ನಮ್ಮ ರಾಜ್ಯ ಸರ್ಕಾರವು ಚುನಾವಣೆ ಶುರು ಆಗುವುದಕ್ಕಿಂತ ಮೊದಲೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು, ಸರ್ಕಾರ ಆಡಳಿತಕ್ಕೆ ಬಂದು ಮೂರು ತಿಂಗಳಲ್ಲಿ 4 ಯೋಜನೆಗಳನ್ನು (Govt Schemes) ಜಾರಿಗೆ ತಂದು, 5 ನೇ ಯೋಜನೆಯು ಈ ವರ್ಷಾಂತ್ಯದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಈಗಾಗಲೇ 4 ಯೋಜನೆಗಳ ಫಲವು ಜನರಿಗೆ ಸಿಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಶೀಘ್ರದಲ್ಲೇ ಮನೆ ಯಜಮಾನಿಯರ ಅಕೌಂಟ್ ಸೇರಲಿದೆ.
ಈ ಯೋಜನೆಗಳ ಜೊತೆಗೆ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತಾದರು, ಅದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ.
ನಮ್ಮಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸಂಬಳ ಸಿಗದೆ ಕಷ್ಟಪಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸರ್ಕಾರಕ್ಕೆ ಬಹಳಷ್ಟು ಸಾರಿ ಮನವಿ ಮಾಡಿಕೊಂಡಿದ್ದಾರೆ.
ವಾಟ್ಸಾಪ್ ನಲ್ಲಿ ಈ ಮೆಸೇಜ್ ಹಂಚಿಕೊಂಡರೆ ಮೂರು ವರ್ಷ ಜೈಲು ಶಿಕ್ಷೆ ಫಿಕ್ಸ್! ಅಷ್ಟಕ್ಕೂ ಏನದು ಮೆಸೇಜ್
ಇದೀಗ ಕೇಂದ್ರ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಈ ಸಾರಿ ಸಿಹಿ ಸುದ್ದಿ ಬಂದಿರುವುದು ಕೇಂದ್ರ ಸರ್ಕಾರದಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಅಂಗನವಾಡಿ ಕಾರ್ಯಕರ್ತೆಯರ ವಿಷಯಕ್ಕೆ ಹೊಸದೊಂದು ಗುಡ್ ನ್ಯೂಸ್ ನೀಡಿದ್ದಾರೆ.
ಈ ನಿರ್ಧಾರ ಎಲ್ಲಾ ಮಹಿಳೆಯರಿಗೆ ಸಂತೋಷ ತಂದಿದೆ. ಅಷ್ಟಕ್ಕೂ ವಿಷಯ ಏನು ಎಂದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂಪಾಯಿಗಳನ್ನು ಹೆಚ್ಚುವರಿ ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತದೆ ಎಂದು ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಮೊದಲೇ, ಕೇಂದ್ರ ಸರ್ಕಾರದಿಂದ ಅವರಿಗೆ ಸಪೋರ್ಟ್ ಸಿಕ್ಕಿರುವುದು ನಿಜಕ್ಕೂ ಅಂಗನವಾಡಿ ಕಾರ್ಯಕರ್ತೆಯರ ಸಂತೋಷ ಹೆಚ್ಚಿಸಿದೆ.
ಮದುವೆ ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದ ಸರ್ಕಾರ, ರೂಲ್ಸ್ ಪಾಲಿಸದೆ ಹೋದರೆ 10 ವರ್ಷ ಜೈಲು ಶಿಕ್ಷೆ
ಅಷ್ಟೇ ಅಲ್ಲದೆ, ಅಂಗನವಾಡಿಗಳನ್ನು ಉತ್ತಮ ದರ್ಜೆಗೆ ಕರೆತರಬೇಕು ಎನ್ನುವ ಯೋಜನೆ ಕೂಡ ಹಾಕಿಕೊಳ್ಳಲಾಗಿದೆ ಎಂದು ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, 11 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ (Smartphone) ಕೊಟ್ಟಿರುವ ಬಗ್ಗೆ ಕೂಡ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಕೋವಿಡ್ ಸಮಸ್ಯೆ ಆದಾಗ, ಜನರ ಪರವಾಗಿ ಮತ್ತು ಸರ್ಕಾರದ ಪರವಾಗಿ ನಿಂತು, ಹೆಚ್ಚಿನ ಕೆಲಸ ಮಾಡಿದವರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮುಖ್ಯ ಪಾತ್ರ ವಹಿಸಿದರು ಎಂದರೆ ತಪ್ಪಲ್ಲ.
ಅವರಿಗೆ ಈಗ ಸರ್ಕಾರದಿಂದ ಪ್ರೋತ್ಸಾಹ ಸಹಾಯಕ ಧನ ಸಿಗುತ್ತಿರುವುದು ಒಳ್ಳೆಯ ವಿಷಯ ಆಗಿದೆ. ಕೇಂದ್ರ ಸರ್ಕಾರದಿಂದ ಈ ಥರದ ಒಂದು ನಿರ್ಧಾರ ಸಿಕ್ಕಿದ್ದು, ರಾಜ್ಯ ಸರ್ಕಾರ ಕೂಡ ಹೀಗೆ ಸಹಾಯ ಮಾಡಲಿ ಎನ್ನುವುದು ಎಲ್ಲಾ ಮಹಿಳೆಯರ ಆಶಯವಾಗಿದೆ
government gives an additional 500 rupees For These Women
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.