Electric Scooters: ಕಾರುಗಳನ್ನೇ ಮೀರಿಸುವ ಕೈಗೆಟುಕುವ ಬೆಲೆಯ ಐದು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು ಇಲ್ಲಿವೆ!

Electric Scooters: ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ನೀವು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಖರೀದಿಸಲು ಯೋಜಿಸುತ್ತಿದ್ದರೆ, ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ಜೊತೆಗೆ ನಿಮಗಾಗಿ ಕೈಗೆಟುಕುವ ಬೆಲೆಯಲ್ಲಿ (affordable price) ಐದು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು (Best Electric Scooters) ಇಲ್ಲಿವೆ.
ಅಲ್ಲದೆ ಇವು ಭಾರತೀಯ ಮಾರುಕಟ್ಟೆಯಲ್ಲಿ ಬದಲಾಯಿಸಬಹುದಾದ ಬ್ಯಾಟರಿಗಳೊಂದಿಗೆ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ಗಳು. ಎಲೆಕ್ಟ್ರಿಕ್ ಬೈಕ್ ಖರೀದಿಸಲು ಎದುರು ನೋಡುತ್ತಿದ್ದರೆ, ಈ ಐದು ಸ್ಕೂಟರ್ಗಳು ನಿಮ್ಮ ಬಜೆಟ್ಗೆ ಸೂಕ್ತವಾಗಬಹುದು, ಒಮ್ಮೆ ಪರಿಶೀಲಿಸಿ.
ಹೋಂಡಾ ಆಕ್ಟಿವಾದಂತಹ ಮತ್ತೊಂದು ಸ್ಕೂಟರ್ ಬಿಡುಗಡೆ! ಉತ್ತಮ ವೈಶಿಷ್ಟ್ಯಗಳೊಂದಿಗೆ ಬೆಲೆ ತುಂಬಾ ಕಡಿಮೆ
ಮಾರುಕಟ್ಟೆಯಲ್ಲಿ ವಿವಿಧ ಆಯ್ಕೆಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳು ಬಿಡುಗಡೆಯಾಗುತ್ತಿದ್ದು, ಗ್ರಾಹಕರು ತಮ್ಮ ಆಯ್ಕೆಯ ಮತ್ತು ತಮ್ಮ ಬಜೆಟ್ ಅನುಗುಣವಾಗಿ ಖರೀದಿಸಲು ಮುಂದಾಗುತ್ತಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಸಹ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ದೊಡ್ಡ ಕಾರಣವೆಂದೇ ಹೇಳಬಹುದು.
Ather 450x

ಅಥರ್ 450x- ಈ ಸ್ಕೂಟರ್ ಬೆಲೆ ರೂ. 1.28 ಲಕ್ಷದಿಂದ ರೂ. 1.49 ಲಕ್ಷ ಎಕ್ಸ್ ಶೋ ರೂಂ ಬೆಲೆ ಇದೆ. ಈ ಸ್ಕೂಟರ್ 3.7 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ನಿಂದ ಚಾಲಿತವಾಗಿದೆ. ಇದು 146 ಕಿ.ಮೀ ವರೆಗಿನ ರೈಡಿಂಗ್ ಶ್ರೇಣಿಯನ್ನು ಒದಗಿಸುತ್ತದೆ.
TVS iQube electric scooter

ಟಿವಿಎಸ್ ಐಕ್ಯೂಬ್- ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಈ ಪಟ್ಟಿಯಲ್ಲಿದೆ. ಇದು ರೂ. 1.22 ಲಕ್ಷದಿಂದ ರೂ. 1.38 ಲಕ್ಷ ಎಕ್ಸ್ ಶೋ ರೂಂ ಬೆಲೆ. ಇದರ 5.1 kWh ಬ್ಯಾಟರಿ ಪ್ಯಾಕ್ 145 ಕಿಮೀ ವರೆಗೆ ರೈಡಿಂಗ್ ಶ್ರೇಣಿಯನ್ನು ಒದಗಿಸುತ್ತದೆ.
ಇವು ಬದಲಾಯಿಸಬಹುದಾದ ಬ್ಯಾಟರಿ ಬೈಕ್ಗಳು, ಎರಡು ಬ್ಯಾಟರಿಗಳಿರುವ ಅತ್ಯುತ್ತಮ ಸ್ಕೂಟರ್ಗಳು
Ola S1 S1 Pro

ಎಲೆಕ್ಟ್ರಿಕ್ ಸ್ಕೂಟರ್ಗಳು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಇವು 141 ಕಿಮೀ, 181 ಕಿಮೀ ವರೆಗೆ ರೈಡಿಂಗ್ ಶ್ರೇಣಿಯನ್ನು ಒದಗಿಸುವ ಸಾಮರ್ಥ್ಯ ಹೊಂದಿವೆ. ಇದರ ಬೆಲೆ ರೂ. 1.30 ಲಕ್ಷ, ರೂ. 1.40 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರಾಟವಾಗುತ್ತಿದೆ.
Bajaj Chetak

ಬಜಾಜ್ ಚೇತಕ್ ಬಜಾಜ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.. ಇದು 3kWh ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಇದು ಸ್ಪೋರ್ಟ್ ಮೋಡ್ನಲ್ಲಿ 85 ಕಿಮೀಗಳವರೆಗೆ ರೈಡಿಂಗ್ ಶ್ರೇಣಿಯನ್ನು ಒದಗಿಸುತ್ತದೆ. ಇದರ ಬೆಲೆ ರೂ. 1.44 ಲಕ್ಷ, ಎಕ್ಸ್ ಶೋ ರೂಂ.
Hero Vida V1 Pro

ಎಲೆಕ್ಟ್ರಿಕ್ ಸ್ಕೂಟರ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸ್ಕೂಟರ್ 3.94kWh ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 165 ಕಿಮೀ ವರೆಗಿನ ರೈಡಿಂಗ್ ಶ್ರೇಣಿಯನ್ನು ಹೊಂದಿದೆ. 1.26 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರಾಟವಾಗುತ್ತಿದೆ.
These five Electric Scooters are perfect for your budget, Check Out best electric scooters at an affordable price



