ದುಡ್ಡು ಸುಮ್ಮನೆ ಬರೋಲ್ಲ! ಮನೆ, ಆಸ್ತಿ ಖರೀದಿಗೂ ಮುನ್ನ ಇವೆಲ್ಲ ಚೆಕ್ ಮಾಡಿಕೊಳ್ಳಿ
ಆಸ್ತಿ ಖರೀದಿಯ ಮುನ್ನ ಈ ಮುಖ್ಯ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ! ನೋಂದಣಿ ಪ್ರಕ್ರಿಯೆಯಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ಇತರ ಲೀಗಲ್ ವೆಚ್ಚಗಳ ಲೆಕ್ಕ ಹಾಕಿಕೊಳ್ಳಿ
- ಆಸ್ತಿ ಖರೀದಿಯ ಮೊದಲು ಸಬ್-ರಿಜಿಸ್ಟ್ರಾರ್ ಆಫೀಸ್ ಪರಿಶೀಲನೆ ಮಾಡಿಸಲೇಬೇಕು
- ನೋಂದಣಿ ಪ್ರಕ್ರಿಯೆಯಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ಇತರ ಲೀಗಲ್ ವೆಚ್ಚಗಳ ಲೆಕ್ಕ ಹಾಕಿಕೊಳ್ಳಿ
- ಆಸ್ತಿ ದಾಖಲಾತಿಗಳು ಪೂರ್ಣವಿದ್ದು ಯಾವುದೇ ಕಾನೂನು ಸಮಸ್ಯೆಗಳಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ
ಒಬ್ಬರ ಜೀವನದ ದೊಡ್ಡ ಇನ್ವೆಸ್ಟ್ಮೆಂಟ್ (Investment) ಅಂದರೆ ಆಸ್ತಿ ಖರೀದಿ. ಆದರೆ, ಸರಿಯಾದ ಮಾಹಿತಿ ಇಲ್ಲದೆ ರಿಜಿಸ್ಟ್ರೇಷನ್ (Property Registration) ಪ್ರಕ್ರಿಯೆಯಲ್ಲಿ ತಪ್ಪು ಮಾಡಿದರೆ, ಮುಂದೆ ದೊಡ್ಡ ತಲೆನೋವು ಎದುರಾಗಬಹುದು. ಹಾಗಾಗಿ, ಆಸ್ತಿಯ ಕಾನೂನು ಪರಿವೀಕ್ಷಣೆ (Property Legal Verification) ಮಾಡುವುದು ಅತ್ಯವಶ್ಯಕ.
ಭಾರತದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಭಾರತೀಯ ರಿಜಿಸ್ಟ್ರೇಷನ್ ಆಕ್ಟ್ (Indian Registration Act) 1908 ಮತ್ತು ಭಾರತೀಯ ಸ್ಟಾಂಪ್ ಆಕ್ಟ್ (Indian Stamp Act) 1889 ಆಧಾರದ ಮೇಲೆ ನಿರ್ವಹಿಸಲಾಗುತ್ತದೆ.
ಈ ಡಾಕ್ಯುಮೆಂಟ್ಸ್ (Documents) ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡದೇ ಹೋದರೆ, ಆಸ್ತಿಯ ಮಾಲೀಕತ್ವ (Ownership) ಪ್ರಶ್ನಾರ್ಥಕವಾಗಬಹುದು.
ಇದನ್ನೂ ಓದಿ: ಚಿನ್ನದ ಬೆಲೆ ಒಂದೇ ದಿನಕ್ಕೆ ಭಾರೀ ಕುಸಿತ, ತಿಂಗಳ ಮೊದಲ ದಿನವೇ ಭರ್ಜರಿ ಸುದ್ದಿ!
ಆಸ್ತಿ ರಿಜಿಸ್ಟ್ರೇಷನ್ ಪ್ರಕ್ರಿಯೆ – ಸ್ಟೆಪ್ ಬೈ ಸ್ಟೆಪ್
ಆಸ್ತಿ ಬೆಲೆ ಲೆಕ್ಕಹಾಕುವುದು – ಆ ಪ್ರದೇಶದ ಸರ್ಕಲ್ ರೇಟ್ (Circle Rate) ಪರಿಶೀಲಿಸಿ, ಸ್ಟಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಫೀಸ್ ಲೆಕ್ಕ ಹಾಕಿ.
