ನಿಮ್ಮ ಮಗುವಿನ ಭವಿಷ್ಯಕ್ಕಾಗಿ ₹4,000 ಉಳಿತಾಯ ಮಾಡಿದ್ರೆ ₹22 ಲಕ್ಷ ಸಿಗುವ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರವಾಗಿಸುವ ಅತ್ಯುತ್ತಮ ಯೋಜನೆ ಆಗಿದ್ದು, ಅತಿ ಕಡಿಮೆ ಹಣ ಹೂಡಿಕೆ ಮಾಡಿ ಅತಿ ಹೆಚ್ಚು ಹಣ ಗಳಿಕೆ ಮಾಡುವಂತಹ ಯೋಜನೆ
ಕೇಂದ್ರ ಸರ್ಕಾರ (central government) ಮಕ್ಕಳ ಭವಿಷ್ಯದ ಸಲುವಾಗಿ ಪಾಲಕರು ಹಣ ಉಳಿತಾಯ ಮಾಡುವಂತಹ ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. ಅಂತಹ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi Yojana) ಕೂಡ ಒಂದಾಗಿದ್ದು ಈಗಾಗಲೇ ಕೋಟ್ಯಾಂತರ ಖಾತೆಯನ್ನು ಈ ಯೋಜನೆಯ ಅಡಿಯಲ್ಲಿ ತೆರೆಯಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರವಾಗಿಸುವ ಅತ್ಯುತ್ತಮ ಯೋಜನೆ ಆಗಿದ್ದು, ಅತಿ ಕಡಿಮೆ ಹಣ ಹೂಡಿಕೆ ಮಾಡಿ ಅತಿ ಹೆಚ್ಚು ಹಣ ಗಳಿಕೆ ಮಾಡುವಂತಹ ಯೋಜನೆ ಇದಾಗಿದೆ.
ಪಾಲಕರು ತಮ್ಮ ಮೊದಲ ಹಾಗೂ ಎರಡನೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಆಸ್ತಿ ಮಾರಾಟ ಮತ್ತು ಖರೀದಿ ಮಾಡುವವರಿಗೆ ಹೊಸ ರೂಲ್ಸ್! ನಗದು ವ್ಯವಹಾರಕ್ಕೆ ಮಿತಿ
ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳಿಗಾಗಿಯೇ ಆರಂಭಿಸಲಾಗಿರುವ ಯೋಜನೆ ಆಗಿದೆ. ನಿಮ್ಮ ಹೆಣ್ಣು ಮಗು 10 ವರ್ಷ ವಯಸ್ಸಿನ ಒಳಗಿದ್ದರೆ ಆ ಮಗುವಿನ ಹೆಸರಿನಲ್ಲಿ ನೀವು ಉಳಿತಾಯ ಖಾತೆ ಆರಂಭಿಸಬಹುದು. ಪ್ರತಿ ತಿಂಗಳು ಕೇವಲ ನಾಲ್ಕು ಸಾವಿರ ಉಳಿತಾಯ ಮಾಡಿ 22 ಲಕ್ಷ ರೂಪಾಯಿಗಳ ವರೆಗೆ ಗಳಿಸಲು ಸಾಧ್ಯವಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರದಲ್ಲಿ (interest rate increased) ಹೆಚ್ಚಳ ಮಾಡಲಾಗಿದೆ. ಕೇವಲ 8% ನಷ್ಟು ಇದ್ದ ಬಡ್ಡಿ ದರ ಈಗ 8.2% ಗೆ ಕೇಂದ್ರ ಸರ್ಕಾರ ಹೆಚ್ಚಿಸಿದೆ.
ಬ್ಯಾಂಕ್ ಅಕೌಂಟ್ ಅಲ್ಲಿ ಎಷ್ಟು ಹಣ ಇಡಬಹುದು? ಲಿಮಿಟ್ ಎಷ್ಟು ಗೊತ್ತಾ?
ಎಷ್ಟು ಹೂಡಿಕೆ ಮಾಡಬೇಕು?
ಕನಿಷ್ಠ 250ಗಳನ್ನು ಹೂಡಿಕೆ ಮಾಡಬೇಕು. ನಂತರದ ದಿನಗಳಲ್ಲಿ ನೂರು ರೂಪಾಯಿಗಳಂತೆ ಹೂಡಿಕೆ ಮಾಡಿಕೊಂಡು ಹೋಗಬಹುದು. ಗರಿಷ್ಠ ಹೂಡಿಕೆಯ ಮೊತ್ತ ಒಂದುವರೆ ಲಕ್ಷ ರೂಪಾಯಿಗಳಾಗುತ್ತವೆ. ಒಂದು ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳ ಆದರೂ ಠೇವಣಿ ಇಡಬೇಕು ಇಲ್ಲವಾದರೆ ದಂಡ ಪಾವತಿಸಬೇಕು.
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು 21 ವರ್ಷ ಅವಧಿ ಇರುತ್ತದೆ. ನಿಮ್ಮ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ನೀವು ಹಣ ಹಿಂಪಡೆಯಬಹುದು. ಒಂದು ಉದಾಹರಣೆಯ ಮೂಲಕ ನೋಡುವುದಾದರೆ ನಿಮ್ಮ ಹೆಣ್ಣು ಮಗುವಿಗೆ ಐದು ವರ್ಷ ವಯಸ್ಸಿರುವಾಗ ನಾಲ್ಕು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಲು ಆರಂಭಿಸಿದ್ದೀರಿ ಎಂದುಕೊಳ್ಳಿ.
ಮನೆ ಕಟ್ಟೋಕೆ ಗೃಹ ಸಾಲ ಪಡೆಯುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ಅಂದರೆ ವರ್ಷಕ್ಕೆ 48,000 ರೂ.ಗಳನ್ನು ನಿಮ್ಮ ಮಗುವಿನ ಹೆಸರಿನಲ್ಲಿ ಉಳಿಸುತ್ತೀರಿ. 21 ವರ್ಷಗಳ ನಂತರ ನೀವು ಹೂಡಿಕೆಗೆ 8.2% ಬಡ್ಡಿ ದರದ ಆಧಾರದ ಮೇಲೆ 15,14,000ಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ.
ಹೂಡಿಕೆಯ ಮೊತ್ತ 7.20 ಲಕ್ಷ ರೂಪಾಯಿ ಆದರೆ 21 ವರ್ಷಗಳ ಅವಧಿಯಲ್ಲಿ ಬಡ್ಡಿ ಹಾಗೂ ನೀವು ಹೂಡಿಕೆ (Investment) ಮಾಡಿದ ಹಣ ಎರಡನ್ನು ಸೇರಿಸಿ 22,34,000 ರೂ.ಗಳನ್ನು ಹಿಂಪಡೆಯುತ್ತೀರಿ.
ಒಟ್ಟಿನಲ್ಲಿ ಬಡವರು ಕೂಡ ತಮ್ಮ ಮಕ್ಕಳ ಹೆಸರಿನಲ್ಲಿ ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ನೀವು ಹತ್ತಿರದ ಅಂಚೆ ಕಚೇರಿ (post office) ಯಲ್ಲಿ ಈ ಯೋಜನೆಯನ್ನು ಆರಂಭಿಸಲು ಅರ್ಜಿ ಫಾರಂ ಭರ್ತಿ ಮಾಡಿ ಹೂಡಿಕೆ ಪ್ರಾರಂಭಿಸಿ.
ಮಹಿಳೆಯರಿಗೆ ಸಿಹಿ ಸುದ್ದಿ, ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಡೀಟೇಲ್ಸ್
Scheme to get 22 lakh if you save 4,000 for your child’s future