ಲಾಂಗ್ ರೈಡ್ ಗೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು! ಭರ್ಜರಿ ಮೈಲೇಜ್ ಮಾದರಿಗಳು - Long Ride EV Scooters
ಇಂಧನ ಬೆಲೆ ಏರಿಕೆ ನಡುವೆ ಹೆಚ್ಚು ರೇಂಜ್ ನೀಡುವ EV ಸ್ಕೂಟರ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ದೂರ ಪ್ರಯಾಣಕ್ಕೆ ಸೂಕ್ತವಾಗಿರುವ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ.

- ಲಾಂಗ್ ರೈಡ್ EV ಸ್ಕೂಟರ್‌ಗಳ ಟಾಪ್ 5 ಮಾದರಿಗಳು
- ಹೆಚ್ಚು ರೇಂಜ್ ಮತ್ತು ಆಧುನಿಕ ಫೀಚರ್‌ಗಳ ಸೌಲಭ್ಯ
- ಕಡಿಮೆ ವೆಚ್ಚದಲ್ಲಿ ದಿನನಿತ್ಯ ಪ್ರಯಾಣಕ್ಕೆ ಸೂಕ್ತ
Long Ride EV Scooters : ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ (Electric Scooter) ಬೇಡಿಕೆ ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಡಿಮೆ ಖರ್ಚು, ಜಾಸ್ತಿ ಮೈಲೇಜ್ ಮತ್ತು ಆಧುನಿಕ ಫೀಚರ್‌ಗಳನ್ನು ಬಯಸುವವರಿಗೆ EV ಸ್ಕೂಟರ್‌ಗಳು ಉತ್ತಮ ಆಯ್ಕೆ ಆಗಿವೆ.
ಒಂದು ಬಾರಿ ಚಾರ್ಜ್ ಮಾಡಿದರೂ ಹೆಚ್ಚು ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ 5 ಪ್ರಮುಖ ಮಾದರಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
Ola S1 Pro – ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾದರಿ Ola S1 Pro. ಕಂಪನಿ ಪ್ರಕಾರ, ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 320 ಕಿಮೀ ರೇಂಜ್ ಕೊಡುತ್ತದೆ. 5.3kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ 0-40 kmph ವೇಗ ತಲುಪುತ್ತದೆ. ADAS, ಕ್ರೂಯಿಜ್ ಕಂಟ್ರೋಲ್ ಮತ್ತು ಫ್ರಂಟ್ ಕ್ಯಾಮೆರಾ ಸೇರಿದಂತೆ ಪ್ರೀಮಿಯಂ ಫೀಚರ್‌ಗಳು ಕೂಡಾ ಇದರಲ್ಲಿ ಸಿಗುತ್ತವೆ. ಇದರ ಆನ್-ರೋಡ್ ಬೆಲೆ ಸುಮಾರು ₹2.14 ಲಕ್ಷ.
ಇದನ್ನೂ ಓದಿ: ಜಿಯೋ ಹೊಸ ಆಫರ್, ಕೇವಲ ₹100 ರೂಪಾಯಿಗೆ 90 ದಿನಗಳ ಡೇಟಾ ಪ್ಲಾನ್
TVS iQube – ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತೊಂದು EV ಸ್ಕೂಟರ್. ಗರಿಷ್ಠ 212 ಕಿಮೀ ರೇಂಜ್ ನೀಡುತ್ತದೆ. 5.3kWh ಬ್ಯಾಟರಿ ಪ್ಯಾಕ್, 7 ಇಂಚಿನ TFT ಸ್ಕ್ರೀನ್, USB ಚಾರ್ಜಿಂಗ್ ಪೋರ್ಟ್ ಹಾಗೂ ಬಗೆಯ ride modes ಹೊಂದಿದೆ. ಇದರ ಟಾಪ್ ವೇರಿಯಂಟ್ ಬೆಲೆ ಸುಮಾರು ₹1.7 ಲಕ್ಷ.
Hero Vida V2 – ಮೂರನೇ ಸ್ಥಾನದಲ್ಲಿರುವ Hero Vida V2 ತನ್ನ removable battery ಸೌಲಭ್ಯದಿಂದ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇದರ V2 Pro ವೇರಿಯಂಟ್ 165 ಕಿಮೀ ರೇಂಜ್ ನೀಡುತ್ತದೆ. LED projector headlamp, keyless entry, TFT ಡಿಸ್ಪ್ಲೇ ಸೇರಿದಂತೆ ಹಲವಾರು ಫೀಚರ್‌ಗಳು ಲಭ್ಯ. ಇದರ ಬೆಲೆ ₹1.5 ಲಕ್ಷದ ಸುತ್ತ.
Ather 450X – ಹೆಚ್ಚು ಚರ್ಚೆಯಾಗಿರುವ EV ಸ್ಕೂಟರ್‌ಗಳಲ್ಲಿ ಒಂದಾದ Ather 450X ಒಂದು ಚಾರ್ಜ್‌ನಲ್ಲಿ 161 ಕಿಮೀ ರೇಂಜ್ ನೀಡುತ್ತದೆ. Google Maps ಇಂಟಿಗ್ರೇಷನ್, regenerative braking, ride modes, AutoHold ಹಾಗೂ emergency stop signal ಸೌಲಭ್ಯ ಇದೆ. ಇದರ ಬೆಲೆ ₹1.64 ಲಕ್ಷ.
ಇದನ್ನೂ ಓದಿ: ಲೋನ್ ತೆಗೆದುಕೊಂಡ ವ್ಯಕ್ತಿ ಸತ್ತರೆ, ಸಾಲ ಯಾರು ತೀರಿಸಬೇಕು ಅನ್ನೋ ಗೊಂದಲಕ್ಕೆ ತೆರೆ
Ather Rizta – ಈ ಪಟ್ಟಿಯ ಕೊನೆಯ ಸ್ಕೂಟರ್ Ather Rizta. 3.7kWh ಬ್ಯಾಟರಿ ಹೊಂದಿರುವ ಇದು ಗರಿಷ್ಠ 160 ಕಿಮೀ ರೇಂಜ್ ನೀಡುತ್ತದೆ. Battery Rental Scheme ಮೂಲಕ ಕಡಿಮೆ ಬೆಲೆಗೆ ದೊರೆಯುವ ಸೌಲಭ್ಯವೂ ಇದೆ. Smart Eco Mode, SkidControl, LED ಲೈಟಿಂಗ್ ಮತ್ತು Google Maps ಸಪೋರ್ಟ್ ಇದರಲ್ಲಿ ಲಭ್ಯ. ಇದರ ಟಾಪ್ ಮಾದರಿ ಬೆಲೆ ₹1.47 ಲಕ್ಷ.
ಒಟ್ಟಿನಲ್ಲಿ, ಈ 5 EV ಸ್ಕೂಟರ್‌ಗಳು ಹೆಚ್ಚು ರೇಂಜ್ ನೀಡುವುದರೊಂದಿಗೆ ಆಧುನಿಕ ತಂತ್ರಜ್ಞಾನ ಹೊಂದಿದ್ದು, ದಿನನಿತ್ಯದ ಪ್ರಯಾಣಕ್ಕೆ ಕಡಿಮೆ ವೆಚ್ಚದ ಉತ್ತಮ ಆಯ್ಕೆಯಾಗಿವೆ.
Top 5 Long Ride EV Scooters in India




