June New Rules: ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೇರಿದಂತೆ ಜೂನ್ 1 ರಿಂದ ಹೊಸ ನಿಯಮಗಳು!
June New Rules: ಇನ್ನೇನು ಮೇ ತಿಂಗಳು ಮುಗಿಯುತ್ತಿದೆ. ಜೂನ್ ತಿಂಗಳು ಪ್ರಾರಂಭವಾಗಲಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಅಲ್ಲದೆ, ಮುಂದಿನ ತಿಂಗಳು ಕೆಲವು ಹೊಸ ನಿಯಮಗಳು ಎದುರಿಸಬೇಕಾಗಬಹುದು ಆ ಬಗ್ಗೆ ಈಗ ಸಂಪೂರ್ಣವಾಗಿ ತಿಳಿಯೋಣ
June New Rules: ಇನ್ನೇನು ಮೇ ತಿಂಗಳು ಮುಗಿಯುತ್ತಿದೆ. ಜೂನ್ ತಿಂಗಳು ಪ್ರಾರಂಭವಾಗಲಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಅಲ್ಲದೆ, ಮುಂದಿನ ತಿಂಗಳು ಕೆಲವು ಹೊಸ ನಿಯಮಗಳು ಎದುರಿಸಬೇಕಾಗಬಹುದು ಆ ಬಗ್ಗೆ ಈಗ ಸಂಪೂರ್ಣವಾಗಿ ತಿಳಿಯೋಣ.
ಈ ಹೊಸ ನಿಯಮಗಳು ನಿಬಂಧನೆಗಳು ಕೆಲವು ಹಣಕಾಸಿನ ನಷ್ಟವನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಜೂನ್ ತಿಂಗಳಿನಿಂದ ಬದಲಾಗುವ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಇದರಲ್ಲಿ ಆಧಾರ್ ಕಾರ್ಡ್ (Aadhaar Card), ಹೂಡಿಕೆಗಳು (Investment), ಸ್ಥಿರ ಠೇವಣಿಗಳು (Fixed Deposit), ಎಲೆಕ್ಟ್ರಿಕ್ ಸ್ಕೂಟರ್ ಸಬ್ಸಿಡಿಗಳು (Electric Scooter Subsidy), ವಿದೇಶಿ ಕ್ರೆಡಿಟ್ ಕಾರ್ಡ್ ಪಾವತಿಗಳು (Credit Card Payments), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India Schemes) ಹೊಸ ಯೋಜನೆ ಇತ್ಯಾದಿ ಸೇರಿವೆ.
ಜೊತೆಗೆ ಪ್ರತಿ ತಿಂಗಳು ಒಂದರಂದು ಗ್ಯಾಸ್ ಬೆಲೆಗಳನ್ನು (LPG Gas Cylinder Price) ಬದಲಾಯಿಸಲಾಗುತ್ತದೆ. ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol and Diesel Prices) ಬದಲಾವಣೆ ಆಗಬಹುದು. ಮತ್ತು ಜೂನ್ 1 ರಿಂದ ಯಾವ ರೀತಿಯ ನಿಯಮಗಳು ಬದಲಾಗುತ್ತವೆ ಎಂಬುದನ್ನು ತಿಳಿಯೋಣ.
Credit Card Loan: ಕ್ರೆಡಿಟ್ ಕಾರ್ಡ್ ಲೋನ್ ಯಾವಾಗ ಮತ್ತು ಹೇಗೆ ತೆಗೆದುಕೊಳ್ಳುವುದು? ಅದರ ಪ್ರಯೋಜನಗಳೇನು ತಿಳಿಯಿರಿ
ಉಚಿತ ಆಧಾರ್ ನವೀಕರಣ
ಆಧಾರ್ ಕಾರ್ಡ್ (Free Aadhaar Update) ಹೊಂದಿರುವವರಿಗೆ ತಮ್ಮ ವಿವರಗಳನ್ನು ನವೀಕರಿಸಲು UIDAI ಅತ್ಯುತ್ತಮ ಅವಕಾಶವನ್ನು ಒದಗಿಸಿದೆ. ಒಂದು ರೂಪಾಯಿ ಪಾವತಿಸದೆ ಆನ್‌ಲೈನ್‌ನಲ್ಲಿ ಹೆಸರು, ವಿಳಾಸದಂತಹ ವಿವರಗಳನ್ನು ಬದಲಾಯಿಸುವ ಸೌಲಭ್ಯವನ್ನು ಇದು ಒದಗಿಸುತ್ತದೆ. ಆದರೆ ಈ ಅವಕಾಶ ಜೂನ್ 14 ರವರೆಗೆ ಮಾತ್ರ ಲಭ್ಯವಿದೆ ಎಂಬುದನ್ನು ನೆನಪಿನಲ್ಲಿಡಿ. ಆ ನಂತರ ಆನ್ ಲೈನ್ ನಲ್ಲಿ ಮಾಡಿದರೂ ರೂ.50 ಶುಲ್ಕ ಪಾವತಿಸಬೇಕು.
ಗ್ಯಾಸ್ ಬೆಲೆಗಳು
ಪ್ರತಿ ತಿಂಗಳ 1 ರಂದು, ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಆದಾಗ್ಯೂ, ಬೆಲೆಗಳನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಅಥವಾ ಸ್ಥಿರವಾಗಿರಬಹುದು. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮುಂದಿನ ತಿಂಗಳು ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ.
