ಚೆಕ್ ಬಳಸಿ ವ್ಯವಹಾರ ಮಾಡೋರು ಚೆಕ್ ಬೌನ್ಸ್ ಮತ್ತು ಬ್ಲಾಂಕ್ ಚೆಕ್ ಎಫೆಕ್ಟ್ ತಿಳಿಯಿರಿ
ಕೇವಲ ಒಂದು ಬ್ಲಾಂಕ್ ಚೆಕ್ (blank cheque) ಕೊಟ್ಟು ಅದನ್ನೇ ಆಧಾರವಾಗಿ ಇರಿಸಿಕೊಂಡು ಸಾಲ ತೆಗೆದುಕೊಳ್ಳುತ್ತಾರೆ ಹಾಗೂ ಸಾಲ ಕೊಡುತ್ತಾರೆ.
ಜೀವನದಲ್ಲಿ ಹಣದ ಅನಿವಾರ್ಯತೆ ಸಾಕಷ್ಟು ಸಂದರ್ಭದಲ್ಲಿ ಬಂದೆ ಬರುತ್ತೆ. ಅಂತ ಅನಿವಾರ್ಯತೆ ಬಂದಾಗ ನಾವು ಬೇರೆಯವರ ಬಳಿ ಸಾಲ (Loan ) ತೆಗೆದುಕೊಳ್ಳುವುದು ಸಾಮಾನ್ಯ. ಹಣದ ಅಗತ್ಯ ಇದ್ದಾಗ ನಮ್ಮ ಹತ್ತಿರದ ನೆಂಟರು, ಸ್ನೇಹಿತರು ಇವರುಗಳ ಸಹಾಯ ಪಡೆದುಕೊಳ್ಳಲು ಮುಜುಗರವಾಗುತ್ತದೆ.
ಹಾಗಾಗಿ ಬೇರೆಯವರ ಬಳಿಗೆ ಸಾಲ (Loan) ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಬೇರೆಯವರ ಬಳಿ ಬಡ್ಡಿಗೆ ಸಾಲ (loan for interest) ತೆಗೆದುಕೊಂಡ್ರೆ ಅದನ್ನ ಸರಿಯಾದ ಸಮಯಕ್ಕೆ ತೀರಿಸಬೇಕು. ಇನ್ನು ಸಾಲ ತೆಗೆದುಕೊಳ್ಳುವವರು ಇದ್ದಾರೆ ಎಂದಾಗ ಸಾಲ ಕೊಡುವವರು (Lenders) ಕೂಡ ಇದ್ದೇ ಇರುತ್ತಾರೆ.
ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಹೂಡಿಕೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
ಸಾಲ ಕೊಡುವ ಮುನ್ನ ಎಚ್ಚರ ವಹಿಸಿ
ಸಾಕಷ್ಟು ಜನ ಯಾವುದೇ ದಾಖಲೆಯನ್ನು ಕೊಡದೆ ಕೇವಲ ಒಂದು ಬ್ಲಾಂಕ್ ಚೆಕ್ (blank cheque) ಕೊಟ್ಟು ಅದನ್ನೇ ಆಧಾರವಾಗಿ ಇರಿಸಿಕೊಂಡು ಸಾಲ ತೆಗೆದುಕೊಳ್ಳುತ್ತಾರೆ ಹಾಗೂ ಸಾಲ ಕೊಡುತ್ತಾರೆ. ಈ ಬ್ಲಾಂಕ್ ಚೆಕ್ ತೆಗೆದುಕೊಳ್ಳುವುದಕ್ಕೆ ಕಾರಣ ಏನೆಂದರೆ, ಒಂದು ವೇಳೆ ಸಾಲ ತೆಗೆದುಕೊಂಡ ವ್ಯಕ್ತಿ (Borrower) ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದೆ ಇದ್ದರೆ ಆ ಚೆಕ್ ಅನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಬಳಸಿಕೊಳ್ಳಬಹುದು.
ಚೆಕ್ ಬೌನ್ಸ್ ವಿಚಾರಗಳು ನೆನಪಿನಲ್ಲಿ ಇಟ್ಟುಕೊಳ್ಳಿ (cheque bounce)
*ನಿಮ್ಮ ಬಳಿ ಬ್ಲಾಂಕ್ ಚೆಕ್ ಇದೆ ಎನ್ನುವ ಕಾರಣಕ್ಕೆ ಪ್ರಕರಣವನ್ನು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ.
*ಚೆಕ್ ಬೌನ್ಸ್ ಪ್ರಕರಣದಲ್ಲಿ ವರ್ಷಾನುಗಟ್ಟಲೆ ಕೋರ್ಟ್ ಕಚೇರಿ ಎಂದು ಅಲೆದಾಡಬೇಕಾಗುತ್ತದೆ.
*ಸಾಲ ಕೊಡುವುದಕ್ಕೂ ಮುನ್ನ ಆ ವ್ಯಕ್ತಿಯ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರಬೇಕು.
*ಒಬ್ಬ ವ್ಯಕ್ತಿ, ನಿನ್ನೆ ಮೊನ್ನೆ ಪರಿಚಯವಾಗಿ ಅಥವಾ ಕೇವಲ ಆರು ತಿಂಗಳಿನಿಂದ ನಿಮಗೆ ಪರಿಚಯ ಇದ್ದು, ಆತ ಒಳ್ಳೆಯವನು ಎನ್ನುವ ಕಾರಣಕ್ಕೆ, ಸಾಲ ಕೊಟ್ಟರೆ ನೀವು ಸಮಸ್ಯೆಯಲ್ಲಿ ಸಿಲುಕಿ ಕೊಳ್ಳಬಹುದು.
