ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ
ಮಕ್ಕಳನ್ನ ಕಷ್ಟಪಟ್ಟು ಓದಿಸುತ್ತಿರುವ ತಂದೆ ತಾಯಿಗಳಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ನಿಮ್ಮ ಮಗಳು ಶಿಕ್ಷಣ (education) ಪಡೆದುಕೊಳ್ಳುತ್ತಿದ್ದರೆ ಈಗಾಗಲೇ 10ನೇ ತರಗತಿ (SSLC) ಮುಗಿಸಿ 11ನೇ ತರಗತಿಗೆ ಕಾಲಿಡುತ್ತಿದ್ದರೆ ಈ ಸ್ಕಾಲರ್ಶಿಪ್ (education scholarship) ಮೂಲಕ, ನಿಮ್ಮ ಹಣದ ಭಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು.
ವಿದ್ಯಾರ್ಥಿನಿಯರಿಗೆ ಎರಡು ವರ್ಷದ ಅವಧಿಗೆ 12 ಸಾವಿರ ರೂಪಾಯಿಗಳನ್ನು ನೀಡುವ ಸ್ಕಾಲರ್ಶಿಪ್ ಇದಾಗಿದೆ. ಸ್ಕಾಲರ್ಶಿಪ್ ಯಾವ ವಿದ್ಯಾರ್ಥಿನಿ ಪಡೆದುಕೊಳ್ಳಬಹುದು, ಇದಕ್ಕೆ ಇರುವ ಅರ್ಹತೆಗಳೇನು ನೋಡೋಣ.
ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ
CBSC ಸ್ಕಾಲರ್ಶಿಪ್:
ಪ್ರತಿಭಾನ್ವಿತ ವಿದ್ಯಾರ್ಥಿನಿಯ ಶಿಕ್ಷಣ ಪ್ರೋತ್ಸಾಹಿಸಲು ಸಿ ಬಿ ಎಸ್ ಸಿ (CBSC) ಈ ವಿದ್ಯಾರ್ಥಿ ವೇತನವನ್ನು ಆರಂಭಿಸಿದೆ. ಇಲ್ಲಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ವರ್ಷಕ್ಕೆ ಆರು ಸಾವಿರದಂತೆ ಎರಡು ವರ್ಷಕ್ಕೆ 12 ಸಾವಿರ ರೂಪಾಯಿಗಳನ್ನು ಸ್ಕಾಲರ್ಶಿಪ್ (education scholarship) ಆಗಿ ಪಡೆದುಕೊಳ್ಳಬಹುದು.
ಅರ್ಹತೆಗಳು;
ಈ ವಿದ್ಯಾರ್ಥಿವೇತನ (scholarship) ಪಡೆದುಕೊಳ್ಳಲು ವಿದ್ಯಾರ್ಥಿನಿಯರು (Girl) ಮಾತ್ರ ಅಪ್ಲೈ ಮಾಡಬಹುದು.
ಭಾರತೀಯ ನಿವಾಸಿಯಾಗಿರಬೇಕು ಭಾರತೀಯ ಶಾಲೆಯಲ್ಲಿ ಓದುತ್ತಿರಬೇಕು.
10ನೇ ತರಗತಿ ಉತ್ತೀರ್ಣರಾಗಿರಬೇಕು.
ಕನಿಷ್ಠ ಐದು ವಿಷಯಗಳಲ್ಲಿ 60 ಕ್ಕಿಂತ ಹೆಚ್ಚಿನ ಅಂಕ (marks) ಗಳಿಸಿರಬೇಕು.
ಅರ್ಜಿ ಸಲ್ಲಿಸುವವರ ಭೋದನಾ ಶುಲ್ಕ ತಿಂಗಳಿಗೆ 6000rs. ಮೀರಿರಬಾರದು.
ವಿದ್ಯಾರ್ಥಿನಿ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇರಬೇಕು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ ಯಾವುದೇ ಶಾಲೆಯಲ್ಲಿ ಓದುತ್ತಿದ್ದರು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ
ಅರ್ಜಿ ಸಲ್ಲಿಸುವುದು ಹೇಗೆ
ಮಹಿಳೆಯರು ಸಣ್ಣ ಉಳಿತಾಯದಿಂದ ಲಕ್ಷಗಟ್ಟಲೆ ಗಳಿಸುವ ಯೋಜನೆಗಳಿವು! ಈಗಲೇ ಅರ್ಜಿ ಸಲ್ಲಿಸಿ
ಸಿ ಬಿ ಎಸ್ ಸಿ ಕಳೆದ 2006 ರಿಂದ ಈ ಮೆರಿಟ್ ಆಧಾರಿತ ವಿದ್ಯಾರ್ಥಿ (merit scholarship) ವೇತನವನ್ನು ನೀಡುತ್ತಾ ಬಂದಿತ್ತು ಸಾಕಷ್ಟು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ (Education) ಅನುಕೂಲ ಮಾಡಿಕೊಟ್ಟಿದೆ. ಈಗಾಗಲೇ ಈ ವಿದ್ಯಾರ್ಥಿ ವೇತನವನ್ನು ಹತ್ತನೇ ತರಗತಿ ಉತ್ತೀರ್ಣರಾಗಿ ಪ್ರಥಮ ಪಿಯುಸಿಯಲ್ಲಿ (PUC) ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಗೆ ಮತ್ತೆ ವಿದ್ಯಾರ್ಥಿ ವೇತನ ಮುಂದುವರಿಸಲು ನಿಮ್ಮ ಅರ್ಜಿಯನ್ನು ನವೀಕರಿಸಿಕೊಳ್ಳಬೇಕು.
ಬಂದಿರುವ ಅರ್ಜಿಗಳನ್ನು ಸಿ ಬಿ ಎಸ್ ಸಿ ಪರಿಶೀಲನೆ ಮಾಡಿ ವಿದ್ಯಾರ್ಥಿ ವೇತನವನ್ನು ಒದಗಿಸುತ್ತದೆ. ಸಪ್ಟೆಂಬರ್ 19 ರಿಂದ ಅರ್ಜಿ ತೆಗೆದುಕೊಳ್ಳಲಾಗುತ್ತಿದ್ದು, ಅಕ್ಟೋಬರ್ 18ರವರೆಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು, https://www.cbse.gov.in/cbsenew/scholar.html ಈ ವೆಬ್ಸೈಟ್ ನಲ್ಲಿ ನಿಮ್ಮ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಅಪ್ಲೋಡ್ (upload) ಮಾಡಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
ಈ 5 ಬ್ಯಾಂಕ್‌ಗಳಲ್ಲಿ ಅಕೌಂಟ್ ಇರುವ ಗ್ರಾಹಕರಿಗೆ ಸಿಹಿ ಸುದ್ದಿ! ಫಿಕ್ಸೆಡ್ ಡೆಪಾಸಿಟ್ ಮೇಲೆ ಭಾರಿ ಬಡ್ಡಿ
ವಿದ್ಯಾರ್ಥಿನಿಯರಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಪ್ರತಿ ವರ್ಷ ಆರು ಸಾವಿರ ನೀಡಲಾಗುತ್ತದೆ. ಈ ಸ್ಕಾಲರ್ ಶಿಪ್ ಒಂದೇ ಸಲಕ್ಕೆ 12,000 ರೂಪಾಯಿ ಸಿಗುವುದಿಲ್ಲ ಬದಲಿಗೆ ಪ್ರತಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿನಿಯರ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಗಾಗಿ ಸಿ ಬಿ ಎಸ್ ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Such students will get Education scholarship of per year Six Thousand Rupees