ಭಾರತದ ಯಾವುದೇ ಮೂಲೆಯಲ್ಲಿ ಜಾಗ ಖರೀದಿಸುವ ಮುನ್ನ ಈ 5 ದಾಖಲೆಗಳು ಇರುವುದನ್ನು ಖಚಿತಪಡಿಸಿಕೊಳ್ಳಲೇಬೇಕು

 

ಸ್ನೇಹಿತರೆ ಹಣವನ್ನು ಹೂಡಿಕೆ(Investment)  ಮಾಡುವ ವಿಚಾರಕ್ಕೆ ಬಂದರೆ ಖಂಡಿತವಾಗಿ ಭಾರತ ದೇಶದಲ್ಲಿ ಚಿನ್ನ ಬಿಟ್ಟರೆ ಭೂಮಿಗೆ ಹೆಚ್ಚು ವ್ಯಾಲ್ಯು ಅಂತ ಹೇಳಬಹುದಾಗಿದೆ. ಅದರ ವಿಶೇಷವಾಗಿ ನೀವು ಯಾವುದಾದರೂ ಪ್ರಾಪರ್ಟಿಯನ್ನು(Property Buy)  ಖರೀದಿಸುತ್ತಿದ್ದೀರಿ ಎಂದು ಆದರೆ ಐದು ಪ್ರಮುಖ ದಾಖಲೆ ಪತ್ರಗಳನ್ನು ಚೆಕ್ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವಿಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ. ಹಾಗಿದ್ರೆ ಬನ್ನಿ ಐದು ಪ್ರಮುಖ ದಾಖಲೆಗಳು ಯಾವೆಲ್ಲ ಎಂಬುದನ್ನು ಇವತ್ತಿನ ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ.

ಪ್ರಾಪರ್ಟಿ ಖರೀದಿಸುವ ಮುನ್ನ ಬೇಕಾಗುವಂತಹ ಐದು ಪ್ರಮುಖ ದಾಖಲೆಗಳು (Land Documents) 
ಮೂಲಪತ್ರ ಒಂದು ಪ್ರಾಪರ್ಟಿಯನ್ನು ಖರೀದಿಸುವುದಕ್ಕೆ ಆದರೆ ಹಿಸ್ಟರಿಯನ್ನು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಾಪರ್ಟಿಯ ಹೆಸರಿನ ಬಗ್ಗೆ ಅಂದರೆ ಯಾರಿಗೆಲ್ಲ ಈ ಪ್ರಾಪರ್ಟಿ ಸಿಕ್ಕಿದೆ ಹಾಗೂ ಯಾರಿಂದ ನಿಮಗೆ ಈ ಪ್ರಾಪರ್ಟಿ ಸಿಕ್ತಾ ಇದೆ ಅನ್ನೋ ಪ್ರತಿಯೊಂದು ಚೈನ್ ಮಾಹಿತಿಯನ್ನು ಕೂಡ ನೀವು ಪ್ರಾಪರ್ಟಿಯ ಮೂಲ ಪತ್ರದ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ನೀವು ಈ ಪ್ರಾಪರ್ಟಿ ಯಾರಿಂದ ಯಾರಿಗೆ ಹಸ್ತಾಂತರ ಆಗಿದೆ ಎನ್ನುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ತಿಳಿದುಕೊಳ್ಳುತ್ತೀರಿ.

Power of  Attorney ಒಂದು ವೇಳೆ ನೀವು ಖರೀದಿಸುವಂತಹ ಪ್ರಾಪರ್ಟಿಯ ನಿಜವಾದ ಓನರ್ (Real Owner) ಇಲ್ಲದೆ ಹೋದರೆ ಅವರ ಪ್ರತಿನಿಧಿಯಾಗಿ ಪವರ್ ಆಫ್ ಅಟಾರ್ನಿಯನ್ನು ಪಡೆದುಕೊಂಡಿರುವಂತಹ ವ್ಯಕ್ತಿಗಳು ಇದನ್ನು ಮಾರಾಟ ಮಾಡಬಹುದಾಗಿದೆ ಆದರೆ ಆಸ್ತಿಯನ್ನು ಮಾರಾಟ ಮಾಡುತ್ತಿರುವವರು ನಿಜವಾದ ಮಾಲೀಕರ ಪ್ರತಿನಿಧಿ ಎನ್ನುವುದನ್ನು ತಿಳಿದುಕೊಳ್ಳುವುದು Power of Attorney ಅನ್ನು ಸರಿಯಾಗಿ ಪರಿಶೀಲಿಸಿದ ನಂತರ. ಹೀಗಾಗಿ ಅಟಾರ್ನಿ ಇದ್ದವರ ಬಳಿ ಮಾತ್ರ ಮಾರಾಟದ ಹಕ್ಕು ಇರುತ್ತೆ.