*ಚೆಕ್ ತೆಗೆದುಕೊಂಡು ಸಾಲ ಕೊಡುವುದಕ್ಕೂ ಮುನ್ನ ಆತನ ಬ್ಯಾಂಕ್ ಡೀಟೇಲ್ಸ್ (Bank details) ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ತಿಳಿದುಕೊಳ್ಳಿ.
*ಯಾವುದೇ ವ್ಯಕ್ತಿಗೆ ಸಾಲ ಕೊಡುವುದಕ್ಕೂ ಮುನ್ನ ಆತನ ಸಂಪೂರ್ಣವಾದ ವಿಳಾಸ ಹಾಗೂ ಆತನ ಬಗ್ಗೆ ನೀವು ಚೆನ್ನಾಗಿ ತಿಳಿದಿರಬೇಕು.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ಸ್ಕಾಲರ್ಶಿಪ್; ಕೂಡಲೇ ಅರ್ಜಿ ಸಲ್ಲಿಸಿ
*ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ನಿಂದ ಸಾಲ ತೆಗೆದುಕೊಂಡ ವ್ಯಕ್ತಿಗೆ ಸಮಮ್ಸ್ ಕಳುಹಿಸಲಾಗುತ್ತದೆ. ಆದರೆ ಹೀಗೆ ಕೋರ್ಟ್ ನೋಟಿಸ್ (court notice) ಕಳುಹಿಸುವಾಗ, ಕೋರ್ಟ್ ಗೆ ನೀವು ನೀಡಿರುವ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುತ್ತಿದೆ. ಹಾಗಾಗಿ ಅಗತ್ಯ ಪರ್ಮನೆಂಟ್ ವಿಳಾಸ (permanent address) ನಿಮಗೆ ಗೊತ್ತಿರಬೇಕು.
ಯಾಕೆಂದರೆ ಇಂತಹ ಪ್ರಕರಣಗಳಲ್ಲಿ ಕೋರ್ಟ್ ಆಗಲಿ ಅಥವಾ ಪೊಲೀಸ್ ಆಗಲಿ ಆತನ ನಿಜವಾದ ವಿಳಾಸವನ್ನು ಹುಡುಕುವುದಿಲ್ಲ. ನೀವು ಕೊಟ್ಟಿರುವ ವಿಳಾಸಕ್ಕೆ ಅವರು ನೋಟಿಸ್ ಕಳುಹಿಸುತ್ತಾರೆ. ಒಂದು ವೇಳೆ ವಿಳಾಸ ಸರಿಯಾಗಿ ಇಲ್ಲದೆ ಇದ್ದರೆ, ಸಾಲ ತೆಗೆದುಕೊಂಡ ವ್ಯಕ್ತಿಗೆ ನೋಟಿಸ್ ತಲುಪದೇ ಇರಬಹುದು. ಹಾಗಾಗಿ ಆತನ ಪರಮನೆಂಟ್ ವಿಳಾಸ ನಿಮಗೆ ಗೊತ್ತಿರಬೇಕು.
*ಅಂಗಡಿ ವ್ಯಾಪಾರ ಮಾಡುವವರಿಗೆ ನೀವು ಸಾಲ ಕೊಡುವುದಾದರೆ ಆತ ಎಷ್ಟು ವರ್ಷದಿಂದ ಅಂಗಡಿ ವ್ಯಾಪಾರ ಮಾಡುತ್ತಿದ್ದಾನೆ, ಆತ ಎಷ್ಟು ವರ್ಷದಿಂದ ಅಂಗಡಿ ವ್ಯವಹಾರದಲ್ಲಿ ತೊಡಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ಅಂಗಡಿಗಾಗಿ ನಿಮ್ಮ ಬಳಿ ಸಾಲ ತೆಗೆದುಕೊಂಡ ವ್ಯಕ್ತಿ, ಅಂಗಡಿಯನ್ನು ಬಿಟ್ಟು ಓಡಿ ಹೋದರೆ ಅಥವಾ ಅಂಗಡಿಯನ್ನು ಖಾಲಿ ಮಾಡಿಕೊಂಡು ಹೋದರೆ ನಿಮಗೆ ಆತನ ಬಗ್ಗೆ ಅರಿವು ಇಲ್ಲದೆ ಇದ್ದಾಗ ಸಂಪೂರ್ಣ ಹಣವನ್ನು ಕಳೆದುಕೊಳ್ಳುತ್ತೀರಿ.
ಹಾಗಾಗಿ ಕೇವಲ ಬ್ಲಾಂಕ್ ಚೆಕ್ ಇಟ್ಟುಕೊಂಡು ಯಾರಿಗಾದರೂ ಸಾಲ ಕೊಡುವ ಮುನ್ನ ಆ ವ್ಯಕ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀವು ತಿಳಿದುಕೊಂಡಿರಬೇಕು ಇಲ್ಲವಾದರೆ ಕಾನೂನು ಕೂಡ ನಿಮ್ಮ ಸಹಾಯಕ್ಕೆ ಬರುವುದಿಲ್ಲ!
ಫಿಕ್ಸೆಡ್ ಡೆಪಾಸಿಟ್ ವಲಯಕ್ಕೆ ಎಂಟ್ರಿ ಕೊಟ್ಟ ಬಜಾಜ್ ಫೈನಾನ್ಸ್! ಆಕರ್ಷಕ ಬಡ್ಡಿ
Know the cheque bounce and blank cheque effect for doing business using cheque