ಎಟಿಎಂನಲ್ಲಿ ನಕಲಿ ನೋಟು ಅಥವಾ ಡ್ಯಾಮೇಜ್ ನೋಟ್ ಬಂದ್ರೆ ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

Story Highlights

ಎಟಿಎಮ್ ನಲ್ಲಿ ಹಣ ಪಡೆಯಲು ಹೋದಾಗ ಅಲ್ಲಿ ನಿಮಗೆ ನಕಲಿ ನೋಟ್ ಗಳು (Fake Money) ಅಥವಾ ಡ್ಯಾಮೇಜ್ ಆಗಿರೋ ನೋಟ್ (Damage Note) ಬಂದರೆ ಏನು ಮಾಡಬೇಕು? ಇಲ್ಲಿದೆ ನೋಡಿ ಡೀಟೇಲ್ಸ್

ಈಗ ಡಿಜಿಟಲ್ ಇಂಡಿಯಾದಲ್ಲಿ ಹೆಚ್ಚಿನ ಜನರು ಯುಪಿಐ ಪೇಮೆಂಟ್ (UPI Payment) ಮಾಡುತ್ತಿದ್ದಾರೆ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಮೂಲಕ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ನಗದು ವಹಿವಾಟುಗಳ ನಡೆಯುವುದು ಕಡಿಮೆ.

ಸಣ್ಣ ಅಂಗಡಿಗೆ ಹೋದರು ಕೂಡ ಯುಪಿಐ ಸ್ಕ್ಯಾನರ್ ಗಳು (UPI Scanner) ಲಭ್ಯ ಇರುವುದನ್ನು ನಾವು ನೋಡಬಹುದು. ಜನರು ಕೂಡ ಸುಲಭವಾಗಿ ತಮ್ಮ ಫೋನ್ ಬಳಕೆ ಮಾಡಿ, ಯುಪಿಐ ಮೂಲಕ ಹಣವನ್ನು ವರ್ಗಾವಣೆ ಮಾಡಿಬಿಡುತ್ತಾರೆ.

ಆದರೆ ಕೆಲವು ಸಂದರ್ಭಗಳಲ್ಲಿ ನಾವು ಕ್ಯಾಶ್ ಮೂಲಕವೇ ವ್ಯವಹಾರ ಮಾಡಬೇಕಾಗುತ್ತದೆ. ಆ ರೀತಿ ಆದಾಗ ಜನರು ಹಣವನ್ನು ವಿತ್ ಡ್ರಾ ಮಾಡಲು ATM ಗೆ ಬರುತ್ತಾರೆ. ಆದರೆ ಎಟಿಎಮ್ ನಲ್ಲಿ ಹಣ ಪಡೆಯಲು ಹೋದಾಗ ಅಲ್ಲಿ ನಿಮಗೆ ನಕಲಿ ನೋಟ್ ಗಳು (Fake Money) ಅಥವಾ ಡ್ಯಾಮೇಜ್ ಆಗಿರೋ ನೋಟ್ (Damage Note) ಬಂದರೆ ಏನು ಮಾಡಬೇಕು?

ಈ ಗುಲಾಬಿ ಬಣ್ಣದ 20 ರೂಪಾಯಿ ನೋಟ್ ನಿಮ್ಮತ್ರ ಇದ್ರೆ 5 ಲಕ್ಷ ನಿಮ್ಮದಾಗಿಸಿಕೊಳ್ಳಿ! ಇಲ್ಲಿದೆ ಡೀಟೇಲ್ಸ್

ಇದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಈ ಕೆಲವು ಕ್ರಮಗಳನ್ನು ಅನುಸರಿಸಿ, ನಿಮ್ಮ ಹಣವನ್ನು ಸರಿಯಾಗಿ ವಾಪಸ್ ಪಡೆಯಬಹುದು.

