Business Loan : ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಸುಮಾರು 250 ಕ್ಕೂ ಹೆಚ್ಚಿನ ಬಗೆಯ ಉದ್ಯೋಗ ಮಾಡಲು ಸಾಲ (Loan) ಸೌಲಭ್ಯ ನೀಡಲಾಗುತ್ತಿದೆ.
ಸ್ವಂತ ಉದ್ಯೋಗ (Own business) ಮಾಡಬೇಕು ಎನ್ನುವ ಕನಸು ಇರುವವರಿಗೆ ಕೇಂದ್ರ ಸರ್ಕಾರ (central government) ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ಸ್ವಾವಲಂಬನೆ ಜೀವನ (independent life) ಕಟ್ಟಿಕೊಳ್ಳಲು ಪುರುಷರು ಅಥವಾ ಮಹಿಳೆಯರು ಸಾಲ ಸೌಲಭ್ಯ (loan facility) ಪಡೆದು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಬಹುದು.
ಸ್ವಂತ ಮನೆ ಕನಸು ಕಂಡವರಿಗೆ ಕೇಂದ್ರ ಸರ್ಕಾರದ ಯೋಜನೆಯಿಂದ ಉಚಿತ ಮನೆ
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP)
ಉತ್ಪಾದನಾ ಮತ್ತು ಸೇವಾ ಘಟಕಗಳಲ್ಲಿ ಸ್ವಂತ ಉದ್ಯಮ ಆರಂಭಿಸುವವರಿಗೆ PMEGP ಅಡಿಯಲ್ಲಿ 2020 ಸಾಲಿನಲ್ಲಿ ಸಾಲ ಸೌಲಭ್ಯ (loan ) ಪಡೆಯಲು ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ಹಾಗೂ ಆಸಕ್ತ ಸ್ವಉದ್ಯೋಗಿಗಳಿಗೆ ಕರೆ ನೀಡಿದೆ.
PMEGP ಉದ್ದೇಶ! (Purpose of PMEGP)
ನಿರುದ್ಯೋಗಿ (unemployment) ಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂದು ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ ಇದರಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಉದ್ಯೋಗ ಕಂಡುಕೊಳ್ಳುವುದು ಜನರಿಗೆ ಕಷ್ಟವಾಗುತ್ತಿದೆ.
ಹೀಗಾಗಿ ಸ್ವಂತ ಉದ್ಯಮವನ್ನು ಆದರೂ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಕಾರಣಕ್ಕೆ ನಿರುದ್ಯೋಗ ಯುವಕ ಯುವತಿಯರಿಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯಮ ಆರಂಭಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು ಇವು
PMEGP ಸಾಲ ಸೌಲಭ್ಯ – Loan
ನೀವು ಯಾವ ಉದ್ಯೋಗ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತ (loan amount) ನಿಗದಿಪಡಿಸಲಾಗುತ್ತದೆ. ಸುಮಾರು 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು ಹಾಗೂ 25 ರಿಂದ 35% ವರೆಗೆ ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯಬಹುದು.
ನಿಮ್ಮ ಮಗುವಿನ ಭವಿಷ್ಯಕ್ಕಾಗಿ ₹4,000 ಉಳಿತಾಯ ಮಾಡಿದ್ರೆ ₹22 ಲಕ್ಷ ಸಿಗುವ ಯೋಜನೆ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (need at a documents to apply)
ಅರ್ಜಿದಾರರ ಫೋಟೋ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಸ್ವಉದ್ಯೋಗ ಆರಂಭಿಸಲು ಉದ್ಯೋಗದ ಬಗ್ಗೆ ಸಂಪೂರ್ಣವಾದ ವಿವರ
ಬ್ಯಾಂಕ ಖಾತೆಯ ವಿವರ (ಈ ಕೆ ವೈ ಸಿ ಕಡ್ಡಾಯ)
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (PMEGP) ಅಧಿಕೃತ ವೆಬ್ಸೈಟ್ನಲ್ಲಿ ಸರಿಯಾದ ವಿವರಗಳನ್ನು ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದು ಆನ್ಲೈನ್ ಪ್ರಕ್ರಿಯೆ ಆಗಿರುವುದರಿಂದ ನೀವು ಯಾವುದೇ ಬ್ಯಾಂಕ್ ಹೋಗಿ ಸಾಲಕ್ಕಾಗಿ ಕಾಯಬೇಕಿಲ್ಲ. ಆನ್ಲೈನ್ ನಲ್ಲಿ ವಿವರಗಳು ಸರಿಯಾಗಿ ನೀಡಿದರೆ ಸಾಲ ಮಂಜೂರು ಆಗುತ್ತದೆ.
The government gives loans up to 50 lakhs for own business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.