Business News

ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ಇವು ಬೆಸ್ಟ್ ಕಾರುಗಳು, ಬೆಲೆ ಕೂಡ ಕಡಿಮೆ!

ಮಧ್ಯಮ ವರ್ಗದ ಕುಟುಂಬಗಳಿಗೆ ಅತ್ಯುತ್ತಮ ಮೈಲೇಜ್ ಮತ್ತು ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಟಾಟಾ, ಮಾರುತಿ, ರೇನಾಲ್ಟ್ ಮತ್ತು ಹ್ಯುಂಡೈ ಕಂಪನಿಗಳ ಆಕರ್ಷಕ ಕಾರುಗಳು

  • ಉತ್ತಮ ಮೈಲೇಜ್ ನೀಡುವ ಬಜೆಟ್ ಕಾರುಗಳು
  • ಟಾಟಾ, ಮಾರುತಿ, ರೇನಾಲ್ಟ್ ಮತ್ತು ಹ್ಯುಂಡೈ ಕಾರುಗಳ ವಿವರಗಳು
  • ಕೈಗೆಟುಕುವ ಬೆಲೆಯಲ್ಲಿ ಬೆಸ್ಟ್ ಕಾರುಗಳು

Budget Cars: ಮಧ್ಯಮ ವರ್ಗದ ಕುಟುಂಬಗಳಿಗೆ ಕಾರು ಖರೀದಿಸುವುದು ಒಂದು ಕನಸು. ತಮ್ಮ ಮೊದಲ ಕಾರು ವಿಶಿಷ್ಟವಾಗಿರಬೇಕು ಮತ್ತು ಕೈಗೆಟುಕುವಂತಹದ್ದಾಗಿರುವುದರ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಾರೆ.

ಯಾಕೆಂದರೆ, ಅದು ಅವರ ಮೊದಲ ಕಾರು. ಅಂತಹವರಿಗಾಗಿ ನಾವು ಕೆಲವು ಕಾರುಗಳನ್ನು ಪರಿಚಯಿಸುತ್ತೇವೆ. ಕಾರು ಖರೀದಿಸಬೇಕೆಂದಿರುವವರು ಇವುಗಳನ್ನು ಒಮ್ಮೆ ನೋಡಿ ಆಯ್ಕೆ ಮಾಡಿಕೊಳಬಹುದು

ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ಇವು ಬೆಸ್ಟ್ ಕಾರುಗಳು, ಬೆಲೆ ಕೂಡ ಕಡಿಮೆ!

ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ (Cars for middle-class families) ಅತ್ಯುತ್ತಮ ಮೈಲೇಜ್ (Best Mileage Cars) ಮತ್ತು ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಟಾಟಾ, ಮಾರುತಿ, ರೇನಾಲ್ಟ್ ಮತ್ತು ಹ್ಯುಂಡೈ ಕಂಪನಿಗಳ ಆಕರ್ಷಕ ಕಾರುಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಧ್ಯಮ ವರ್ಗದ ಜನರಿಗಾಗಿ ಬಂತು ಬೆಸ್ಟ್ ಬಜೆಟ್ ಬೈಕ್ ಹೋಂಡಾ ಶೈನ್ 125

ಹುಂಡೈ ಎಕ್ಸ್‌ಟರ್

Hyundai Exter : ₹7 ಲಕ್ಷ ಒಳಗಿನ ಕಾರುಗಳಲ್ಲಿ ಹ್ಯುಂಡೈ ಎಕ್ಸ್ಟರ್ ಅತ್ಯುತ್ತಮ ಆಯ್ಕೆಯಾಗಿದೆ. 1197 ಸಿಸಿ ಎಂಜಿನ್ ಮತ್ತು ಲೀಟರ್‌ಗೆ 19.2-19.4 ಕಿಮೀ ಮೈಲೇಜ್ ನೀಡುವ ಈ ಕಾರು 12 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಪ್ರಾರಂಭ ಬೆಲೆ ₹6.13 ಲಕ್ಷ (ಎಕ್ಸ್-ಶೋರೂಮ್).

