ಭೂಮಿ ಖರೀದಿಗೆ ಸಾಲ ಬೇಕಾ? ಇಲ್ಲಿ ನಿಮಗೂ ಸಿಗುತ್ತೆ ಲ್ಯಾಂಡ್ ಪರ್ಚೇಸ್ ಲೋನ್‌

Land Purchase Loan: ಭೂಮಿ ಖರೀದಿಸಲು ಹಣಕ್ಕಾಗಿ ಚಿಂತೆಯಲ್ಲಿದ್ದರೆ, ಬ್ಯಾಂಕ್ ಅಥವಾ NBFCಗಳಿಂದ ಲಭ್ಯವಿರುವ ಲ್ಯಾಂಡ್ ಪರ್ಚೇಸ್ ಲೋನ್‌ ಮೂಲಕ ನಿಮ್ಮ ಕನಸಿನ ಜಾಗ ಖರೀದಿ ಸಾಧ್ಯವಾಗಬಹುದು.

  • ಆಸ್ತಿ, ಭೂಮಿ ಖರೀದಿಗೆ ಬ್ಯಾಂಕ್‌ಗಳಿಂದ ಲೋನ್‌ ಸೌಲಭ್ಯ
  • 60% – 80% ತನಕ ಲೋನ್‌ ಆಫರ್ ಸಿಗಬಹುದು
  • 18 ತಿಂಗಳಲ್ಲಿ ಮನೆ ನಿರ್ಮಾಣ ಆರಂಭಿಸಬೇಕು

Land Purchase Loan: ಇತ್ತೀಚೆಗೆ ನಗರಗಳಲ್ಲಿ ಜಾಗದ ಬೆಲೆ (land prices) ಗಗನಕ್ಕೇರಿದೆ. ಈ ಸಮಯದಲ್ಲಿ ಎಲ್ಲ ಹಣವನ್ನೂ ಹಾಕಿ ಪ್ಲಾಟ್ ಖರೀದಿಸುವುದು ಸಾಧ್ಯವೇ? ಈ ಪ್ರಶ್ನೆಗೆ ಉತ್ತರವೇ ಲ್ಯಾಂಡ್ ಪರ್ಚೇಸ್ ಲೋನ್‌ (Land Purchase Loan). ನಿಮ್ಮ ಸೇವಿಂಗ್ ಉಳಿಸಿಕೊಂಡೇ ಕನಸಿನ ಜಾಗ ಖರೀದಿಸಲು ಈ ಆಪ್ಷನ್ ಸೂಕ್ತ.

ಈ ಲೋನ್ ಎಲ್ಲರಿಗೂ ಸಿಗುತ್ತಾ?

ನಿಮ್ಮ ವಯಸ್ಸು 21 ರಿಂದ 65 ನಡುವೆ ಇದ್ದರೆ, ಸ್ಥಿರ ಆದಾಯವಿದ್ದರೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ, ನೀವು ಈ ಲೋನ್‌ಗೆ ಅರ್ಹರಾಗಬಹುದು. ನೀವು ಉದ್ಯೋಗದಲ್ಲಿರಬಹುದು ಅಥವಾ ಸ್ವ ಉದ್ಯೋಗ ಮಾಡುತ್ತಿದ್ದರೂ ಯಾವುದೇ ತೊಂದರೆಯಿಲ್ಲ. ಕಡಿಮೆ ಆದಾಯದವರಿಗೂ ಈ ಲೋನ್ ಲಭ್ಯವಿದೆ, ಆದರೆ ಕೆಲವು ಬ್ಯಾಂಕುಗಳು ಕನಿಷ್ಠ ಆದಾಯದ ಮಟ್ಟವನ್ನು ಕೇಳುತ್ತವೆ.

ಇದನ್ನೂ ಓದಿ: ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರಿಗೆ ಗುಡ್ ನ್ಯೂಸ್! ಇದು ಓದಲೇಬೇಕಾದ ಸುದ್ದಿ

ಲ್ಯಾಂಡ್ ಲೋನ್‌ ಷರತ್ತುಗಳು ಏನು?

ಕೆಲವು ಬ್ಯಾಂಕುಗಳು ಲೋನ್ ತೆಗೆದುಕೊಂಡ ಬಳಿಕ 18 ತಿಂಗಳೊಳಗೆ ಆ ಜಾಗದಲ್ಲಿ ಮನೆಯ ಕನ್ಸ್ಟ್ರಕ್ಷನ್ (construction) ಪ್ರಾರಂಭಿಸಬೇಕೆಂದು ಕೇಳುತ್ತವೆ. 3 ವರ್ಷದಲ್ಲಿ ಕಟ್ಟಡ ಪೂರ್ಣವಾಗಬೇಕು. ಜೊತೆಗೆ ನೀವು ಛಾಯಾಚಿತ್ರ ಅಥವಾ ಆರ್ಕಿಟೆಕ್ಟ್ ಪ್ರಮಾಣ ಪತ್ರ ನೀಡಬೇಕಾಗಬಹುದು. ಕೆಲವೊಮ್ಮೆ ಬ್ಯಾಂಕ್ ಅಧಿಕಾರಿಗಳು ಸ್ಥಳದ ವೀಕ್ಷಣೆಯೂ ಮಾಡುತ್ತಾರೆ.