Property agreement certificate: ಮಾರಾಟಗಾರರಿಗೆ ತಮ್ಮ ಪ್ರಾಪರ್ಟಿಯನ್ನು ಮಾರಾಟ ಮಾಡುವುದಕ್ಕಿಂತ ಮುಂಚೆ ಉಪ ರಿಜಿಸ್ಟರ್ ಆಫೀಸ್ ನಲ್ಲಿ ಕ್ರಯಕಾರರು ಪತ್ರ ಅಂದರೆ ಅಗ್ರಿಮೆಂಟ್ ಪೇಪರ್ ನಲ್ಲಿ ಕೂಡ ಇದರ ದಾಖಲಾಗುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಪ್ರಾಪರ್ಟಿಯ ಅಗ್ರಿಮೆಂಟ್ ಸರ್ಟಿಫಿಕೇಟ್ ಇರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.

ಋಣ ಭಾರ ದೃಢೀಕರಣ ಸರ್ಟಿಫಿಕೇಟ್ ಪ್ರಾಪರ್ಟಿಯ ಪ್ರತಿಯೊಂದು ಹಣದ ವಿಚಾರದ ಸಂಬಂಧಪಟ್ಟಂತಹ ಎಲ್ಲಾ ಟ್ರಾನ್ಸಾಕ್ಷನ್ ಗಳು(Transactions) ಕೂಡ ಈ ಸರ್ಟಿಫಿಕೇಟ್ ನಲ್ಲಿ ದಾಖಲಾಗಿರುತ್ತದೆ. ಹೀಗಾಗಿ ಒಂದು ವೇಳೆ ಪ್ರಾಪರ್ಟಿ ಮೇಲೆ ಯಾವುದಾದರೂ ಸಾಲ ಬಾಕಿ ಇದ್ದರೆ ಅಥವಾ ಕಾನೂನಾತ್ಮಕವಾಗಿ ಇದು ಬಂದಮುಕ್ತ ಆಗಿದೆ ಎನ್ನುವುದಕ್ಕೆ ಪ್ರಮುಖವಾದ ಸರ್ಟಿಫಿಕೇಟ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ.

Image Credit: Housing

ಖಾತೆ ಪ್ರಮಾಣ ಪತ್ರ ಕಟ್ಟಡವನ್ನು ಪ್ರಾಪರ್ಟಿಯ ಮೇಲೆ ನಿರ್ಮಾಣ ಮಾಡಲು ಬೇಕಾಗುವಂತಹ ಪರ್ಮಿಷನ್ ಪತ್ರವನ್ನು ಖಾತೆ ಪ್ರಮಾಣ ಪತ್ರದ ಮೂಲಕ ಪಡೆದುಕೊಳ್ಳಬಹುದು. ಇದು ಪ್ರಾಪರ್ಟಿಯ ವಿಸ್ತೀರ್ಣ ಹಾಗೂ ವಿವರಣೆಯನ್ನು ಒಳಗೊಂಡಿರುವಂತಹ ಪಾತ್ರವಾಗಿದೆ. ಆಸ್ತಿಯ ಟ್ಯಾಕ್ಸ್(Property Tax  ಅನ್ನು ಕಟ್ಟಲು ಹಾಗೂ ಪ್ರಾಪರ್ಟಿಯಲ್ಲಿ ಕಟ್ಟಡವನ್ನು ಕಟ್ಟೋದಕ್ಕೆ ಪರ್ಮಿಷನ್ ಪಡೆದುಕೊಳ್ಳುವುದು ಇದು ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ.

These 5 documents must be ensured before buying land in any corner of India

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories