Bank Account : ಉಳಿತಾಯ ಖಾತೆ (savings account) ಯಲ್ಲಿ ಸರಿಯಾದ ದಾಖಲೆಗಳೊಂದಿಗೆ ಎಷ್ಟು ಹಣವನ್ನು ಬೇಕಾದರೂ ಠೇವಣಿ ಮಾಡಬಹುದು. ಆದರೆ ನೀವು ಒಂದು ವರ್ಷದಲ್ಲಿ ಎಷ್ಟು ಹಣಕಾಸಿನ ವ್ಯವಹಾರ ಮಾಡಿದ್ರೆ, ಟ್ಯಾಕ್ಸ್ ಸೇವ್ ಮಾಡಬಹುದು ಗೊತ್ತಾ?
ತೆರಿಗೆ ತಜ್ಞರು ಹೇಳಿರುವ ಪ್ರಕಾರ ಬ್ಯಾಂಕ್ ಗಳು (banks) , ಪೋಸ್ಟ್ ಆಫೀಸ್ (post office) , ಎನ್ ಬಿ ಎಫ್ ಸಿ (NFBC) ಗಳು ಇವುಗಳಲ್ಲಿ ವಹಿವಾಟು ನಡೆಸುವಾಗ ಹಣಕಾಸು ವರದಿ ಹೇಳಿಕೆ (SFT) ಕಡ್ಡಾಯವಾಗಿ ಒದಗಿಸಬೇಕು ಎಂದು ಆರ್ಥಿಕ ತಜ್ಞರು ತಿಳಿಸಿರುತ್ತಾರೆ.
ಮನೆ ಕಟ್ಟೋಕೆ ಗೃಹ ಸಾಲ ಪಡೆಯುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ಉಳಿತಾಯ ಖಾತೆ ಹೊಂದಿದ್ದರೆ ಸಿಗುತ್ತೆ ಹಲವು ಪ್ರಯೋಜನ! (Savings account benefits)
ಉಳಿತಾಯ ಖಾತೆ ಹೊಂದಿದ್ದರೆ ಬ್ಯಾಂಕ್ ನಲ್ಲಿ ಎಲ್ಲಾ ರೀತಿಯ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ (Credit Card) ಪಡೆದುಕೊಳ್ಳುವುದು, ವಿದೇಶಿ ವಿನಿಮಯ ಖರೀದಿ, ಎಫ್ ಡಿ ಗಳು (Fixed Deposit), ಮ್ಯೂಚುವಲ್ ಫಂಡ್ (Mutual Fund) ಹೀಗೆ ಮೊದಲಾದ ಸೇವೆಗಳನ್ನು ಪಡೆದುಕೊಳ್ಳಬಹುದು.
ಕರೆಂಟ್ (current account) ಅಥವಾ ಟೈಮ್ ಠೇವಣಿ (time deposit) ಖಾತೆಯನ್ನು ಹೊರತುಪಡಿಸಿ ಉಳಿದ ಯಾವುದೇ ಖಾತೆಯಲ್ಲಿ ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣಕಾಸಿನ ವ್ಯವಹಾರ (financial transaction) ಮಾಡಿದರೆ ಅಂದರೆ ಠೇವಣಿ ಇಟ್ಟರೆ ಅಥವಾ ಹಣವನ್ನು ಹಿಂಪಡೆದರೆ ಅದನ್ನು ವರದಿ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.
ಚಾಲ್ತಿ ಖಾತೆ ಅಥವಾ ಟೈಮ್ ಠೇವಣಿಯನ್ನು ಹೊರತುಪಡಿಸಿ ಗ್ರಾಹಕರು ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವ್ಯವಹಾರ ಮಾಡಲು ಅವಕಾಶವಿಲ್ಲ. ಒಂದು ವೇಳೆ ಮಾಡಿದರೆ ಅದನ್ನು ಆದಾಯ ಇಲಾಖೆಗೆ ವರದಿ ಮಾಡಬೇಕು.