ನಮ್ಮ ದೇಶದಲ್ಲಿ ಆನ್ಲೈನ್ ಪೇಮೆಂಟ್ ಗಳು ಜಾಸ್ತಿ ಇದ್ದರೂ ಸಹ ನಗದು ವರ್ಗಾವಣೆ ಕೂಡ ಅದೇ ರೀತಿಯಲ್ಲಿ ನಡೆಯುತ್ತಿದೆ. ಕ್ಯಾಶ್ ಗಾಗಿ ಎಟಿಎಂ ಗೆ ಹೋಗುತ್ತೇವೆ. ಭಾರತದಲ್ಲಿ 30 ಲಕ್ಷ ಕೋಟಿ ಮೊತ್ತದ ಕ್ಯಾಶ್ ವ್ಯವಹಾರ ನಡೆಯುವಾಗ ಕೆಲವೊಮ್ಮೆ ಎಟಿಎಂ ನಲ್ಲಿ ನಕಲಿ ನೋಟ್ ಅಥವಾ ಹರಿದಿರುವ ನೋಟ್ ಬರಬಹುದು. ಇಂಥ ಘಟನೆಗಳು ಕೂಡ ನಡೆದಿದೆ. ಒಂದು ವೇಳೆ ನಿಮಗೂ ಈ ರೀತಿ ಆದರೆ, ಗಾಬರಿಯಾಗದೆ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.

ನಿಮ್ಮ ಹಣ ಡಬಲ್ ಮಾಡೋ ಟಾಪ್ 6 ಪೋಸ್ಟ್ ಆಫೀಸ್ ಯೋಜನೆಗಳಿವು! ಒಂದಕ್ಕಿಂತ ಒಂದು ಬೆಸ್ಟ್

torn note comes out of an Bank ATMಎಟಿಎಂ ನಲ್ಲಿ ಕ್ಯಾಶ್ ವಿತ್ ಡ್ರಾ (Cash Withdraw) ಮಾಡುವಾಗ ನಕಲಿ ನೋಟ್ ಬಂದಿದೆ ಅನ್ನಿಸಿದರೆ, ತಕ್ಷಣವೇ ಆ ನೋಟ್ ಅನ್ನು ಎಟಿಎಂ ಒಳಗಿರುವ ಸಿಸಿಟಿವಿ ಕ್ಯಾಮೆರಾಗೆ ನೀಟ್ ಆಗಿ ತೋರಿಸಿ, ಆಗ ಆ ಕ್ಯಾಮೆರಾ ನೋಟ್ ಬಂದಿರುವುದು ಎಟಿಎಂ ಇಂದ ರಿಜಿಸ್ಟರ್ ಮಾಡಿಕೊಳ್ಳುತ್ತದೆ.

ಬಳಿಕ ಆ ಎಟಿಎಂ ನಲ್ಲಿ ನಡೆದ ಹಣದ ವಹಿವಾಟಿನ ಒಂದು ಫೋಟೋವನ್ನು ತೆಗೆದು ಇಟ್ಟುಕೊಳ್ಳಿ ಇದರಿಂದ ನೀವು ನಿಮ್ಮ ಹಣವನ್ನು ಮತ್ತೆ ವಾಪಸ್ ಪಡೆದುಕೊಳ್ಳಬಹುದು..

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಸಾಲ! ಇಂದೇ ಅಪ್ಲೈ ಮಾಡಿ

ಇದಿಷ್ಟು ಮುಗಿದ ನಂತರ ಎಟಿಎಂ ರಶೀದಿ ಮತ್ತು ನಕಲಿ ನೋಟ್ ಇವೆರಡನ್ನೂ ತೆಗೆದುಕೊಂಡು ಬ್ಯಾಂಕ್ ಗೆ (Bank) ಹೋಗಿ. ಆಗಿರುವುದನ್ನು ತಿಳಿಸಿದರೆ, ಅದಕ್ಕಾಗಿ ಒಂದು ಫಾರ್ಮ್ ಕೊಡಲಾಗುತ್ತದೆ.

ಆ ಫಾರ್ಮ್ ಅನ್ನು ಫಿಲ್ ಮಾಡಿ, ಅದರ ಜೊತೆಗೆ ನಕಲಿ ನೋಟ್ ಮತ್ತು ಎಟಿಎಂ ರಿಸಿಪ್ಟ್ ಎರಡನ್ನು ಕೂಡ ಬ್ಯಾಂಕ್ ಗೆ ನೀಡಿದರೆ, ಅವರು ನೋಟ್ ಅನ್ನು ಪರಿಶೀಲಿಸಿ, ಅದನ್ನು ಹಿಂಪಡೆದು, ಸರಿಯಾದ ಮೊತ್ತವನ್ನು ಒರಿಜಿನಲ್ ಹಣವನ್ನು ನಿಮಗೆ ನೀಡುತ್ತಾರೆ.

What to do if you find a fake or damaged note in an Bank ATM

Related Stories