ಮಾರುತಿ ಸುಜುಕಿ ಸ್ವಿಫ್ಟ್

Maruti Suzuki Swift : ಮಾರುತಿ ಸುಜುಕಿ ಸ್ವಿಫ್ಟ್, ಉತ್ತಮ ಮೈಲೇಜ್ ನೀಡುವ ಕಾರುಗಳಲ್ಲಿ ಮತ್ತೊಂದು ಗಮನಾರ್ಹ ಆಯ್ಕೆ. ₹6.49 ಲಕ್ಷದ ಪ್ರಾರಂಭ ಬೆಲೆಯಲ್ಲಿ ಲಭ್ಯವಿರುವ ಈ ಕಾರು ಲೀಟರ್‌ಗೆ 24.8-25.75 ಕಿಮೀ ಮೈಲೇಜ್ ನೀಡುತ್ತದೆ. ಸಿಎನ್‌ಜಿ ಆವೃತ್ತಿಯಲ್ಲೂ ಲಭ್ಯವಿರುವ ಈ ಕಾರು, ಬಜೆಟ್ ಕಾರು ಪ್ರಿಯರ ಹೃದಯ ಗೆದ್ದಿದೆ.

Maruti Suzuki Swift

ಮಾರುತಿ ಸುಜುಕಿ ವೇಗನ್ ಆರ್

Maruti Suzuki Wagon R : ಮಾರುತಿ ಸುಜುಕಿ ವೇಗನ್ ಆರ್, ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಮಾದರಿ. ₹5.54 ಲಕ್ಷದಿಂದ ಪ್ರಾರಂಭವಾಗುವ ಬೆಲೆಯೊಂದಿಗೆ ಲೀಟರ್‌ಗೆ 23.56-25.19 ಕಿಮೀ ಮೈಲೇಜ್ ನೀಡುತ್ತದೆ. 998-1197 ಸಿಸಿ ಎಂಜಿನ್‌ ಹೊಂದಿರುವ ಈ ಕಾರು ಕುಟುಂಬಗಳಿಗೆ ಸೂಕ್ತವಾದ ಆಯ್ಕೆಯಾಗಲಿದೆ.

ಇದನ್ನೂ ಓದಿ: ಕವಾಸಾಕಿ ಸ್ಪೋರ್ಟ್‌ಬೈಕ್ ಮೇಲೆ 45,000 ಭರ್ಜರಿ ಡಿಸ್ಕೌಂಟ್‌! ಫೆ. 28ಕ್ಕೆ ಆಫರ್ ಕೊನೆ

ಟಾಟಾ ಟಿಯಾಗೋ

Tata Tiago : ಟಾಟಾ ಟಿಯಾಗೋ ಕಡಿಮೆ ಬಜೆಟ್ ಕಾರುಗಳಲ್ಲಿ ಪ್ರಮುಖವಾಗಿ ಹೆಸರು ಮಾಡಿದೆ. ₹4.99 ಲಕ್ಷದಿಂದ ಲಭ್ಯವಿರುವ ಈ ಕಾರು, ಲೀಟರ್‌ಗೆ 19-20 ಕಿಮೀ ಮೈಲೇಜ್ ನೀಡುತ್ತದೆ. 6 ಬಣ್ಣಗಳಲ್ಲಿ ಮತ್ತು 27 ವಿಭಿನ್ನ ಮಾದರಿಗಳಲ್ಲಿ ಲಭ್ಯವಿರುವ ಟಿಯಾಗೋ, ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ರೇನಾಲ್ಟ್ ಕ್ವಿಡ್

Renault Kwid : ಬಜೆಟ್ ಶ್ರೇಣಿಯಲ್ಲಿ ರೇನಾಲ್ಟ್ ಕ್ವಿಡ್ ಕೂಡ ಪ್ರಮುಖ ಸ್ಪರ್ಧಿಯಾಗಿದ್ದು, ₹4.70 ಲಕ್ಷದಿಂದ ಲಭ್ಯವಿದೆ. ಲೀಟರ್‌ಗೆ 21.46-22.3 ಕಿಮೀ ಮೈಲೇಜ್ ಮತ್ತು 999 ಸಿಸಿ ಎಂಜಿನ್ ಹೊಂದಿರುವ ಈ ಕಾರು ಉತ್ತಮ ಆಯ್ಕೆಯಾಗಿದೆ.

Top Budget Cars for Middle-Class Families

English Summary

Our Whatsapp Channel is Live Now 👇

Whatsapp Channel

Related Stories