ಸ್ಟಾಂಪ್ ಪೇಪರ್ ತಗೊಳ್ಳುವುದು – ಆನ್‌ಲೈನ್ (Online) ಅಥವಾ ಅಧಿಕೃತ ಮಾರಾಟಗಾರರಿಂದ ನಾನ್-ಜ್ಯುಡಿಷಿಯಲ್ (Non-Judicial) ಸ್ಟಾಂಪ್ ಪೇಪರ್ ತಗೊಳ್ಳಿ.
ಸೇಲ್ ಡೀಡ್ ತಯಾರಿಕೆ – ರಿಜಿಸ್ಟರ್‌ಡ್ ಲಾಯರ್ (Lawyer) ಮೂಲಕ ಸೇಲ್ ಡೀಡ್ (Sale Deed) ರೆಡಿ ಮಾಡಿಸಿ.
ಸಬ್-ರಿಜಿಸ್ಟ್ರಾರ್ ಆಫೀಸ್ ಭೇಟಿ – ಐಡಿಂಟಿಟಿ ಪ್ರೂಫ್, ಟ್ಯಾಕ್ಸ್ ರಸೀದಿ (Tax Receipt) ಮುಂತಾದ ದಾಖಲೆಗಳನ್ನು ಸಲ್ಲಿಸಿ.
ಬಯೋಮೆಟ್ರಿಕ್ ಪರಿಶೀಲನೆ – ಬೆರಳಚ್ಚು, ಫೋಟೋ ತಗೆಸಿಕೊಳ್ಳಿ.
ರಿಜಿಸ್ಟ್ರೇಷನ್ ಫೀಸ್ ಪಾವತಿ – ಆಸ್ತಿ ಖರೀದಿಯ ಮೊದಲು ಫೀಸ್ ಪಾವತಿಸಿ.
ಅಂತಿಮ ದಾಖಲೆ ಸಂಗ್ರಹ – ರಿಜಿಸ್ಟ್ರೇಷನ್ ನಂತರ 7-15 ದಿನಗಳ (Days) ಒಳಗೆ ರಿಜಿಸ್ಟ್ರೇಷನ್ ಡಾಕ್ಯುಮೆಂಟ್ (Document) ಪಡೆದುಕೊಳ್ಳಿ.
ಇದನ್ನೂ ಓದಿ: ಎಲ್‌ಐಸಿಯಿಂದ ಭರ್ಜರಿ ಸ್ಕೀಮ್, ಸಿಗುತ್ತೆ ಲೈಫ್ ಟೈಮ್ ಪೆನ್ಷನ್ ಸೌಲಭ್ಯ
❌ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು
- ಸ್ಟಾಂಪ್ ಡ್ಯೂಟಿ ಲೆಕ್ಕ ತಪ್ಪಾದರೆ – ರಾಜ್ಯ ಸರ್ಕಾರದ ಪೋರ್ಟಲ್ (State Govt Portal) ನಲ್ಲಿ ಲೆಕ್ಕ ಹಾಕಿ.
- ಅಸಂಪೂರ್ಣ ದಾಖಲೆಗಳು – ಎಲ್ಲಾ ಲೀಗಲ್ (Legal) ಡಾಕ್ಯುಮೆಂಟ್ಸ್ ಸರಿಯಾಗಿ ಹೊಂದಿಟ್ಟುಕೊಳ್ಳಿ.
- ರಿಜಿಸ್ಟ್ರೇಷನ್ ವಿಳಂಬ – ಅಧಿಕ ಪ್ರಕ್ರಿಯೆ ತೊಂದರೆ ತಪ್ಪಿಸಲು ಮುಂಚೆಯೇ ಅಪಾಯಿಂಟ್ಮೆಂಟ್ (Appointment) ತಗೊಳ್ಳಿ.
ವ್ಯವಸಾಯ ಭೂಮಿ ಮಾರಾಟ ನಿಯಮಗಳು: ಕೆಲವು ರಾಜ್ಯಗಳು ಕೃಷಿ ಭೂಮಿ ಖರೀದಿಗೆ ನಿರ್ಬಂಧ ಹಾಕಿವೆ. ಖರೀದಿಯ ಮೊದಲು ರಾಜ್ಯ-ನಿರ್ದಿಷ್ಟ ಭೂ ಕಾನೂನುಗಳನ್ನ ಪರಿಶೀಲಿಸಿ.