ಬ್ಯಾಂಕ್ ಖಾತೆಗಳಲ್ಲಿ ಕ್ಲೈಮ್ ಮಾಡದ ಠೇವಣಿ
ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ, ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಹಣ ಜಮಾ ಮಾಡಿ ಕ್ಲೇಮ್ ಮಾಡದೇ ಇರುವವರು ಬಹಳ ಮಂದಿ ಇದ್ದಾರೆ. ಅಂತಹವರ ನಾಮಿನಿಗಾಗಿ ಆರ್‌ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ.
ಹಕ್ಕುದಾರರನ್ನು ಗುರುತಿಸಿ ಅವರ ಕುಟುಂಬದ ಸದಸ್ಯರಿಗೆ ಅಥವಾ ನಾಮಿನಿಗಳಿಗೆ ಹಣ ನೀಡಲು ಕ್ರಮಕೈಗೊಳ್ಳಲಾಗಿದೆ. ಇದು ಜೂನ್ 1 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 1ರಿಂದ 100 ದಿನಗಳ ಅಭಿಯಾನ ಆರಂಭಿಸಲಿದೆ. ಇದು ಕ್ಲೈಮ್ ಮಾಡದ ಮೊತ್ತವನ್ನು ಇತ್ಯರ್ಥಗೊಳಿಸುತ್ತದೆ.
ಮಾರುಕಟ್ಟೆಗೆ ಬಂತು ನೋಡಿ ಹೊಸ ಎನಿಗ್ಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳು.. ಕಡಿಮೆ ಬೆಲೆಯಲ್ಲಿ ಸುಧಾರಿತ ವೈಶಿಷ್ಟ್ಯಗಳು
ವಾಹನ ಸವಾರರಿಗೆ ಶಾಕ್
ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಖರೀದಿಸಲು ಬಯಸುವವರಿಗೆ ಜೂನ್ 1ರಿಂದ ಬಿಗ್ ಶಾಕ್ ಸಿಗಲಿದೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯಲ್ಲಿ ಭಾರಿ ಕಡಿತವಾಗಲಿದೆ. ಭಾರೀ ಕೈಗಾರಿಕೆಗಳ ಸಚಿವಾಲಯವು ಎಲೆಕ್ಟ್ರಿಕ್ ವೆಹಿಕಲ್ಸ್ (FAME) 2 ಯೋಜನೆಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆಗೆ ಪ್ರೋತ್ಸಾಹಕಗಳನ್ನು ಬದಲಾಯಿಸಿದೆ.
ಒದಗಿಸುವ ಗರಿಷ್ಠ ಸಹಾಯಧನದ ಮಿತಿಯನ್ನು ಶೇಕಡಾ 40 ರಿಂದ 15 ಕ್ಕೆ ಇಳಿಸಲಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಪ್ರತಿ ಕಿಲೋವ್ಯಾಟ್‌ಗೆ ರೂ.15 ಸಾವಿರದಿಂದ ರೂ.10 ಸಾವಿರಕ್ಕೆ ಇಳಿಸಲಾಗಿದೆ.
ಕೇವಲ 80 ರೂಪಾಯಿ ಖರ್ಚಿನಲ್ಲಿ ಇಡೀ ತಿಂಗಳು ಸುತ್ತಾಡಬಹುದಾದ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಇದು!
ಎಸ್‌ಬಿಐ ಅಮೃತ್ ಕಲಶ ಯೋಜನೆ
ಎಸ್‌ಬಿಐ ತನ್ನ ಹೊಸ ಯೋಜನೆ ಅಮೃತ್ ಕಲಶ ಠೇವಣಿ ಯೋಜನೆಯನ್ನು ವಿಸ್ತರಿಸಿದೆ. ಜೂನ್ 30ರವರೆಗೆ ಈ ಯೋಜನೆಗೆ ಸೇರಲು ಅವಕಾಶವಿದೆ. ಇದು 400 ದಿನಗಳ ಅವಧಿಯ ವಿಶಿಷ್ಟ ಯೋಜನೆಯಾಗಿದೆ. ಈ ನಿಶ್ಚಿತ ಠೇವಣಿ ಯೋಜನೆಯು ಹಿರಿಯ ನಾಗರಿಕರಿಗೆ 7.6 ಶೇಕಡಾ ಮತ್ತು ಇತರರಿಗೆ 7.1 ಶೇಕಡಾ ಬಡ್ಡಿಯನ್ನು ನೀಡುತ್ತದೆ.
ಮಗುವಿನ ಹೆಸರಿನಲ್ಲಿ ಮ್ಯೂಚುವಲ್ ಫಂಡ್‌ಗಳು
ನಿಮ್ಮ ಮಗುವಿನ ಹೆಸರಿನಲ್ಲಿ ಹೊಸ ಖಾತೆಯನ್ನು ತೆರೆಯದೆಯೇ ನೀವು ಮಗುವಿನ ಹೆಸರಿನಲ್ಲಿ ಮ್ಯೂಚುವಲ್ ಫಂಡ್ (Mutual Fund) ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಸೆಬಿ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ಹೊಸ ನಿಯಮ ಜೂನ್ 15 ರಿಂದ ಜಾರಿಗೆ ಬರಲಿದೆ.
These new rules will implement from June 2023, LPG Gas Cylinder Price to SBI Scheme
Follow us On
Google News |