದೆ ಯಾವುದೇ ಎಟಿಎಂನಿಂದ ಹಣವನ್ನು ಪಡೆಯಬಹುದು.
Yono ಅಪ್ಲಿಕೇಶನ್‌ನಲ್ಲಿ UPI QR ಕ್ಯಾಶ್ ಅನ್ನು ಬಳಸಿಕೊಂಡು ರಚಿಸಲಾದ QR ಕೋಡ್ ಬಳಸಿ ಯಾವುದೇ SBI ATM ನಲ್ಲಿ ಹಣವನ್ನು ಹಿಂಪಡೆಯಬಹುದು. ಇದಕ್ಕಾಗಿ ಎಸ್‌ಬಿಐ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಹೊಸ ಆವೃತ್ತಿಯ ಯೋನೋ ಅಪ್ಲಿಕೇಶನ್ ಅನ್ನು ಡೌನ್ ಲೋಡ್ (Download) ಮಾಡಿಕೊಳ್ಳಬೇಕು.
ಕೇವಲ ಆಫ್ ಇರುವ ಸ್ಮಾರ್ಟ್ ಫೋನ್ ನಿಮ್ಮ ಬಳಿ ಇದ್ದರೆ ಸಾಕು ನೀವು ಸುಲಭವಾಗಿ ಹಣ ಡ್ರಾ ಮಾಡಬಹುದು, ಈ ಸೌಲಭ್ಯ ಎಲ್ಲಾ ಬ್ಯಾಂಕ್ ಗ್ರಾಹಕರಿಗೂ ಅನುಕೂಲವಾಗಲಿದೆ.
ಹಣ ದ್ರಾ ಮಾಡಲು ATM ಇರಲೇ ಬೇಕಾಗಿಲ್ಲ, ಸುಲಭ ಹಣದ ವಹಿವಾಟು ನಡೆಸಲು SBI ಈ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ಸೇವೆಯನ್ನು ಹೊರ ತರಲಾಗಿದೆ.
ನಿಮ್ಮ ಖಾತೆ ಯಾವುದೇ ಬ್ಯಾಂಕ್ ನಲ್ಲಿ ಇದ್ದರೂ ಪರವಾಗಿಲ್ಲ. ಈ ಹೊಸ ಆವೃತ್ತಿಯ ಆಫ್ ಡೌನ್ ಲೋಡ್ (Download from Play Store) ಮಾಡಿಕೊಂಡ್ರೆ ಈ ಸೌಲಭ್ಯವನ್ನೂ ನೀವು ಬಳಸಬಹುದು. ಈ ಕೂಡಲೇ ಆಫ್ ಇನ್ಸ್ಟಾಲ್ ಮಾಡಿಕೊಂಡು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಿ.
State Bank of India has made the latest version of Yono App available, Cash withdrawal without ATM card