ಹೈಟೆಕ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್! 261 ಕಿ.ಮೀ ಮೈಲೇಜ್ ಕೊಡುತ್ತಂತೆ ಗುರು
Electric Scooter: ಅದ್ಭುತ ಡಿಸೈನ್, ಪವರ್‌ಫುಲ್ ರೇಂಜ್ – ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್! ಅಲ್ಟ್ರಾವಾಯೊಲಟ್ ಟೆಸೆರಾಕ್ಟ್ (Ultraviolette Tesseract) ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ
- 261km ರೇಂಜ್ ಕೊಡುವ ಹೈ-ಟೆಕ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ
- ನೆಕ್ಸ್ಟ್-ಜೆನ್ ತಂತ್ರಜ್ಞಾನ, ಕ್ಯಾಮರಾ, ಡ್ಯುಯಲ್ ABS ಸೆಫ್ಟಿ ಫೀಚರ್
- ಅದ್ಭುತ ಡಿಸೈನ್, ಪವರ್‌ಫುಲ್ ರೇಂಜ್ – ಹೊಸ ಎಲೆಕ್ಟ್ರಿಕ್ ಸ್ಕೂಟರ್
Electric Scooter: ಇದು ಹಳೆಯ ಸ್ಕೂಟರ್‌ಗಳ ಕಾಲವಲ್ಲ, ಹೊಸ ಜಮಾನಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದೆ ಬಿಟ್ಟಿದೆ! ಈಗ ಅಲ್ಟ್ರಾವಾಯೊಲಟ್ ಟೆಸೆರಾಕ್ಟ್ (Ultraviolette Tesseract) ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ, 261km ರೇಂಜ್ ಕೊಡುವ ಈ ಸ್ಮಾರ್ಟ್ ಸ್ಕೂಟರ್ ಜನರ ಮನಸೆಳೆಯುತ್ತಿದೆ.
ಇದು ಹೈ-ಟೆಕ್ ಪ್ಲಾಟ್‌ಫಾರ್ಮ್ (High-Tech Platform) ನಲ್ಲಿ ನಿರ್ಮಾಣವಾಗಿದ್ದು, ಡ್ಯುಯಲ್ ರಡಾರ್ (Dual Radar), ಫ್ರಂಟ್ ಮತ್ತು ರಿಯರ್ ಕ್ಯಾಮರಾ, ಹಿಲ್ ಹೋಲ್ಡ್ (Hill Hold), ಕ್ರೂಸ್ ಕಂಟ್ರೋಲ್ (Cruise Control) ಸೇರಿದಂತೆ ಒಂದು ಎಲೆಕ್ಟ್ರಿಕ್ ಸ್ಕೂಟರ್ ಗೆ ಬೇಕಾದ ಎಲ್ಲ ಅತ್ಯಾಧುನಿಕ ತಂತ್ರಜ್ಞಾನವಿದೆ!
ಇದನ್ನೂ ಓದಿ: ಸ್ಟನ್ನಿಂಗ್ ಲುಕ್, ಅಡ್ವಾನ್ಸ್ ಫೀಚರ್! ಟಿವಿಎಸ್ ಜೂಪಿಟರ್ 110 ಸ್ಕೂಟರ್ ಬಿಡುಗಡೆ
0-60 km/h ಕೇವಲ 2.9 ಸೆಕೆಂಡುಗಳಲ್ಲಿ!
ಈ ಎಲೆಕ್ಟ್ರಿಕ್ ಸ್ಕೂಟರ್ 3.5kWh, 5kWh ಮತ್ತು 6kWh ಬ್ಯಾಟರಿ ಆಪ್ಶನ್ ಹೊಂದಿದ್ದು, 34 ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ಕೂಡ ಲಭ್ಯವಿದೆ. ಹೆಲ್ಮೆಟ್ ಕೂಡಾ ಇರಿಸಿಕೊಳ್ಳಬಹುದು!
ಸೇಫ್ಟಿ ಫೀಚರ್ಸ್: ಡ್ಯುಯಲ್ ಚಾನೆಲ್ ABS ಮತ್ತು ಟ್ರಾಕ್ಷನ್ ಕಂಟ್ರೋಲ್!
ಈ ಸ್ಕೂಟರ್ 14 ಇಂಚಿನ ಚಕ್ರಗಳು, ಡಿಸ್ಕ್ ಬ್ರೇಕ್ (Disc Brake) ಸಿಸ್ಟಮ್, ABS ಮತ್ತು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (Dynamic Stability Control) ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ ಯಾವುದೇ ತೊಂದರೆ ಇಲ್ಲ!
ಡಿಸೈನ್ ಮತ್ತು ತಂತ್ರಜ್ಞಾನ – ಬೊಂಬಾಟ್ ಡ್ರೈವಿಂಗ್ ಅನುಭವ!
ಹೊಸ TFT ಟಚ್‌ಸ್ಕ್ರೀನ್ (TFT Touchscreen), Violette AI, ಮ್ಯೂಸಿಕ್ ಕಂಟ್ರೋಲ್, ನ್ಯಾವಿಗೇಷನ್ ಎಲ್ಲವೂ ಇದೆ. ಇದು ಕೇವಲ ಪವರ್‌ಫುಲ್ ಅಲ್ಲ, ಅತಿ ಇಂಟೆಲಿಜೆಂಟ್ ಸ್ಕೂಟರ್!
ಇದನ್ನೂ ಓದಿ: ಬೆಸ್ಟ್ ಮೈಲೇಜ್ ಕೊಡುವ ಪೆಟ್ರೋಲ್ ಕಾರುಗಳು, ಬೆಲೆ 4 ಲಕ್ಷದಿಂದ ಪ್ರಾರಂಭ
ಮಲ್ಟಿಪಲ್ ಕಲರ್ ಆಪ್ಶನ್ – ಸ್ಟೈಲಿಶ್ ಲುಕ್ಸ್!
ಈ ಸ್ಕೂಟರ್ ಡೆಜರ್ಟ್ ಸ್ಯಾಂಡ್ (Desert Sand), ಸಾನಿಕ್ ಪಿಂಕ್ (Sonic Pink), ಸ್ಟೀಲ್ತ್ ಬ್ಲಾಕ್ (Stealth Black) ನಂತಹ ಅದ್ಭುತ ಶೇಡ್ಸ್‌ನಲ್ಲಿ ಲಭ್ಯವಿದೆ.
ಬುಕಿಂಗ್ ಶುರುವಾಗಲಿದೆ – ತಡಮಾಡದಿರಿ!
ಈ ಭವಿಷ್ಯದ ಸ್ಕೂಟರ್ 2026ರ ಮೊದಲ ತ್ರೈಮಾಸಿಕದಿಂದ ಡೆಲಿವರಿ ಪ್ರಾರಂಭವಾಗಲಿದೆ. ನೀವು ಈ ಸ್ಕೂಟರ್ ಖರೀದಿಸಲು ಉತ್ಸುಕನಾಗಿದ್ದರೆ, ತಕ್ಷಣವೇ ನಿಮ್ಮ ಬಜೆಟ್ ಸಿದ್ಧ ಪಡಿಸಿಕೊಳ್ಳಿ!
Next-Gen Electric Scooter with 261km Range
Our Whatsapp Channel is Live Now 👇