ಇಂತಹವರು ಬ್ಯಾಂಕ್ ಖಾತೆಯಲ್ಲಿ 0 ಬ್ಯಾಲೆನ್ಸ್ ಇದ್ದರೂ ಸಹ 10 ಸಾವಿರ ವಿಥ್ ಡ್ರಾ ಮಾಡಬಹುದು! ಹೇಗೆ ಗೊತ್ತಾ?
ನಿಮ್ಮ ಸಾಮಾನ್ಯ ಬ್ಯಾಂಕ್ ಖಾತೆಯನ್ನು ಸಹ ಜನಧನ್ ಖಾತೆಯಾಗಿ ಪರಿವರ್ತಿಸಿಕೊಳ್ಳಬಹುದು. ಇನ್ನು ಓವರ್ ಡ್ರಾಫ್ಟ್ ಮೂಲಕ ನೀವು 10 ಸಾವಿರವರೆಗೆ ಹಣವನ್ನು ಸಹ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15, 2014 ರಲ್ಲಿ ಜನಧನ್ ಯೋಜನೆಯನ್ನು (Jan Dhan yojana) ಜಾರಿಗೆ ತಂದರು. ಯಾವುದೇ ಕನಿಷ್ಟ ಮೊತ್ತವಿಲ್ಲದೆ ಸುಲಭವಾಗಿ ಎಲ್ಲರೂ ಬ್ಯಾಂಕ್ ಖಾತೆಯನ್ನು (Bank Account) ತೆರೆಯಬಹುದು, ಹಾಗೆ ಜನರಿಗೆ ಸಣ್ಣ ಉಳಿತಾಯಗಳ (Small Savings) ಆಯ್ಕೆಯನ್ನು ನೀಡುವ ಉದ್ದೇಶ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇನ್ನು ಈ ಯೋಜನೆಯ ಅಡಿಯಲ್ಲಿ ನೊಂದಾಯಿಸಿಕೊಂಡ ಪ್ರತಿಯೊಬ್ಬರೂ ಸಹ ಚೆಕ್ ಬುಕ್, ಪಾಸ್ ಬುಕ್ ಜೊತೆಗೆ ಆಕ್ಸಿಡೆಂಟಲ್ ಇನ್ಶುರೆನ್ಸ್ (Accident Insurance) ಹಾಗೂ ಇನ್ನಿತರ ಹಲವಾರು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಜೊತೆಗೆ ಇದೀಗ ಮತ್ತೊಂದು ಸೌಲಭ್ಯವನ್ನು ಪಡೆಯಲು ಸರ್ಕಾರ ಇದೀಗ ಜನರಿಗೆ ಅವಕಾಶ ನೀಡಿದೆ.
ಜನಧನ್ ಖಾತೆಯಲ್ಲಿ (Jan Dhan Account) ನೀವು ಯಾವುದೇ ಕನಿಷ್ಟ ಮೊತ್ತವನ್ನು ಇರಿಸುವ ಅಗತ್ಯವಿಲ್ಲ. ಹಾಗೆ ನಿಮ್ಮ ಖಾತೆಯಲ್ಲಿ ಯಾವುದೇ ಮೊತ್ತ ಇಲ್ಲದೆ ಹೋದರೂ ಸಹ ನೀವು ಓವರ್ ಡ್ರಾಫ್ಟಿಂಗ್ ಆಯ್ಕೆಯ ಮೂಲಕ ನೀವು ಸುಲಭವಾಗಿ ಹಣವನ್ನು ಪಡೆಯುವ ಆಯ್ಕೆಯನ್ನು ಬ್ಯಾಂಕ್ ನಿಮಗೆ ಕಲ್ಪಿಸಿಕೊಡುತ್ತಿದೆ.
