ಮಹಿಳೆಯರಿಗೆ ಸಿಗಲಿದೆ ₹6000 ರೂಪಾಯಿ! ಕೇಂದ್ರ ಸರ್ಕಾರದ ಈ ಹೊಸ ಯೋಜನೆಗೆ ಭಾರೀ ಪ್ರತಿಕ್ರಿಯೆ
ಕೇಂದ್ರ ಸರ್ಕಾರ ಈ ಬಾರಿ ಮಹಿಳೆಯರ ಆರೋಗ್ಯದ ಬಗ್ಗೆ ಗಮನ ವಹಿಸಿ, ಈ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಇದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಜಾರಿಗೆ ತಂದಿರುವ ಯೋಜನೆ ಆಗಿದೆ.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಗಳಾಗಿ ಇರಬೇಕು, ಮನೆಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಅವುಗಳ ಸಹಾಯ ಪಡೆಯುವ ಮಹಿಳೆಯರಿಗೆ ಆರ್ಥಿಕವಾಗಿ ಕೂಡ ನೆರವು ಸಿಗುತ್ತಿದೆ.
ಈ ವೇಳೆ ಮಹಿಳೆಯರಿಗೆ ಸಹಾಯ ಆಗುವ ಹಾಗೆ ಇನ್ನೊಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದರಿಂದ ಮಹಿಳೆಯರು ₹6000 ಪ್ರಯೋಜನ ಪಡೆಯುತ್ತಾರೆ.
ಕೇಂದ್ರ ಸರ್ಕಾರ ಈ ಬಾರಿ ಮಹಿಳೆಯರ ಆರೋಗ್ಯದ ಬಗ್ಗೆ ಗಮನ ವಹಿಸಿ, ಈ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಇದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಜಾರಿಗೆ ತಂದಿರುವ ಯೋಜನೆ ಆಗಿದೆ.
ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗ ಅವರ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು, ಹಾಗೆಯೇ ಮಗುವಾದ ನಂತರ ಮಗುವಿನ ಆರೋಗ್ಯವನ್ನು ಕೂಡ ಹುಷಾರಾಗಿ ನೋಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಡುತ್ತೇವೆ..
ಈ 5 ಬ್ಯುಸಿನೆಸ್ ನಲ್ಲಿ ಯಾವುದೇ ಶುರು ಮಾಡಿದ್ರೂ ಕೈ ತುಂಬಾ ದುಡ್ಡು! ಮಾಡೋ ಸ್ಕಿಲ್ ಇದ್ರೆ ಸಾಕು
ಪಿಎಮ್ ಮಾತೃ ವಂದನಾ ಯೋಜನೆ:
ಇದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ, ಈ ಒಂದು ಯೋಜನೆಯ ಮೂಲಕ ಮುಂದೆ ಹುಟ್ಟುವ ಮಗುವಿಗೆ ಯಾವುದೇ ತೊಂದರೆ ಆಗಬಾರದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿ ಇರಬೇಕು ಎನ್ನುವ ಕಾರಣಕ್ಕೆ ಗರ್ಭಿಣಿ ಸ್ತ್ರೀಯರಿಗೆ ₹6000 ರೂಪಾಯಿಗಳವರೆಗು ಸಹಾಯ ಸಿಗುತ್ತದೆ. ಇದರಿಂದ ಆಕೆಯ ಆರೋಗ್ಯವನ್ನು ಕಾಪಾಡಿಕೊಂಡು, ಹುಟ್ಟುವ ಮಗುವನ್ನು ಕೂಡ ಚೆನ್ನಾಗಿ ನೋಡಿಕೊಳ್ಳಬಹುದು.
ಮಾತೃ ವಂದನಾ ಯೋಜನೆಯ ಅರ್ಹತೆಗಳು:
ಈ ಯೋಜನೆಯ ಸೌಲಭ್ಯ ಪಡೆಯಲು ಕೆಲವು ಮಾನದಂಡಗಳು ಇದೆ, ಅವುಗಳ ಅನುಸಾರ 19 ವರ್ಷ ಮೇಲ್ಪಟ್ಟ ಮಹಿಳೆ ಗರ್ಭಿಣಿ ಆಗಿದ್ದರೆ, ಆಕೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತಾಳೆ.
ಮೊದಲ ಮಗು ಹಾಗೂ ಎರಡನೇ ಮಗು, ಎರಡು ಮಗುವಿನ ಗರ್ಭಿಣಿ ಆದಾಗ ಆಕೆ ಈ ಒಂದು ಯೋಜನೆಯ ಉಪಯೋಗ ಪಡೆಯಬಹುದು. ಇದರಿಂದ ₹6000 ರೂಪಾಯಿ ಹಣಕಾಸಿನ ಸೌಲಭ್ಯ ಆಕೆಗೆ ಸಿಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ನೀವು ಗರ್ಭಿಣಿ ಮಹಿಳೆ ಆಗಿದ್ದು, ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, https://wcd.nic.in/schemes/pradhan-mantri-matru-vandana-yojana ಈ ಲಿಂಕ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಸಹಾಯಕಿಯ ಬಳಿ ನೀವು ಗರ್ಭವತಿ ಆಗಿರುವ ಬಗ್ಗೆ ಮಾಹಿತಿ ನೀಡಿದರೆ, ಯೋಜನೆಯ ಹಣ ನಿಮಗೆ ಬರುವ ಹಾಗೆ ಅವರೇ ಗಮನ ಹರಿಸುತ್ತಾರೆ.
ಹಾಗೆಯೇ ನಿಮಗೆ ಪೌಷ್ಟಿಕ ಆಹಾರ ಸಿಗುವ ಹಾಗೆ ಕೂಡ ನೋಡಿಕೊಳ್ಳುತ್ತಾರೆ. ಮಕ್ಕಳು ನಾಳಿನ ಪ್ರಜೆಗಳು, ಅವರೇ ದೇಶದ ಭವಿಷ್ಯ ಎನ್ನುವ ಕಾರಣಕ್ಕೆ ಸರ್ಕಾರ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ.
ಕಡಿಮೆ ಟೈಮ್ ನಲ್ಲಿ ಜಾಸ್ತಿ ದುಡ್ಡು ಮಾಡ್ಬೇಕು ಅನ್ನೋರಿಗೆ 4 ಬಿಸಿನೆಸ್ ಐಡಿಯಾಗಳು! ಬಂಡವಾಳ ಬೇಕಿಲ್ಲ
Such Women will get 6000 rupees, Huge response to this new scheme of central government