ಸ್ಟಾಂಪ್ ಡ್ಯೂಟಿ: ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಈ ತೆರಿಗೆ ಸಾಮಾನ್ಯವಾಗಿ ಆಸ್ತಿ ಬೆಲೆಯಲ್ಲಿ 4% – 7% ರಷ್ಟು ಇರುತ್ತದೆ.
ರಿಜಿಸ್ಟ್ರೇಷನ್ ಫೀಸ್: ಸಾಮಾನ್ಯವಾಗಿ ಆಸ್ತಿ ಬೆಲೆಯಲ್ಲಿ 1% ಆಗಿದ್ದು, ಕೆಲವು ರಾಜ್ಯಗಳಲ್ಲಿ ಇದಕ್ಕೆ ಮಿತಿ ಇರುತ್ತದೆ.
ಲೀಗಲ್ ಮತ್ತು ಡಾಕ್ಯುಮೆಂಟೇಶನ್ ಚಾರ್ಜಸ್: ಲಾಯರ್ ಫೀಸ್, ಡ್ರಾಫ್ಟಿಂಗ್ ಚಾರ್ಜಸ್ ಮತ್ತು ಇತರ ದಾಖಲೆಗಳ ವೆಚ್ಚವೂ ಸೇರಬಹುದು.
ಪವರ್ ಆಫ್ ಅಟಾರ್ನಿ (POA): ಆಸ್ತಿ ಖರೀದಿ ಅಥವಾ ಮಾರಾಟದ ವೇಳೆ ಖರೀದಿದಾರ ಅಥವಾ ಮಾರಾಟಗಾರ ತಾವು ಹಾಜರಾಗಲು ಸಾಧ್ಯವಾಗದಿದ್ದರೆ, ಲೀಗಲ್ ಪ್ರತಿನಿಧಿಗೆ ಪಿಒಎ ನೀಡಬಹುದು.
ಇದನ್ನೂ ಓದಿ: ಆಸ್ತಿ, ಜಮೀನು ಪತ್ರದಲ್ಲಿ ತಪ್ಪುಗಳೇನಾದರೂ ಇದ್ರೆ ಸರಿಪಡಿಸಿಕೊಳ್ಳಿ! ಇಲ್ಲ ಆಸ್ತಿ ದಕ್ಕಲ್ಲ
ಎನ್‌ಕಂಬ್ರೆನ್ಸ್ ಸರ್ಟಿಫಿಕೇಟ್: ಈ ಪ್ರಮಾಣಪತ್ರ ಆಸ್ತಿಗೆ ಯಾವುದೇ ಕಾನೂನಾತ್ಮಕ ಬಾಕಿ ಅಥವಾ ಪೆಂಡಿಂಗ್ ಲೋನ್ (Loan on Property) ಇಲ್ಲ ಎಂಬುದನ್ನು ದೃಢೀಕರಿಸುತ್ತದೆ. ಲೋನ್ ಮಂಜೂರಾತಿಗೆ (Loan) ಹಾಗೂ ಸುರಕ್ಷಿತ ಸ್ವಾಮ್ಯಕ್ಕಾಗಿ ಇದು ಅಗತ್ಯ.
ರಿಜಿಸ್ಟ್ರೇಷನ್ ಅವಧಿ: ಆಸ್ತಿ ವರ್ಗಾವಣೆ ಮಾಡಿದ ನಾಲ್ಕು ತಿಂಗಳೊಳಗೆ ರಿಜಿಸ್ಟ್ರೇಷನ್ ಮಾಡಬೇಕು. ಇಲ್ಲದಿದ್ದರೆ, ದಂಡ ಕಟ್ಟಬೇಕಾಗುತ್ತದೆ ಅಥವಾ ವ್ಯವಹಾರ ಮಾನ್ಯವಾಗುವುದಿಲ್ಲ.
ಸಹ-ಮಾಲೀಕರ ನಾಮನಿರ್ದೇಶನ: ಒಂದಕ್ಕಿಂತ ಹೆಚ್ಚು ಜನರ ಹೆಸರಿನಲ್ಲಿ ಆಸ್ತಿ ನೋಂದಾಯಿಸಬಹುದು. ಆದರೆ, ನೋಂದಣಿ ಪ್ರಕ್ರಿಯೆ ಸಂದರ್ಭದಲ್ಲಿ ಎಲ್ಲ ಸಹ-ಮಾಲೀಕರ ಹಾಜರಾತಿ ಅಗತ್ಯ.
Things to Check Before Buying Property
Our Whatsapp Channel is Live Now 👇