ಸ್ಟೇಟ್ ಬ್ಯಾಂಕಿನಲ್ಲಿ 4 ಲಕ್ಷ ಠೇವಣಿ ಇಟ್ಟರೆ, 5 ವರ್ಷಕ್ಕೆ ಎಷ್ಟು ಸಿಗುತ್ತದೆ? ಇಲ್ಲಿದೆ ಲೆಕ್ಕಾಚಾರ

ಸುರಕ್ಷಿತ ಹೂಡಿಕೆ ಹುಡುಕುತ್ತಿರುವವರಿಗೆ SBI Fixed Deposit ಉತ್ತಮ ಆಯ್ಕೆ. 4 ಲಕ್ಷವನ್ನು 5 ವರ್ಷಗಳ ಕಾಲ FD ನಲ್ಲಿ ಇಟ್ಟರೆ ಪ್ರಸ್ತುತ ಬಡ್ಡಿದರದಂತೆ ಎಷ್ಟು ಮೊತ್ತ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.

SBI Fixed Deposit: ಇಂದಿನ ದಿನಗಳಲ್ಲಿ ಹೂಡಿಕೆ ಮಾಡಲು ಹಲವು ಮಾರ್ಗಗಳಿದ್ದರೂ, ಬಹುತೇಕ ಜನರು ಇನ್ನೂ ಫಿಕ್ಸೆಡ್ ಡಿಪಾಸಿಟ್ (FD) ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯಲ್ಲಿ FD ಮಾಡುವುದು ಸುರಕ್ಷಿತ ಹೂಡಿಕೆ ಎಂದು ಹಲವರು ಪರಿಗಣಿಸುತ್ತಾರೆ.

ಸ್ಟಾಕ್ ಮಾರ್ಕೆಟ್‌ನಲ್ಲಿ ಲಾಭದ ಅವಕಾಶಗಳಿದ್ದರೂ ಅದರೊಂದಿಗೆ ಅಪಾಯವೂ ಇರುತ್ತದೆ. ಆದರೆ FDನಲ್ಲಿ ಹೂಡಿಕೆ ಮಾಡಿದರೆ ಬಡ್ಡಿದರದಂತೆ ನಿಗದಿತ ಲಾಭ ಸಿಗುತ್ತದೆ. ಅದಕ್ಕಾಗಿ ಅನೇಕರು ತಮ್ಮ ಉಳಿತಾಯದ ಒಂದು ಭಾಗವನ್ನು ಬ್ಯಾಂಕ್ FDನಲ್ಲಿ ಹೂಡಿಕೆ ಮಾಡುತ್ತಾರೆ.

SBI ನೀಡುತ್ತಿರುವ ಬಡ್ಡಿದರ ಎಷ್ಟು?

SBI ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳ FD ಯೋಜನೆಗಳು ಲಭ್ಯವಿವೆ. ಪ್ರಸ್ತುತ ಬ್ಯಾಂಕ್ ಸುಮಾರು 3.05% ರಿಂದ 7.15% ವರೆಗೆ ಬಡ್ಡಿದರ ನೀಡುತ್ತಿದೆ.

5 ವರ್ಷಗಳ ಅವಧಿಯ FDಗೆ ಸಾಮಾನ್ಯ ನಾಗರಿಕರಿಗೆ ಸುಮಾರು 6.05% ಬಡ್ಡಿದರ ಸಿಗುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ.

₹4 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಲಾಭ?

ಒಬ್ಬ ಸಾಮಾನ್ಯ ನಾಗರಿಕ ₹4,00,000 ಅನ್ನು SBIನಲ್ಲಿ 5 ವರ್ಷಗಳ ಕಾಲ FD ಮಾಡಿದರೆ, ಪ್ರಸ್ತುತ ಬಡ್ಡಿದರದ ಪ್ರಕಾರ ಅವಧಿ ಪೂರ್ಣಗೊಂಡಾಗ ಸುಮಾರು ₹1,40,071 ಬಡ್ಡಿ ಸಿಗುತ್ತದೆ.

ಹೀಗಾಗಿ ಮೆಚ್ಯುರಿಟಿ ಸಮಯದಲ್ಲಿ ಒಟ್ಟು ಮೊತ್ತ ಸುಮಾರು ₹5,40,071 ಆಗುತ್ತದೆ.

ಹಿರಿಯ ನಾಗರಿಕರಿಗೆ ಹೆಚ್ಚುವರಿ ಲಾಭ

ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ. 5 ವರ್ಷಗಳ FDಗೆ ಅವರಿಗೆ ಸುಮಾರು 7.05% ಬಡ್ಡಿದರ ಸಿಗುತ್ತದೆ.

ಈ ಸಂದರ್ಭದಲ್ಲಿ ₹4 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಸಮಯದಲ್ಲಿ ಸುಮಾರು ₹1,67,303 ಬಡ್ಡಿ ಸಿಗುತ್ತದೆ. ಅಂದರೆ ಒಟ್ಟು ಮೊತ್ತ ₹5,67,303 ಆಗಬಹುದು.

80 ವರ್ಷ ಮೇಲ್ಪಟ್ಟವರಿಗೆ ಇನ್ನಷ್ಟು ಲಾಭ

80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬ್ಯಾಂಕ್ ಇನ್ನೂ ಹೆಚ್ಚು ಬಡ್ಡಿದರ ನೀಡುತ್ತದೆ. ಅವರಿಗೆ ಸುಮಾರು 7.15% ಬಡ್ಡಿದರ ಲಭ್ಯವಾಗುತ್ತದೆ.

ಈ ದರದಲ್ಲಿ ₹4 ಲಕ್ಷ ಹೂಡಿಕೆ ಮಾಡಿದರೆ ಸುಮಾರು ₹1,70,097 ಬಡ್ಡಿ ಸಿಗುತ್ತದೆ. ಹೀಗಾಗಿ ಮೆಚ್ಯುರಿಟಿ ವೇಳೆಗೆ ಒಟ್ಟು ಮೊತ್ತ ₹5,70,097 ಆಗುತ್ತದೆ.

ವಿಶೇಷ ಯೋಜನೆ – ಅಮೃತ್ ವೃಷ್ತಿ

SBI ಬ್ಯಾಂಕ್ ಕೆಲವು ವಿಶೇಷ FD ಯೋಜನೆಗಳನ್ನೂ ನೀಡುತ್ತಿದೆ. ಅದರಲ್ಲಿ ಒಂದು ‘ಅಮೃತ್ ವೃಷ್ತಿ’ ಯೋಜನೆ. ಈ ಯೋಜನೆ 444 ದಿನಗಳ ಅವಧಿಯ FD ಆಗಿದ್ದು, ಸಾಮಾನ್ಯ ನಾಗರಿಕರಿಗೆ ಸುಮಾರು 6.45% ಬಡ್ಡಿದರ ನೀಡಲಾಗುತ್ತದೆ.

ಈ ರೀತಿಯ ಯೋಜನೆಗಳು ಕಡಿಮೆ ಅಪಾಯದೊಂದಿಗೆ ಉತ್ತಮ ಬಡ್ಡಿ ಪಡೆಯಲು ಸಹಾಯ ಮಾಡುತ್ತವೆ.

Related Stories