ಎಲ್‌ಐಸಿಯಿಂದ ಭರ್ಜರಿ ಸ್ಕೀಮ್, ಸಿಗುತ್ತೆ ಲೈಫ್ ಟೈಮ್ ಪೆನ್ಷನ್ ಸೌಲಭ್ಯ
LIC Scheme: ಎಲ್‌ಐಸಿಯಿಂದ ಹೊಸ ಸ್ಮಾರ್ಟ್ ಪಿಂಚಣಿ ಯೋಜನೆ, ಒಂದು ಬಾರಿ ಹಣ ಹೂಡಿಕೆ ಮಾಡಿ, ಜೀವನಪೂರ್ತಿ ಪಿಂಚಣಿ ಪಡೆಯಿರಿ
- LIC ಸ್ಮಾರ್ಟ್ ಪಿಂಚಣಿ ಯೋಜನೆ ಅಡಿಯಲ್ಲಿ ಲೋನ್ ಸೌಲಭ್ಯವೂ ಇದೆ
- ಕನಿಷ್ಠ ₹1 ಲಕ್ಷ ಹೂಡಿಕೆ ಮಾಡಬಹುದು, ಗರಿಷ್ಟ ಮಿತಿಯಿಲ್ಲ
- 18 ರಿಂದ 100 ವರ್ಷದವರೆಗೆ ಯಾರಾದ್ರು ಈ ಯೋಜನೆಗೆ ಅರ್ಹರು
LIC Scheme: ಎಲ್‌ಐಸಿ (LIC) ಹೊಸ ಪಿಂಚಣಿ ಯೋಜನೆ ಘೋಷಣೆ! ರಿಟೈರ್ ಆದ ನಂತರವೂ ಖಾಯಂ ಆದಾಯ ಇರಲಿ ಅನ್ನೋವ್ರಿಗೆ ಇದು ಸಿಹಿ ಸುದ್ದಿ. ಈ ಯೋಜನೆಯ ಅಡಿಯಲ್ಲಿ ಒಂದೇ ಸಲ (Single Premium) ಹಣ ಹಾಕಿದರೆ, ಜೀವನಪೂರ್ತಿ ಪಿಂಚಣಿ ಪಡೆಯಬಹುದು.
ಇದರಲ್ಲಿ ತಕ್ಷಣದ ಪಿಂಚಣಿ (Immediate Pension) ಆಯ್ಕೆ ಸಹ ಇದೆ. ಇದು LIC ಹೊಸ ಸ್ಮಾರ್ಟ್ ಪಿಂಚಣಿ ಯೋಜನೆ (Smart Pension Scheme), ವಿಶೇಷವಾಗಿ ಭವಿಷ್ಯದ ಆರ್ಥಿಕ ಭದ್ರತೆ (Financial Security) ಕೊಡಲು ವಿನ್ಯಾಸಗೊಳಿಸಲಾಗಿದೆ.
ಒಂದು ಸಲ ಹಣ ಹಾಕಿ, ಖಾಯಂ ಆದಾಯ ಪಡೆಯಿರಿ!
ಈ ಯೋಜನೆಯಲ್ಲಿ, ನೀವೆಷ್ಟು ಹಣ ಹೂಡಿಸುತ್ತೀರೋ ಅದಕ್ಕೆ ತಕ್ಕಂತೆ ತಿಂಗಳಿಗೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಿಂಚಣಿ ಸಿಗುತ್ತದೆ. LIC ಅಧಿಕೃತ ವೆಬ್‌ಸೈಟ್ (Website) ಮೂಲಕ ಅಥವಾ ಎಜೆಂಟ್ (Agent), POSP-Life Insurance, ಸಾರ್ವಜನಿಕ ಸೇವಾ ಕೇಂದ್ರಗಳು (Common Service Centers) ಮೂಲಕ ಇದನ್ನು ಖರೀದಿಸಬಹುದು.
ಇದನ್ನೂ ಓದಿ: ಆಸ್ತಿ, ಜಮೀನು ಪತ್ರದಲ್ಲಿ ತಪ್ಪುಗಳೇನಾದರೂ ಇದ್ರೆ ಸರಿಪಡಿಸಿಕೊಳ್ಳಿ! ಇಲ್ಲ ಆಸ್ತಿ ದಕ್ಕಲ್ಲ
ಎಷ್ಟು ಹೂಡಿಕೆ ಮಾಡಬಹುದು?
ನೀವು ಕನಿಷ್ಠ ₹1 ಲಕ್ಷ ಹೂಡಿಕೆ ಮಾಡಬೇಕು. ಈ ಪ್ಲಾನ್‌ಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಪಿಂಚಣಿ ಪರಿಗಣನೆ ನೀವು ಸಿಂಗಲ್ ಅಥವಾ ಜಾಯಿಂಟ್ (Joint Pension) ರೂಪದಲ್ಲಿ ಮಾಡಬಹುದು.