40 ಲಕ್ಷ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್! ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಬಿಡುಗಡೆ
ಜನರ ಆರ್ಥಿಕ ಸಂಕಷ್ಟಗಳಿಗೆ ಸಹಾಯವಾಗಿ ನಿಲ್ಲಲು ಸರ್ಕಾರ ಈ ಜನಧನ್ ಯೋಜನೆಯ (Jan Dhan Scheme) ಮೂಲಕ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಇನ್ನು ನಿಮ್ಮ ಖಾತೆಯಲ್ಲಿ ಯಾವುದೇ ಹಣ ಇಲ್ಲದೆ ಓವರ್ ಡ್ರಾಫ್ಟಿಂಗ್ ಸಹಾಯದ ಮೂಲಕ ಹಣ ಪಡೆಯಲು ಸಹ ಇದೀಗ ಸಹಾಯ ಮಾಡುತ್ತಿದೆ.
ಜನರ ಆರ್ಥಿಕ ಸಂಕಷ್ಟಗಳಿಗೆ ಈ ಹಣ ಸಹಾಯವಾಗುತ್ತದೆ ಎನ್ನುವುದು ಇದರ ಮೂಲ ಉದ್ದೇಶವಾಗಿದೆ. ಇನ್ನು ಈ ಖಾತೆಯಲ್ಲಿ ನೀವು ಓವರ್ ಡ್ರಾಫ್ಟಿಂಗ್ ಮೂಲಕ ಏಷ್ಟು ಹಣ ಪಡೆಯಬಹುದು. ಇದರ ಲಿಮಿಟ್ ಏಷ್ಟು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪುಟವನ್ನು ಪೂರ್ತಿಯಾಗಿ ಓದಿ..
ಇಂತಹ ಮಹಿಳೆಯರಿಗೆ ಬೇರೆ ಯೋಜನೆಗಳ ಜೊತೆಗೆ ಸರ್ಕಾರವೇ ಕೊಡುತ್ತೆ ಹೆಚ್ಚುವರಿ 500 ರೂಪಾಯಿ!
ನೀವು ಯಾವುದೇ ಬ್ಯಾಂಕ್ ಗೆ ಹೋಗಿ ಜನಧನ್ ಖಾತೆಯನ್ನು ತೆರಯಬಹುದು. ಇನ್ನು ಎಲ್ಲಾ ಬ್ಯಾಂಕ್ ನ ರೀತಿ ನೀವು ಹೂಡಿಕೆ ಮಾಡುವ ಹಣಕ್ಕೆ ನೀವು ಬಡ್ಡಿ ದರವನ್ನು ಪಡೆಯುತ್ತೀರಿ. ಅಲ್ಲದೆ ಈ ಖಾತೆ ಹೊಂದಿದವರು, 30 ಸಾವಿರ ಇನ್ಶುರೆನ್ಸ್ (Insurance) ಹಾಗೂ 2 ಲಕ್ಷ ಆಕ್ಸಿಡೆಂಟ್ ಇನ್ಶುರೆನ್ಸ್ ಅನ್ನು ಪಡೆಯುತ್ತಾರೆ.
ಇನ್ನು 10 ವರ್ಷ ಮೇಲ್ಪಟ್ಟ ಯಾವ ವ್ಯಕ್ತಿ ಬೇಕಾದರೂ ಜನಧನ್ ಖಾತೆಯನ್ನು ತೆರೆಯಬಹುದು. ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿ, ಅಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಬೇಕಾದ ದಾಖಲೆಗಳನ್ನು ನೀಡುವ ಮೂಲಕ ನೀವು ಜನಧನ್ ಖಾತೆಯನ್ನು ತೆರೆಯಬಹುದು.
ಅಲ್ಲದೆ ನೀವು ನಿಮ್ಮ ಸಾಮಾನ್ಯ ಬ್ಯಾಂಕ್ ಖಾತೆಯನ್ನು (Bank Account) ಸಹ ಜನಧನ್ ಖಾತೆಯಾಗಿ ಪರಿವರ್ತಿಸಿಕೊಳ್ಳಬಹುದು. ಇನ್ನು ಓವರ್ ಡ್ರಾಫ್ಟ್ ಮೂಲಕ ನೀವು 10 ಸಾವಿರವರೆಗೆ ಹಣವನ್ನು ಸಹ ಪಡೆಯಬಹುದಾಗಿದೆ.
These People can withdraw 10 thousand even if there is 0 balance in the account
Follow us On
Google News |