ರೈತರ ಮಕ್ಕಳಿಗೆ ಸಿಗಲಿದೆ 11,000 ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ
ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿರುವ ಸರ್ಕಾರ ಇದೀಗ ರೈತ ಮಕ್ಕಳ ಶಿಕ್ಷಣಕ್ಕಾಗಿ (farmers children education) ವಿದ್ಯಾರ್ಥಿ ವೇತನವನ್ನು ಕೂಡ ವಿತರಣೆ ಮಾಡುತ್ತಿದೆ
ಆರ್ಥಿಕವಾಗಿ ಹಿಂದುಳಿದ ಬಡ ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದುಕೊಳ್ಳಲು ಈ ಸ್ಕಾಲರ್ಶಿಪ್ (scholarships) ಸಹಾಯ ಮಾಡಲಿದೆ.. ಪಡೆದುಕೊಳ್ಳುವುದು ಹೇಗೆ? ಯಾರು ಅರ್ಹರು ಮೊದಲಾದ ವಿಷಯದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಕೋಳಿ ಫಾರ್ಮ್ ಆರಂಭಿಸೋಕೆ ಸರ್ಕಾರದಿಂದಲೇ ಸಿಗುತ್ತೆ 30 ಲಕ್ಷ ಸಹಾಯಧನ! ಅರ್ಜಿ ಹಾಕಿ
ವಿದ್ಯಾನಿಧಿ ಸ್ಕಾಲರ್ಶಿಪ್ (Vidya Nidhi scholarship)
2021ರಲ್ಲಿ, ರೈತ ಮಕ್ಕಳಿಗಾಗಿಯೇ ವಿದ್ಯಾನಿಧಿ ಸ್ಕಾಲರ್ಶಿಪ್ ಆರಂಭಿಸಲಾಯಿತು. ಈ ಸ್ಕಾಲರ್ಶಿಪ್ ಯೋಜನೆಯ ಅಡಿಯಲ್ಲಿ ರೈತರ ಮಕ್ಕಳು ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣ (higher education) ಪಡೆದುಕೊಳ್ಳುವವರೆಗೆ ಬೇರೆ ಬೇರೆ ಅವಧಿಗೆ ಬೇರೆ ಬೇರೆ ಮೊತ್ತದ ಸ್ಕಾಲರ್ಶಿಪ್ ಪಡೆದುಕೊಳ್ಳಲು ಸಾಧ್ಯವಿದೆ. ನೀವು ಆನ್ಲೈನ್ (online) ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ಪ್ಲೀಸ್ ಸ್ಕಾಲರ್ಶಿಪ್ ನಿಮ್ಮದಾಗಿಸಿಕೊಳ್ಳಬಹುದು.
ವಿದ್ಯಾನಿಧಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾದ ಅರ್ಹತೆಗಳು!
* ಕರ್ನಾಟಕ ರಾಜ್ಯದ ಕಾಯೋ ನಿವಾಸಿಗಳಾಗಿರಬೇಕು
* ರೈತರ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* 8 ಮತ್ತು 9ನೇ ತರಗತಿಯ ಹುಡುಗಿಯರು, 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿರುವವರು ಅರ್ಜಿ ಸಲ್ಲಿಸಬಹುದು.
* ನಿರ್ದಿಷ್ಟ ಕೋರ್ಸ್ ಗಳಿಗೆ ಅನುಕೂಲವಾಗಿ ವಿದ್ಯಾರ್ಥಿ ವೇತನ ಪಡೆಯಬಹುದು.
ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್
ವಿದ್ಯಾನಿಧಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು!
* ಉನ್ನತ ಶಿಕ್ಷಣ ನೋಂದಣಿ ಪ್ರಮಾಣ ಪತ್ರ
* ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
* ಆಧಾರ್ ಕಾರ್ಡ್
* ಬ್ಯಾಂಕ ಖಾತೆಯ ವಿವರ (ಪೋಷಕರ ಬ್ಯಾಂಕ್ ಖಾತೆ ವಿವರ ಕೊಡಬಹುದು)
* ಆದಾಯ ಪ್ರಮಾಣ ಪತ್ರ
* ವೋಟರ್ ಐಡಿ
* ರೈತರ ಕಾರ್ಡ್
ರೈತರ ಬಳಿ ಈ ಕಾರ್ಡ್ ಇದ್ರೆ 3 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಈ ರೀತಿ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ರೈತ ನಿಧಿ ಯೋಜನೆಯ ಅಡಿಯಲ್ಲಿ ಸ್ಕಾಲರ್ಶಿಪ್ ಪಡೆದುಕೊಳ್ಳಲು https://ssp.postmatric.karnataka.gov.in/ ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಸ ಖಾತೆಯನ್ನು ತೆರೆದು ಲಾಗಿನ್ ಆಗಿ. ನಂತರ ಸಿಎಂ ರೈತ ವಿದ್ಯಾನಿಧಿ ಯೋಜನೆಗೆ ಅಪ್ಲೈ ಮಾಡುವ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಗತ್ಯ ಇರುವ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದು.
ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಮೊತ್ತ ಎಷ್ಟು!
* ಪಿಯುಸಿ ಮತ್ತು ಐಟಿಐ ಕೋರ್ಸ್ ಗಳಿಗೆ ಜಾಯಿನ್ ಆದರೆ ಹುಡುಗರಿಗೆ 200500 ಮತ್ತು ಹುಡುಗಿಯರಿಗೆ ರೂ.3,000 ಸಿಗುತ್ತೆ.
* BA, BSc, MBBS, BE ಮೊದಲಾದ ವೃತ್ತಿಪರ ಕೋರ್ಸ್ ಮಾಡುವ ಹುಡುಗರಿಗೆ 5000 ಹಾಗೂ ಹುಡುಗಿಯರಿಗೆ 5500 ಸಿಗುತ್ತವೆ.
* ಸ್ನಾತಕೋತ್ತರ ಪದವಿ ಓದುತ್ತಿರುವ ಹುಡುಗರಿಗೆ 10,000 ಹಾಗೂ ಹುಡುಗಿಯರಿಗೆ 11,000ಗಳ ವಿದ್ಯಾರ್ಥಿ ವೇತನ ಕೊಡಲಾಗುವುದು.
ಈ ದಾಖಲೆ ಇದ್ರೆ ಮಹಿಳೆಯರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ
Such Farmers children will get a scholarship of 11,000 rupees
Our Whatsapp Channel is Live Now 👇