ಯಾರು ಹೂಡಿಕೆ ಮಾಡಬಹುದು?
18 ರಿಂದ 100 ವರ್ಷ (Age Limit: 18-100 Years) ವಯಸ್ಸಿನವರೂ ಇದರಲ್ಲಿ ಹೂಡಿಕೆ ಮಾಡಬಹುದು. ಬೇರೆಯವರಿಗೂ ಈ ಯೋಜನೆಯ ಲಾಭ ಸಿಗಬೇಕು ಅನ್ನಿಸಿದರೆ ನಾಮಿನಿ (Nominee) ನಿಗದಿಪಡಿಸಬಹುದು. ಪಾಲಿಸಿದಾರರು ಅಕಾಲಿಕ ನಿಧನ (Death Benefit) ಆದರೆ, ಅವರ ನಾಮಿನಿಗೆ ಈ ಪಿಂಚಣಿ ಒದಗಿಸಲಾಗುತ್ತದೆ.
ಪಿಂಚಣಿ ಎಷ್ಟು ಸಿಗಬಹುದು?
ಉದಾಹರಣೆಗೆ, 60 ವರ್ಷದ ವ್ಯಕ್ತಿ ₹5 ಲಕ್ಷ ಹೂಡಿಸಿದರೆ, ಅವರಿಗೆ ತಿಂಗಳಿಗೆ ₹3,316 ಪಿಂಚಣಿ ಸಿಗುತ್ತದೆ. 65 ವರ್ಷ ವಯಸ್ಸಾದವರು ₹5 ಲಕ್ಷ ಹೂಡಿಸಿದರೆ, ಅವರಿಗೆ ತಿಂಗಳಿಗೆ ₹3,612 ಸಿಗುವ ಸಾಧ್ಯತೆ ಇದೆ. ಇದಲ್ಲದೆ, ಇವರ ನಿಧನವಾದರೆ 5 ಲಕ್ಷ ರೂ. ವಾಪಸ್ ಅವರ ನಾಮಿನಿಗೆ ನೀಡಲಾಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಕುರಿತು ಮೋದಿ ಸರ್ಕಾರದಿಂದ ಪ್ರಮುಖ ಘೋಷಣೆ! ಬಿಗ್ ಅಪ್ಡೇಟ್
ಪಿಂಚಣಿ ಹೆಚ್ಚಿಸುವ ಯೋಜನೆ!
ಈ ಯೋಜನೆಯ ಅಡಿಯಲ್ಲಿ, ಪಿಂಚಣಿ ನಿರ್ವಹಣೆಗಾಗಿ ಹೂಡಿದ ಹಣದ ಮೇಲೆ ಬಡ್ಡಿ ಲಾಭ ಸಿಗಬಹುದು. ಅಲ್ಲದೆ, ಮೂರ್ನಾಲ್ಕು ತಿಂಗಳು ಕಳೆದ ನಂತರ ಸಾಲ (Loan Facility) ಪಡೆಯುವ ಅವಕಾಶವಿದೆ. ಇದು ನಿವೃತ್ತಿಯಾದ ನಂತರ ಆರ್ಥಿಕ ಸುರಕ್ಷತೆ (Financial Stability) ಕೊಡಲು ಸಹಾಯಕವಾಗಲಿದೆ.
ಹೋಂ ಲೋನ್, ಪರ್ಸನಲ್ ಲೋನ್ ಬೇಕಾ?
ನೀವು LIC ಈ ಯೋಜನೆಯಡಿ ಹಣ ಹೂಡಿಸಿದ ಮೇಲೆ, ಪಾಲಿಸಿ ಮೂರು ತಿಂಗಳು (3 Months) ಕಳಿದ ಬಳಿಕ, ಅಗತ್ಯವಿದ್ದರೆ ಲೋನ್ (Loan) ಸಹ ಪಡೆಯಬಹುದು. ಇದು ನಿಮ್ಮ ಭವಿಷ್ಯ ಭದ್ರತೆಗೆ ಸಹಾಯ ಮಾಡಲಿದೆ. ಈ ಮೂಲಕ ಹೋಂ ಲೋನ್ (Home Loan), ಪರ್ಸನಲ್ ಲೋನ್ (Personal Loan) ಸುಲಭವಾಗಿ ಪಡೆಯಬಹುದು
ಸಂಪೂರ್ಣ ಪಿಂಚಣಿ ಯೋಜನೆಯ ಲಾಭ ಪಡೆಯಲು, ನಿಮ್ಮ ಆರ್ಥಿಕ ಅವಶ್ಯಕತೆಗೆ ತಕ್ಕಂತೆ LIC ಈ ಸ್ಮಾರ್ಟ್ ಪಿಂಚಣಿ ಯೋಜನೆಯನ್ನು ಪರಿಗಣಿಸಿ!
LIC Smart Pension Plan, Invest Once, Get Lifetime Pension
Our Whatsapp Channel is Live Now 👇