ಹೋಮ್ ಲೋನ್‌ Vs ಲ್ಯಾಂಡ್ ಲೋನ್

ಹೋಮ್ ಲೋನ್ ಹಾಗೂ ಲ್ಯಾಂಡ್ ಲೋನ್ (Home Loan Vs Land Loan) ಎರಡು ವಿಭಿನ್ನ ಲೋನ್‌ ಆಗಿದ್ದು, ಬಡ್ಡಿದರದಲ್ಲಿ ವ್ಯತ್ಯಾಸವಿರುತ್ತದೆ. ಲ್ಯಾಂಡ್ ಲೋನ್‌ಗೆ ಸಾಮಾನ್ಯವಾಗಿ 8.6% ರಿಂದ 17% ವರೆಗಿನ ಇಂಟರೆಸ್ಟ್ ರೇಟ್ (interest rate) ಇರುತ್ತದೆ. ಈ ಲೋನ್‌ಗಳ ಅವಧಿ ಸಾಮಾನ್ಯವಾಗಿ 5 ರಿಂದ 20 ವರ್ಷಗಳ ನಡುವೆ ಇರುತ್ತದೆ.

ಇದನ್ನೂ ಓದಿ: ₹100, ₹200 ರೂಪಾಯಿ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್! ಮಹತ್ವದ ನಿರ್ಧಾರ

Home Loan

ಬ್ಯಾಂಕ್‌ಗಳು ಎಷ್ಟು ಲೋನ್ ನೀಡುತ್ತವೆ?

ಪ್ಲಾಟ್ ಮೌಲ್ಯದ 60% ರಿಂದ 80%ವರೆಗೂ ಲೋನ್ ದೊರೆಯಬಹುದು. ಉಳಿದ ಹಣ ನೀವು ಪರ್ಸನಲಿ ಭರಿಸಬೇಕು. ಲೋನ್ ಮೊತ್ತ ₹25 ಲಕ್ಷದಿಂದ ₹15 ಕೋಟಿವರೆಗೆ ಇರಬಹುದು. ನಿಮ್ಮ ಲೋನ್ ಎಷ್ಟು ಎನ್ನುವುದು ನಿಮ್ಮ ಜಾಗದ ಸ್ಥಳ, ಆದಾಯ, ಕ್ರೆಡಿಟ್ ಸ್ಕೋರ್, ಈಗಿರುವ ಸಾಲಗಳು ಇತ್ಯಾದಿಗಳ ಮೇಲೆ ಆಧಾರಿತವಾಗಿರುತ್ತದೆ.

ಇದನ್ನೂ ಓದಿ: ಪ್ಯಾನ್ ಕಾರ್ಡ್ ಇರೋರಿಗೆ ಬಿಗ್ ಅಲರ್ಟ್, ಹೀಗೆ ಮಾಡಿದ್ರೆ 10,000 ದಂಡ! ಹುಷಾರ್

ಯಾವೆಲ್ಲ ಡಾಕ್ಯುಮೆಂಟ್‌ಗಳು ಬೇಕು?

ಈ ಲೋನ್‌ಗೆ ಅರ್ಜಿ ಹಾಕುವಾಗ, Aadhaar, PAN, address proof, 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಆದಾಯ ಪ್ರಮಾಣ ಪತ್ರಗಳು (IT Returns) ಅಗತ್ಯವಿದೆ. ಜೊತೆಗೆ ಜಾಗದ ದಾಖಲೆಗಳು (Title deed, tax receipt) ಹಾಗೂ ಲೀಗಲ್ ವರದಿ ಸಲ್ಲಿಸಬೇಕು.

Property Documents

ಎಲ್ಲ ಜಾಗಗಳಿಗೆ ಲೋನ್ ಸಿಗುತ್ತಾ?

ಹೌದು, ಆದರೆ ಅದು ಕಾನೂನುಬದ್ಧ ಹಾಗೂ ರೆಸಿಡೆನ್ಷಿಯಲ್ ಬಳಕೆಗಾಗಿ ಮೀಸಲಾದ ಜಾಗವಾಗಿರಬೇಕು. ನಗರ ಅಥವಾ ಮ್ಯುನಿಸಿಪಲ್ ವ್ಯಾಪ್ತಿಯಲ್ಲಿ ಇರಬೇಕು. ಗ್ರಾಮೀಣ, ಕೃಷಿ ಅಥವಾ ಇಂಡಸ್ಟ್ರಿಯಲ್ ಲ್ಯಾಂಡ್‌ಗೆ ಈ ಲೋನ್ ಸಿಗಲ್ಲ.

ಇದನ್ನೂ ಓದಿ: ಕಾರ್ ಇನ್ಸೂರೆನ್ಸ್ ಎಷ್ಟು ಬಾರಿ ಕ್ಲೈಮ್ ಮಾಡಬಹುದು? 99% ಜನಕ್ಕೆ ಇದು ಗೊತ್ತಿಲ್ಲ

ಮನೆ ಕಟ್ಟೋ ಯೋಜನೆಯಿದ್ರೆ ಯಾವ ಲೋನ್?

ನೀವು ಭವಿಷ್ಯದಲ್ಲಿ ಮನೆ ಕಟ್ಟಲು ಉದ್ದೇಶಿಸುತ್ತಿದ್ದರೆ, ಹೋಮ್ ಲೋನ್ (home loan) ತೆಗೆದುಕೊಳ್ಳುವುದು ಉತ್ತಮ. ಇದು ಲ್ಯಾಂಡ್ ಹಾಗೂ ಮನೆ ಕಟ್ಟುವ ವೆಚ್ಚ ಎರಡನ್ನೂ ಕವರ್ ಮಾಡುತ್ತದೆ. ಆದರೆ ಕೇವಲ ಜಾಗವನ್ನು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್‌ಗಾಗಿ ಖರೀದಿಸುತ್ತಿದ್ದರೆ, ಲ್ಯಾಂಡ್ ಲೋನ್‌ ತಕ್ಕ ಆಯ್ಕೆ.

Want to Buy a Plot? Know How Land Purchase Loans Can Help

Related Stories