ಫೆಡರಲ್ ಬ್ಯಾಂಕ್‌ಗೆ ವಿದ್ಯಾ ಬಾಲನ್ ಹೊಸ ಬ್ರ್ಯಾಂಡ್ ಅಂಬಾಸಿಡರ್
ಫೆಡರಲ್ ಬ್ಯಾಂಕ್ ದಕ್ಷಿಣದಿಂದ ಉತ್ತರದವರೆಗೆ ಆರ್ಥಿಕತೆಗೆ ಬಲ ನೀಡುತ್ತಿದೆ. ಫೆಡರಲ್ ಬ್ಯಾಂಕ್ ಡಿಜಿಟಲ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ: ನಟಿ ವಿದ್ಯಾ ಬಾಲನ್
Federal Bank: ಭಾರತದ ಪ್ರಮುಖ ಖಾಸಗಿ ಸಂಸ್ಥೆ ಫೆಡರಲ್ ಬ್ಯಾಂಕ್ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬಾಲಿವುಡ್ ನಟಿ ವಿದ್ಯಾಬಾಲನ್ ಅವರನ್ನು ತನ್ನ ಮೊದಲ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ.
ಹೌದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಫೆಡರಲ್ ಬ್ಯಾಂಕ್ (Federal Bank) ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದ ಜನಪ್ರಿಯ ನಟಿ ವಿದ್ಯಾ ಬಾಲನ್ (Actress Vidya Balan) ಅವರನ್ನು ತಮ್ಮ ಮೊದಲ ಬ್ರ್ಯಾಂಡ್ ಅಂಬಾಸಿಡರ್ (Brand Ambassador) ಆಗಿ ಆಯ್ಕೆ ಮಾಡಿದೆ!
ಇದನ್ನೂ ಓದಿ: ಫೋನ್‌ಪೇ ಬಳಸಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ! ಬಂಪರ್ ಕೊಡುಗೆ
ಮುಂಬೈ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ!
ಮುಂಬೈ (Mumbai) ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಘೋಷಣೆಯಾಯಿತು. “ನಟಿ ವಿದ್ಯಾ ಬಾಲನ್ ನಮ್ಮ ಬೆಂಬಲಕ್ಕಾಗಿ ಅತ್ಯುತ್ತಮ ಆಯ್ಕೆ. ಅವರ ಪ್ರಭಾವ, ನಟನೆ ಮಾತ್ರವಲ್ಲ, ನಿಜ ಜೀವನದ ವಿಚಾರಧಾರೆ ಕೂಡ ನಮ್ಮ ಮೌಲ್ಯಗಳಿಗೆ ಹೊಂದಿಕೆಯಾಗುತ್ತದೆ” ಎಂದು ಫೆಡರಲ್ ಬ್ಯಾಂಕ್‌ನ (Federal Bank) ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಎಮ್.ವಿ.ಎಸ್. ಮೂರ್ತಿ (M.V.S. Murthy) ತಿಳಿಸಿದ್ದಾರೆ.
ಬ್ಯಾಂಕ್‌ಗೆ ಹೊಸ ಗರಿ!
“ಫೆಡರಲ್ ಬ್ಯಾಂಕ್ ದಕ್ಷಿಣದಿಂದ ಉತ್ತರದವರೆಗೆ (South to North) ಆರ್ಥಿಕತೆಗೆ ಬಲ ನೀಡುತ್ತಿದೆ. ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ (Digital Banking) ಮುಂಚೂಣಿಯಲ್ಲಿದೆ. ಇಂತಹ ಅದ್ಭುತ ತಂಡದ ಭಾಗವಾಗಿರುವುದು ನನಗೆ ಖುಷಿಯ ವಿಷಯ” ಎಂದು ನಟಿ ವಿದ್ಯಾ ಬಾಲನ್ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಸ್‌ಬಿಐ ಗ್ರಾಹಕರಿಗೆ ಹೊಸ ಸ್ಕೀಮ್! ಸಿಗುತ್ತೆ ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ
ಫೆಡರಲ್ ಬ್ಯಾಂಕ್ ತನ್ನ ಗ್ರಾಹಕರಿಗೆ (Customers) ಉತ್ತಮ ಸೇವೆ ನೀಡಲು ಬದ್ಧವಾಗಿದೆ. ಈ ಹೊಸ ನೇಮಕದಿಂದ ಬ್ಯಾಂಕ್ ಬ್ರ್ಯಾಂಡ್ ಪ್ರಚಾರ (Brand Promotion) ಮತ್ತಷ್ಟು ಬಲ ಪಡೆದುಕೊಳ್ಳಲಿದೆ.
Vidya Balan Joins Federal Bank as Brand Ambassador
Our Whatsapp Channel is Live Now 👇