ದುಡಿದ ಹಣದಲ್ಲಿ ಒಂದಷ್ಟು ಭಾಗವನ್ನು ಉಳಿತಾಯವಾಗಿ ಎತ್ತಿಟ್ಟರೆ ಭವಿಷ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಆಸ್ತಿ ಖರೀದಿ (property purchase) ಮಾಡುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ.
ಮನೆ ಅಥವಾ ಜಮೀನು ಅಥವಾ ಸೈಟ್ ಖರೀದಿ ಮಾಡಲು ಜನ ಇಂದು ಹೆಚ್ಚು ಇಷ್ಟಪಡುತ್ತಿದ್ದಾರೆ, ಈ ರೀತಿ ಹಣವನ್ನು ಆಸ್ತಿ ಖರೀದಿಯ ಮೇಲೆ ಹೂಡಿಕೆ ಮಾಡಿದರೆ ಆ ಹಣ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಹಾಗೂ ಆಸ್ತಿ ಮೇಲೆ ಹೂಡಿಕೆ ಮಾಡಿದರೆ ಆ ಆಸ್ತಿಯನ್ನು ಮಾರಾಟ ಮಾಡಿ ಯಾವಾಗ ಬೇಕಾದರೂ ದುಪ್ಪಟ್ಟು ಹಣ ಗಳಿಸಬಹುದು.
ಆದರೆ ಆಸ್ತಿ ಮಾರಾಟ ಮಾಡುವಾಗ (property purchase) ಅಥವಾ ಖರೀದಿ ಮಾಡುವಾಗ (property sale) ಸರ್ಕಾರದ ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು.
ಬ್ಯಾಂಕ್ ಅಕೌಂಟ್ ಅಲ್ಲಿ ಎಷ್ಟು ಹಣ ಇಡಬಹುದು? ಲಿಮಿಟ್ ಎಷ್ಟು ಗೊತ್ತಾ?
ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕಪ್ಪು ಹಣ (black money) ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಇದೀಗ ಆಸ್ತಿ ಅಥವಾ ಮನೆ ಖರೀದಿ (Buy House) ಮಾಡಲು ಎಷ್ಟು ಹಣ ನಗದು ರೂಪದಲ್ಲಿ (cash transaction) ಕೊಡಬಹುದು ಅಥವಾ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ನಿಯಮವನ್ನು ಸರ್ಕಾರ ಹೇರಿದೆ. ಮೀರಿದರೆ ಭಾರಿ ಪ್ರಮಾಣದಲ್ಲಿ ದಂಡ ತರಬೇಕಾಗುತ್ತದೆ. ಹಾಗಾದರೆ ನಿಯಮ ಏನು ಎಂಬುದನ್ನು ತಿಳಿದುಕೊಳ್ಳೋಣ.
ಆಸ್ತಿ ಮಾರಾಟಕ್ಕೆ ನಗದು ಮಿತಿ (Cash limit for property sales)
ನೀವು ಮನೆ ಅಥವಾ ಸೈಟ್ ಖರೀದಿ ಮಾಡಿದ್ರೆ 19,999 ರೂಪಾಯಿಗಳವರೆಗೆ ನಗದು ವ್ಯವಹಾರ ಮಾಡಬಹುದು. ಅಂದರೆ ನೀವು ನಗದು ವ್ಯವಹಾರ ಮಾಡುವ ಮಿತಿ 20,000ಗಳನ್ನು ಮೀರುವಂತಿಲ್ಲ.
ಮನೆ ಕಟ್ಟೋಕೆ ಗೃಹ ಸಾಲ ಪಡೆಯುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ನಗದು ರೂಪದ ವ್ಯವಹಾರಕ್ಕೆ ಕಡಿವಾಣ!
ಯಾವುದೇ ಆಸ್ತಿ ಖರೀದಿ ಸಂದರ್ಭದಲ್ಲಿ ನಗದು ವ್ಯವಹಾರವನ್ನು ಆರಂಭಿಸಿದರೆ, ಅಲ್ಲಿ ಕಪ್ಪು ಹಣದ ವಹಿವಾಟು ನಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲು ಸರ್ಕಾರ 20,000 ನಗದು ವ್ಯವಹಾರವನ್ನು ಮಾಡಲು ತಿಳಿಸಿದೆ. ಹೆಚ್ಚಿನ ಹಣಕಾಸು ವ್ಯವಹಾರಕ್ಕೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಹೊಂದಿರಬೇಕು ಹಾಗೂ ಆನ್ಲೈನ್ (online transaction) ಮೂಲಕ ವ್ಯವಹಾರ ನಡೆಸಬೇಕು.
ಮಹಿಳೆಯರಿಗೆ ಸಿಹಿ ಸುದ್ದಿ, ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಡೀಟೇಲ್ಸ್
ತೆರಬೇಕು ಭಾರಿ ಪ್ರಮಾಣದ ದಂಡ! (Penalty)
ಒಂದು ವೇಳೆ ಸರ್ಕಾರ ಆಸ್ತಿ ಖರೀದಿಯ ಬಗ್ಗೆ ಹೇರಿಕೆ ಮಾಡಿರುವ ಮಿತಿಯನ್ನು ಮೀರಿ ನಗದು ವ್ಯವಹಾರ ಮಾಡಿದ್ರೆ, ಆಸ್ತಿ ವಹಿವಾಟಿಗೆ ಸಂಬಂಧಪಟ್ಟ ಸೆಕ್ಷನ್ 269 SS ಅಡಿಯಲ್ಲಿ ತಿಳಿಸಿರುವ ನಿಯಮದ ಪ್ರಕಾರ, 20,000 ರೂಪಾಯಿಗಳಿಗಿಂತ ಹೆಚ್ಚಿನ ನಗದು ವ್ಯವಹಾರವನ್ನು ಆಸ್ತಿ ಖರೀದಿ ಮತ್ತು ಹಾರಾಟದ ಸಮಯದಲ್ಲಿ ಮಾಡಿದರೆ ಶೇಕಡ 100% ನಷ್ಟು ದಂಡ ವಿಧಿಸಲಾಗುವುದು ಎನ್ನುವ ಮಾಹಿತಿ ಇದೆ.
New rules for property sellers and buyers, Limit for cash transaction
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.