ದೋಸ್ತಾ ಬೆಂಕಿ ಮೈಲೇಜ್ ಕೊಡೋ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಆಗೈತಿ
Electric Bike : ಒಂದೇ ಚಾರ್ಜ್‌ನಲ್ಲಿ 165km ರೇಂಜ್ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಬೈಕ್ ಲಾಂಚ್ ಆಗಿದೆ, ಹೆದ್ದಾರಿ ಆಗಲಿ, ಆಫ್-ರೋಡ್ ಆಗಲಿ ಸ್ಮೂತ್ ರೈಡಿಂಗ್ ಅನುಭ ನೀಡುತ್ತೆ
- ಒಂದೇ ಚಾರ್ಜ್‌ನಲ್ಲಿ 165km ರೇಂಜ್ ಎಲೆಕ್ಟ್ರಿಕ್ ಬೈಕ್
- 0-60 km/h ಕೇವಲ 2.9 ಸೆಕೆಂಡುಗಳಲ್ಲಿ!
- ಬುಕಿಂಗ್ ಪ್ರಾರಂಭ – 2026 Q1ರಲ್ಲಿ ಡೆಲಿವರಿ
Electric Bike : ಹೊಸ ತಲೆಮಾರಿನ ಎಲೆಕ್ಟ್ರಿಕ್ ಬೈಕ್ ಬಂದಿದೆ! ಅಲ್ಟ್ರಾವಾಯೊಲಟ್ (Ultraviolette) ಸಂಸ್ಥೆ Shockwave ಹೆಸರಿನ ಹೊಸ ಎಲೆಕ್ಟ್ರಿಕ್ ಎಂಡ್ಯೂರೋ ಬೈಕ್ (Electric Enduro Bike) ಮಾರುಕಟ್ಟೆಗೆ ಪರಿಚಯಿಸಿದೆ.
165km ರೇಂಜ್ ಹೊಂದಿರುವ ಈ ಬೈಕ್ ಕೇವಲ ₹1.75 ಲಕ್ಷ ಮೊತ್ತದಲ್ಲಿ ಲಭ್ಯವಿದೆ. ಆದ್ರೆ, ಮೊದಲ 1,000 ಗ್ರಾಹಕರಿಗೆ ₹1.50 ಲಕ್ಷ ಕ್ಕೆ ಮಾತ್ರ ಸಿಗಲಿದೆ!
ಇದನ್ನೂ ಓದಿ: ಹೈಟೆಕ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್! 261 ಕಿ.ಮೀ ಮೈಲೇಜ್ ಕೊಡುತ್ತಂತೆ ಗುರು
ಹೆದ್ದಾರಿ ಆಗಲಿ, ಆಫ್-ರೋಡ್ ಆಗಲಿ – ಎಲ್ಲಕ್ಕೂ ಸೂಕ್ತ!
ಈ ಹೊಸ Shockwave ಹೆದ್ದಾರಿ ಹಾಗೂ ಆಫ್-ರೋಡ್ (Off-Road) ರೈಡಿಂಗ್ ಎರಡಕ್ಕೂ ಸರಿಹೊಂದುವಂತೆ ವಿನ್ಯಾಸಗೊಳ್ಳಲಾಗಿದೆ. ಟ್ರಾಕ್ ಓನ್ಲಿ (Track Only) ಬೈಕ್ ಮಾತ್ರವಲ್ಲ, ಲೀಗಲ್ ಸ್ಟ್ರೀಟ್-ಯೂಸ್ (Legal Street Use) ಗಾಗಿ ಸಹ ಪರಿಗಣಿಸಲಾಗಿದೆ.
ಪವರ್ ಮತ್ತು ವೇಗ
ಈ ಎಲೆಕ್ಟ್ರಿಕ್ ಬೈಕ್ ಕೇವಲ 2.9 ಸೆಕೆಂಡುಗಳಲ್ಲಿ 0-60 km/h ವೇಗ ತಲುಪುತ್ತದೆ! ಟಾಪ್ ಸ್ಪೀಡ್ (Top Speed) 120 km/h ಆಗಿದ್ದು, ಕೆವಲ 120kg ತೂಕ ಹೊಂದಿರುವ ಲೈಟ್ವೇಟ್ ಬಾಡಿ ನಿಖರವಾದ ನಿಯಂತ್ರಣವನ್ನು ಒದಗಿಸುತ್ತದೆ.
ಸ್ಟ್ರಾಂಗ್ ಬ್ಯಾಟರಿ & ಮೋಟಾರ್ ಪವರ್!
Shockwave ನಲ್ಲಿ 4kWh ಬ್ಯಾಟರಿ ಪ್ಯಾಕ್ ಜೊತೆಗೆ 14.5bhp ಎಲೆಕ್ಟ್ರಿಕ್ ಮೋಟಾರ್ ನೀಡಲಾಗಿದೆ. ಈ ಬೈಕ್ 165km ರೇಂಜ್ ಹೊಂದಿದ್ದು, ಡೈಲಿ ಯೂಸ್ (Daily Use) ಗೆ ಪರಫೆಕ್ಟ್ ಆಯ್ಕೆ!
ಇದನ್ನೂ ಓದಿ: ಸ್ಟನ್ನಿಂಗ್ ಲುಕ್, ಅಡ್ವಾನ್ಸ್ ಫೀಚರ್! ಟಿವಿಎಸ್ ಜೂಪಿಟರ್ 110 ಸ್ಕೂಟರ್ ಬಿಡುಗಡೆ
ಸೆಫ್ಟಿ ಫೀಚರ್‌ಗಳೂ ಹೇರಳ!
ನಿರ್ವಹಣೆಯ ವಿಷಯದಲ್ಲಿ – 4 ಟ್ರಾಕ್ಷನ್ ಕಂಟ್ರೋಲ್ ಮೋಡ್ (Traction Control Modes), ಡ್ಯುಯಲ್-ಚಾನೆಲ್ ABS, 6 ಲೆವೆಲ್ ಡೈನಾಮಿಕ್ ರಿಜೆನರೇಷನ್ ಸೇರಿದಂತೆ ಹಲವು ಅಧುನಿಕ ಫೀಚರ್‌ಗಳು ಲಭ್ಯವಿವೆ.
ಸ್ಟೈಲಿಷ್ ಲುಕ್ – ಕಲರ್ ಆಪ್ಶನ್ ಸೂಪರ್!
ಅಲ್ಟ್ರಾವಾಯೊಲಟ್ Shockwave Cosmic Black & Frost White ಎಂಬ 2 ಅದ್ಭುತ ಕಲರ್ ಆಪ್ಶನ್‌ಗಳಲ್ಲಿ ಲಭ್ಯವಿದೆ.
ಬುಕಿಂಗ್ ಶುರು – ತಡಮಾಡಬೇಡಿ!
ಈ ಬೈಕ್‌ಗಾಗಿ ಬುಕಿಂಗ್ ಈಗಾಗಲೇ ಆರಂಭವಾಗಿದೆ! ನೀವು ಅಲ್ಟ್ರಾವಾಯೊಲಟ್ ವೆಬ್‌ಸೈಟ್ ಅಥವಾ ಡೀಲರ್‌ಶಿಪ್ ಗೆ ಭೇಟಿ ನೀಡಬಹುದು. 2026ರ ಮೊದಲ ತ್ರೈಮಾಸಿಕದಲ್ಲಿ (Q1 2026) ಡೆಲಿವರಿ ಪ್ರಾರಂಭವಾಗಲಿದೆ!
Ultraviolette Shockwave Electric Bike Launched with 165km Range
Our Whatsapp Channel is Live Now 👇