ಮಹಿಳೆಯರಿಗೆ ಸಿಹಿ ಸುದ್ದಿ, ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಡೀಟೇಲ್ಸ್
ವರದಿ ಮಾಡುವುದರಿಂದ ತೆರಿಗೆ ಪಾವತಿ (tax pay) ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಹಾಗೂ ಆ ಹಣಕ್ಕೆ ಮೂಲ ದಾಖಲೆಗಳು ಇದೆಯೋ ಇಲ್ಲವೋ ಎಂಬುದನ್ನು ಆದಾಯ ಇಲಾಖೆಗೆ ಪರಿಶೀಲಿಸಲು ಸಹಾಯವಾಗುತ್ತದೆ.
ಯಾವುದೇ ಬ್ಯಾಂಕ್ ನಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟನ್ನು ಉಳಿತಾಯ ಖಾತೆಗೆ ಸಂಬಂಧಪಟ್ಟಂತೆ ಒಂದು ವರ್ಷದಲ್ಲಿ ನಡೆಸಿದರೆ ಅದನ್ನು ಬ್ಯಾಂಕ್ ಸ್ವತಹ ಆದಾಯ ಇಲಾಖೆಗೆ ವರದಿ ಮಾಡುತ್ತದೆ.
ಇದರಿಂದಾಗಿ ಗ್ರಾಹಕರು ಈ ಮಿತಿಯನ್ನು ಮೀರುವುದಕ್ಕೂ ಮೊದಲು ಜಾಗರೂಕರವಾಗಿರಬೇಕು. ಇಲ್ಲವಾದರೆ ಹೆಚ್ಚಿನ ತೆರಿಗೆ ಪಾವತಿಸುವ ಅನಿವಾರ್ಯತೆ ಬರಬಹುದು. ಒಂದಕ್ಕೆ ಮೂರು ಪಟ್ಟು ಹೆಚ್ಚು ದಂಡ (penalty) ವನ್ನು ಕೂಡ ಪಾವತಿಸಬೇಕಾಗುತ್ತದೆ.
ಚೆಕ್ ಬಳಸಿ ವ್ಯವಹಾರ ಮಾಡೋರು ಚೆಕ್ ಬೌನ್ಸ್ ಮತ್ತು ಬ್ಲಾಂಕ್ ಚೆಕ್ ಎಫೆಕ್ಟ್ ತಿಳಿಯಿರಿ
ಇನ್ನು ನಾವು ಚಾಲ್ತಿ ಖಾತೆಗೆ ಬಂದರೆ ಖಾತೆಯಲ್ಲಿ ನೀವು 50 ಲಕ್ಷ ರೂಪಾಯಿಗಳ ಹಣಕಾಸಿನ ಮಹಿವಾಟು ಮಾಡಬಹುದು ಅದಕ್ಕಿಂತ ಹೆಚ್ಚಿಗೆ ವಹಿವಾಟು ಮಾಡಿದರೆ ಅದನ್ನು ಕೂಡ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಲಾಗುತ್ತದೆ.
ಅದೇ ರೀತಿ ಕ್ರೆಡಿಟ್ ಕಾರ್ಡ್ ಬಿಲ್ (credit card bill) ಪಾವತಿಯಲ್ಲಿಯೂ ಕೂಡ ಒಂದು ಲಕ್ಷ ಮೀರಿದರೆ ಅದನ್ನು ವರದಿ ಸಲ್ಲಿಸಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡುವುದಿದ್ದರೆ ನಿಯಮಗಳನ್ನು ತಿಳಿದುಕೊಂಡು ಮಾಡಿದರೆ ನೀವು ಟ್ಯಾಕ್ಸ್ ಅಥವಾ ದಂಡ ಪಾವತಿಯಿಂದ ಸೇವ್ ಆಗಬಹುದು.
How much money can we keep in our bank account, know the limit